ವಿಶ್ವಕಪ್ ಗೆದ್ದ ತಂಡ ಗೆಲ್ಲುವ ಒಟ್ಟು ಮೊತ್ತ ಎಷ್ಟು? ಭಾರತ ಈಗಾಗಲೇ ಗೆದ್ದಿರುವುದು ಎಷ್ಟು ಕೋಟಿ ?
ICC Cricket World Cup 2023 Semifinal: ಐಸಿಸಿ ಕ್ರಿಕೆಟ್ ವಿಶ್ವಕಪ್ ನ ಮೊದಲ ಸೆಮಿಫೈನಲ್ ನಾಳೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. ಪಂದ್ಯಾವಳಿಗಾಗಿ ಒಟ್ಟಾರೆ 83 ಕೋಟಿ ರೂ ( $10 ಮಿಲಿಯನ್) ಘೋಷಿಸಲಾಗಿದೆ.
ICC Cricket World Cup 2023 Semifinal : ಐಸಿಸಿ ಕ್ರಿಕೆಟ್ ವಿಶ್ವಕಪ್ ನ ಮೊದಲ ಸೆಮಿಫೈನಲ್ ನಾಳೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯ ಆತಿಥೇಯ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿದೆ. ಗುರುವಾರ ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆಯಲಿರುವ ಎರಡನೇ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಮಧ್ಯೆ ಹಣಾಹಣಿ ನಡೆಯಲಿದೆ.
ಟೀಮ್ ಇಂಡಿಯಾ 2023ರ ವಿಶ್ವಕಪ್‌ನಲ್ಲಿ ಎಲ್ಲಾ ಒಂಭತ್ತು ಪಂದ್ಯಗಳನ್ನು ಸುಲಭವಾಗಿ ಗೆದ್ದ ಏಕೈಕ ತಂಡವಾಗಿದೆ. ಶನಿವಾರ ಬೆಂಗಳೂರಿನಲ್ಲಿ ನಡೆದ ತಮ್ಮ ಅಂತಿಮ ಲೀಗ್ ಹಣಾಹಣಿಯಲ್ಲಿ ರೋಹಿತ್ ಶರ್ಮಾ ಪಡೆ ನೆದರ್ಲೆಂಡ್ಸ್ ತಂಡವನ್ನು 160 ರನ್‌ಗಳಿಂದ ಸೋಲಿಸಿ ಸತತ ಒಂಭತ್ತನೇ ಗೆಲುವನ್ನು ದಾಖಲಿಸಿಕೊಂಡಿತು.
ಇದನ್ನೂ ಓದಿ : ವಿಶ್ವಕಪ್ ಸೆಮೀಸ್‌ನಲ್ಲಿ ಭಾರತಕ್ಕೆ ಸಿಹಿಗಿಂತ ಕಹಿಯೇ ಜಾಸ್ತಿ..! ಅಂಕಿ ಅಂಶ ಇಲ್ಲಿದೆ
ಮತ್ತೊಂದೆಡೆ, ನ್ಯೂಜಿಲೆಂಡ್, ಶ್ರೀಲಂಕಾ ವಿರುದ್ಧ ಜಯಗಳಿಸುವುದರೊಂದಿಗೆ ಸೆಮಿಫೈನಲ್‌ಗೆ ಅರ್ಹತೆ ಪಡೆದ ಅಂತಿಮ ತಂಡವಾಗಿ ಹೊರಹೊಮ್ಮಿತು. ದಕ್ಷಿಣ ಆಫ್ರಿಕಾ ತನ್ನ ಒಂಭತ್ತು ಪಂದ್ಯಗಳಲ್ಲಿ ಏಳನ್ನು ಗೆದ್ದು ಅರ್ಹತೆ ಪಡೆದ ಎರಡನೇ ತಂಡವಾದರೆ, ಆಸ್ಟ್ರೇಲಿಯಾ ತನ್ನ ಆರಂಭಿಕ ಪಂದ್ಯಗಳಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸೋಲುಂಡದ್ದು ಬಿಟ್ಟರೆ ಉಳಿದ ಏಳರಲ್ಲಿ ಗೆದ್ದು 14 ಅಂಕಗಳೊಂದಿಗೆ ಸೆಮಿಸ್ ಪ್ರವೇಶಿಸಿದೆ.
ಗೆದ್ದವರಿಗೆ ಸಿಗುವುದು ಎಷ್ಟು ಹಣ :
ಪಂದ್ಯಾವಳಿಗಾಗಿ ಒಟ್ಟಾರೆ 83 ಕೋಟಿ ರೂ ( $10 ಮಿಲಿಯನ್) ಘೋಷಿಸಲಾಗಿದೆ. ಪಂದ್ಯಾವಳಿಯ ವಿಜೇತರು 33 ಕೋಟಿ ($ 4 ಮಿಲಿಯನ್), ರನ್ನರ್ ಅಪ್ 16.5 ಕೋಟಿ ($ 2 ಮಿಲಿಯನ್) ಗೆಲ್ಲುತ್ತಾರೆ. ಪ್ರತಿ ತಂಡ ಹಂತದ ಗೆಲುವಿಗಾಗಿ 33 ಲಕ್ಷ ($40,000) ಪಡೆಯುತ್ತವೆ. ಇದರರ್ಥ 2023 ರ ವಿಶ್ವಕಪ್‌ನಲ್ಲಿ ಸತತ ಒಂಭತ್ತು ಪಂದ್ಯಗಳನ್ನು ಗೆದ್ದಿರುವ ಟೀಮ್ ಇಂಡಿಯಾ ಈಗಾಗಲೇ ಸುಮಾರು 29 ಕೋಟಿ ರೂಪಾಯಿಗಳನ್ನು ಗೆದ್ದಿದೆ.
ಇದನ್ನೂ ಓದಿ : ಮಧ್ಯರಾತ್ರಿ ಯಾರಿಗೂ ತಿಳಿಯಂದಂತೆ ರಸ್ತೆ ಬದಿ ಮಲಗಿದ್ದವರಿಗೆ ಗರಿ ಗರಿ ನೋಟು ಹಚಿದ ಕ್ರಿಕೆಟರ್ ! ಇಲ್ಲಿದೆ ವಿಡಿಯೋ
ICC ಕ್ರಿಕೆಟ್ ವಿಶ್ವಕಪ್ 2023 ಲೈವ್ ಸ್ಟ್ರೀಮಿಂಗ್ ಅನ್ನು ಉಚಿತವಾಗಿ ವೀಕ್ಷಿಸುವುದು ಹೇಗೆ ? :
ICC ಕ್ರಿಕೆಟ್ ವಿಶ್ವಕಪ್ 2023 ಸೆಮಿಫೈನಲ್‌ಗಳು ಮೊಬೈಲ್ ಸಾಧನಗಳಲ್ಲಿ ಡಿಸ್ನಿ+ ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಲೈವ್ ಸ್ಟ್ರೀಮಿಂಗ್‌ಗೆ ಲಭ್ಯವಿರುತ್ತವೆ. ಲೈವ್‌ಸ್ಟ್ರೀಮಿಂಗ್ ಡಿಸ್ನಿ+ ಹಾಟ್‌ಸ್ಟಾರ್ ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ನಲ್ಲಿ ಎಲ್ಲಾ ಸಾಧನಗಳಲ್ಲಿ, ಟಿವಿ ಮತ್ತು ಆನ್‌ಲೈನ್‌ನಲ್ಲಿ ಚಂದಾದಾರಿಕೆಯ ಆಧಾರದ ಮೇಲೆ ಉಚಿತವಾಗಿ ವೀಕ್ಷಿಸಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ