Glenn Maxwell: 40 ವರ್ಷಗಳ ಹಿಂದೆ 1983ರಲ್ಲಿ ಕಪಿಲ್ ದೇವ್ ಏಕಾಂಗಿಯಾಗಿ ಜಿಂಬಾಬ್ವೆ ವಿರುದ್ಧ 175 ರನ್ ಗಳಿಸಿ ಪಂದ್ಯವನ್ನು ಗೆದ್ದಾಗ ಅದು ಎಂತಹ ದೃಶ್ಯವಾಗಿರಬಹುದು. ಇದೊಂದು ಕ್ರಿಕೆಟ್ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿದೆ. ಆದರೆ, ನೋವಿನ ಸಂಗತಿಯೆಂದರೆ  ಪ್ರಸಾರಕರ ಮುಷ್ಕರದಿಂದಾಗಿ ಈ ಪಂದ್ಯವನ್ನು ಟಿವಿಯಲ್ಲಿ ಪ್ರಸಾರ ಮಾಡಿರಲಿಲ್ಲ. ಹಾಗಾಗಿ, ಇದರ ವಿಡಿಯೋ ತುಣುಕುಗಳು ಲಭ್ಯವಿಲ್ಲ.  ಆದರೆ, ಸುಮಾರು ನಾಲ್ಕು ದಶಕಗಳ ಬಳಿಕ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅಫ್ಘಾನಿಸ್ತಾನದ ವಿರುದ್ಧ 201 ರನ್‌ಗಳ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿ ಕಪಿಲ್ ದೇವ್ ಅವರ ಐತಿಹಾಸಿಕ ಇನ್ನಿಂಗ್ಸ್ ಅನ್ನು ನೆನಪಿಸಿದ್ದಾರೆ. 


COMMERCIAL BREAK
SCROLL TO CONTINUE READING

ಹೌದು, ನೆನ್ನೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿಆಸ್ಟ್ರೇಲಿಯ ತಂಡವು 91 ರನ್‌ಗಳಿಗೆ ಏಳು ವಿಕೆಟ್‌ಗಳನ್ನು ಕಳೆದುಕೊಂಡಾಗ ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ಗೆಲುವು ಸಾಧಿಸಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಕಾಂಗರೂ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್  ಗೆ ಬೆಂಬಲವಾಗಿ ಬಂದ ಗ್ಲೆನ್ ಮ್ಯಾಕ್ಸ್‌ವೆಲ್ ಏಕಾಂಗಿಯಾಗಿ ಇತಿಹಾಸ ಸೃಷ್ಟಿಸಿದರು. ಮ್ಯಾಕ್ಸ್‌ವೆಲ್ ಅವರ ಈ ಇನ್ನಿಂಗ್ಸ್ ಕ್ರಿಕೆಟ್ ಪ್ರಿಯರಿಗೆ 40 ವರ್ಷಗಳ ಹಿಂದಿನ ಕಪಿಲ್ ದೇವ್ ಅವರ 175 ರನ್‌ಗಳ ಇನ್ನಿಂಗ್ಸ್ ಅನ್ನು ನೆನಪಿಸಿತು. ಇದಕ್ಕೆ ಮುಖ್ಯ ಕಾರಣ ಎರಡೂ ಪಂದ್ಯದಲ್ಲಿ ಪರಿಸ್ಥಿತಿ ಹೆಚ್ಚು ಕಡಿಮೆ ಒಂದೇ ರೀತಿ ಆಗಿತ್ತು. 


ವಾಸ್ತವವಾಗಿ, ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ 7 ವಿಕೆಟ್ ನಷ್ಟಕ್ಕೆ 91 ರನ್ ಗಳಿಸಿ ಸೋಲಿನ ಅಂಚಿನಲ್ಲಿತ್ತು. ಈ ಸಂದರ್ಭದಲ್ಲಿ ತಂಡಕ್ಕೆ ಆಸರೆಯಾಗಿ ನಿಂತ  ಗ್ಲೆನ್ ಮ್ಯಾಕ್ಸ್‌ವೆಲ್ ಏಕಾಂಗಿಯಾಗಿ 201 ರನ್ ಗಳಿಸಿ  7 ವಿಕೆಟ್ ನಷ್ಟಕ್ಕೆ 293 ರನ್ ಗಳ ಗುರಿ ಮುಟ್ಟುವಲ್ಲಿ ಸಹಕಾರಿ ಆದರು. ಇದರೊಂದಿಗೆ ವಿಶ್ವಕಪ್‌ನಲ್ಲಿ ಮಾತ್ರವಲ್ಲದೆ ಏಕದಿನ ಕ್ರಿಕೆಟ್‌ನ ಇತಿಹಾಸದಲ್ಲಿಯೇ ಶ್ರೇಷ್ಠ ಇನ್ನಿಂಗ್ಸ್ ಆಡಿದ ಆಟಗಾರ ಎಂಬ ಕೀರ್ತಿಗೂ ಭಾಜನರಾದರು. 


ಇದನ್ನೂ ಓದಿ- ಪಡೆದದ್ದು ಕೇವಲ ಒಂದೇ ವಿಕೆಟ್ ! ಆದರೆ ಬರೆದದ್ದು ಮಹಾನ್ ದಾಖಲೆ ! ಯಾರು ಆ ಆಟಗಾರ ?


ನಾಲ್ಕು ದಶಕಗಳ ಹಿಂದೆಯೇ ಅತಿದೊಡ್ಡ ಇನ್ನಿಂಗ್ಸ್ ಆಡಿದ್ದ ಕಪಿಲ್ ದೇವ್: 
40 ವರ್ಷಗಳ ಹಿಂದೆ 1983ರ ವಿಶ್ವಕಪ್‌ನಲ್ಲಿ ಜಿಂಬಾಬ್ವೆ ವಿರುದ್ಧ ಕಪಿಲ್ ದೇವ್ ಅವರು ಔಟಾಗದೆ 175 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಆ ಸಮಯದಲ್ಲಿ, ಇದು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ಬ್ಯಾಟ್ಸ್‌ಮನ್‌ ಮಾಡದ ಅತಿದೊಡ್ಡ ದಾಖಲೆಯಾಗಿತ್ತು. ಈ ಪಂದ್ಯದಲ್ಲಿ  ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಕೇವಲ 17 ರನ್‌ಗಳಿಗೆ  5 ವಿಕೆಟ್‌ಗಳು  ಪತನಗೊಂಡಿದ್ದವು. 


ಸುನಿಲ್ ಗವಾಸ್ಕರ್ ಮತ್ತು ಕೆ. ಶ್ರೀಕಾಂತ್ ಅವರ ಆರಂಭಿಕ ಜೋಡಿ ಯಾವುದೇ ರನ್ ಗಳಿಸದೇ ಪೆವಿಲಿಯನ್ ಗೆ ಮರಳಿದ್ದರೆ, ನಂತರ ಮೊಹಿಂದರ್ ಅಮರನಾಥ್ (5), ಸಂದೀಪ್ ಪಾಟೀಲ್ (1) ಮತ್ತು ಯಶಪಾಲ್ ಶರ್ಮಾ (9) ವಿಕೆಟ್ ಕಳೆದುಕೊಂಡರು. ಭಾರತ 5 ವಿಕೆಟ್ ಕಳೆದುಕೊಂಡ ಸಂದರ್ಭದಲ್ಲಿ ಮೈದಾನಕ್ಕೆ ಬರಬೇಕಿದ್ದ ಕಪಿಲ್ ದೇವ್ ಸ್ನಾನ ಮಾಡುತ್ತಿದ್ದರಂತೆ. ಬಳಿಕ ಬ್ಯಾಟ್ ಹಿಡಿದು ಅಖಾಡಕ್ಕಿಳಿದ ಕಪಿಲ್ ದೇವ್ ಐತಿಹಾಸಿಕ ಇನ್ನಿಂಗ್ಸ್ ಆಡಿ ಇಂದಿಗೂ ಸಹ ಕ್ರಿಕೆಟ್ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ. 


ಈ ಇನ್ನಿಂಗ್ಸ್ ನಲ್ಲಿ ಕಪಿಲ್ ದೇವ್ ಮಾತ್ರ 138 ಎಸೆತಗಳಲ್ಲಿ 175 ರನ್ ಗಳಿಸಿದ್ದರು. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ 16 ಬೌಂಡರಿ ಮತ್ತು 6 ಸಿಕ್ಸರ್‌ಗಳನ್ನು ಹೊಡೆದರು.  ಭಾರತದ ಸ್ಕೋರ್ 60 ಓವರ್‌ಗಳಲ್ಲಿ 266/8 ಆಗಿತ್ತು.  ನಂತರ ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ 235 ರನ್‌ಗಳಿಗೆ ಆಲೌಟ್ ಆಗುವ ಮೂಲಕ  31 ರನ್‌ಗಳಿಂದ ಪಂದ್ಯ ಕಳೆದುಕೊಂಡರೆ, ಭಾರತ ವಿಶ್ವಕಪ್‌ನ ಚಾಂಪಿಯನ್ ಆಗಿ ಹೊರಹೊಮ್ಮಿತು. 


ಇದನ್ನೂ ಓದಿ- ಈತನ ಸಾಮರ್ಥ್ಯ ಅರಿಯುವಲ್ಲಿ ಎಡವಿದ್ದರು ರೋಹಿತ್ ಶರ್ಮಾ! ವಿಶ್ವಕಪ್ ನಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದು ಇದೇ ಆಟಗಾರ!


ಇದೀಗ ನಿನ್ನೆ ವಾಂಖೆಡೆ ಸ್ಟೇಡಿಯಂನಲ್ಲಿ ಅಫ್ಘಾನಿಸ್ತಾನದ ವಿರುದ್ದ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಈ ಇನ್ನಿಂಗ್ಸ್  ಕೂಡ 1983ರ ಪಂದ್ಯದಂತೆಯೇ ಇತ್ತು. ಈ ಪಂದ್ಯದಲ್ಲಿ  ಗ್ಲೆನ್ ಮ್ಯಾಕ್ಸ್‌ವೆಲ್  128 ಎಸೆತಗಳಲ್ಲಿ 21 ಬೌಂಡರಿ ಹಾಗೂ 10 ಸಿಕ್ಸರ್‌ಗಳ ನೆರವಿನಿಂದ 201 ರನ್ ಗಳಿಸಿದರು. ಸ್ನಾಯು ಸೆಳೆತದಿಂದ ಬಳಲುತ್ತಿದ್ದ ಮ್ಯಾಕ್ಸ್‌ವೆಲ್ ಇನ್ನಿಂಗ್ಸ್‌ನ ಮಧ್ಯದಲ್ಲಿ  ಮ್ಯಾಕ್ಸ್‌ವೆಲ್ ಪಂದ್ಯದಿಂದ ಹೊರನಡೆಯಬಹುದಾದ ಸಂದರ್ಭ ಬಂತಾದರೂ ಅವರು ದೃಢವಾಗಿ ನಿಂತು ತಂದಕ್ಕಾಗಿ ಆಡಿದರು.  ಅವರ ಈ ಇನ್ನಿಂಗ್ಸ್‌ನಲ್ಲಿ ಪ್ಯಾಟ್ ಕಮಿನ್ಸ್ ಅವರ ಕೊಡುಗೆಯನ್ನು ಸಹ ನೆನಪಿಸಿಕೊಳ್ಳಬೇಕು.  ಅವರು 68 ಎಸೆತಗಳಲ್ಲಿ ಕೇವಲ 12 ರನ್ ಗಳಿಸಿರಬಹುದು ಆದರೆ ಮ್ಯಾಕ್ಸ್‌ವೆಲ್ ಸರಿಯಾದ ಸಮಯದಲ್ಲಿ ಸ್ಟ್ರೈಕ್‌ನಲ್ಲಿ ನಿಂತಿರುವುದನ್ನು ಅವರು ಖಚಿತಪಡಿಸಿಕೊಳ್ಳುತ್ತಿದ್ದರು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.