Yuvraj Singh and MS Dhoni Friendship: ಮಹೇಂದ್ರ ಸಿಂಗ್ ಧೋನಿ ಜೊತೆಗಿನ ಸ್ನೇಹಕ್ಕೆ ಸಂಬಂಧಿಸಿದಂತೆ ಯುವರಾಜ್ ಸಿಂಗ್ ಸಂದರ್ಶನವೊಂದರಲ್ಲಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ. “ನಾನು ಮತ್ತು ಧೋನಿ ಒಟ್ಟಿಗೆ ಕ್ರಿಕೆಟ್ ಆಡಿದ್ದರಿಂದ ಸ್ನೇಹಿತರಾಗಿದ್ದೇವೆ ಆದರೆ ಎಂದಿಗೂ ಆತ್ಮೀಯ ಸ್ನೇಹಿತರಾಗಿರಲಿಲ್ಲ” ಎಂದು ಹೇಳಿದ್ದಾರೆ. ಈ ವೇಳೆ ಯುವರಾಜ್ ಅವರು ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಧೋನಿ ಅವರೊಂದಿಗೆ ಕಳೆದ ಸುದೀರ್ಘ ಸಮಯದ ಬಗ್ಗೆಯೂ ವಿವರವಾಗಿ ಮಾತನಾಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ಯಾರಿಂದಲೂ ಬ್ರೇಕ್ ಮಾಡಲು ಸಾಧ್ಯವಾಗದ ವಿರಾಟ್ ಕೊಹ್ಲಿಯ ವಿಶ್ವದಾಖಲೆಗಳಿವು


ಟಿಆರ್‌’ಎಸ್ ಕ್ಲಿಪ್‌’ನಲ್ಲಿ ನಡೆದ ಚಾಟ್ ಶೋನಲ್ಲಿ ಯುವಿ ಮಾತನಾಡಿದ್ದು, “ನಾನು ಮತ್ತು ಮಹಿ ಆಪ್ತ ಸ್ನೇಹಿತರಲ್ಲ. ನಾವು ಒಟ್ಟಿಗೆ ಕ್ರಿಕೆಟ್ ಆಡಿದ್ದರಿಂದ ಸ್ನೇಹಿತರಾಗಿದ್ದೇವೆ. ಆದರೆ ಮಹಿ ಮತ್ತು ನಾನು ವಿಭಿನ್ನ ಜೀವನಶೈಲಿಯನ್ನು ಹೊಂದಿದ್ದೇವೆ. ಆದುದರಿಂದಲೇ ನಮ್ಮಲ್ಲಿ ಆತ್ಮೀಯ ಸ್ನೇಹ ಇರಲಿಲ್ಲ. ಒಂದು ತಂಡದ ಸದಸ್ಯರು ಬೆಸ್ಟ್ ಫ್ರೆಂಡ್ ಆಗಿರಬೇಕೆಂದೇನಿಲ್ಲ. ಪ್ರತಿಯೊಬ್ಬರ ಜೀವನ ವಿಧಾನವೂ ವಿಭಿನ್ನವಾಗಿರುತ್ತದೆ” ಎಂದಿದ್ದಾರೆ.


“ ನಾನು ಮತ್ತು ಮಹಿ ಮೈದಾನಕ್ಕೆ ಬಂದಾಗಲೆಲ್ಲಾ ದೇಶಕ್ಕಾಗಿ 100% ನೀಡುತ್ತಿದ್ದೆವು. ಅವರು ನಾಯಕ ಮತ್ತು ನಾನು ಉಪನಾಯಕನಾಗಿದ್ದೆ. ನಮ್ಮ ನಿರ್ಧಾರಗಳಲ್ಲಿ ಭಿನ್ನಾಭಿಪ್ರಾಯಗಳಿದ್ದವು. ಅವರ ಕೆಲವು ನಿರ್ಧಾರಗಳು ನನಗೆ ಇಷ್ಟವಾಗದಂತಿದ್ದವು. ಅಷ್ಟೇ ಅಲ್ಲ, ಇನ್ನೂ ಕೆಲವು ತಿಳುವಳಿಕೆಗಳನ್ನು ಮೀರಿ ಇರುತ್ತಿತ್ತು. ಇದು ಪ್ರತಿ ತಂಡದಲ್ಲೂ ಇರುವ ಪರಿಸ್ಥಿತಿ” ಎಂದು ಹೇಳಿದ್ದಾರೆ.  


ಯುವರಾಜ್ ಧೋನಿಯಿಂದ ವೃತ್ತಿಜೀವನದ ಬಗ್ಗೆ ಸಲಹೆ ಪಡೆದಾಗ..


“ನಾನು ನನ್ನ ವೃತ್ತಿಜೀವನದ ಕೊನೆಯ ಹಂತದಲ್ಲಿದ್ದಾಗ ಮತ್ತು ನನ್ನ ಭವಿಷ್ಯದ ಬಗ್ಗೆ ನನಗೆ ಸ್ಪಷ್ಟತೆ ಇಲ್ಲದಿದ್ದಾಗ, ನಾನು ಧೋನಿ ಸಲಹೆಯನ್ನು ಕೇಳಿದ್ದೆ. ಸದ್ಯಕ್ಕೆ ಆಯ್ಕೆ ಸಮಿತಿ ನಿಮ್ಮ ಬಗ್ಗೆ ಯೋಚಿಸುತ್ತಿಲ್ಲ ಎಂದು ಇದೇ ವ್ಯಕ್ತಿ ಹೇಳಿದ್ದರು. ವಾಸ್ತವ ಪರಿಸ್ಥಿತಿ ಮತ್ತು ಏನಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಬೇಕು ಎಂಬುದು ನನ್ನ ನಿಲುವಾಗಿತ್ತು. ಇದು 2019 ರ ವಿಶ್ವಕಪ್‌ಗೆ ಸ್ವಲ್ಪ ಮೊದಲು ಮತ್ತು ಇದು ನಿಜ” ಎಂಬ ಶಾಕಿಂಗ್ ಸಂಗತಿ ಬಿಚ್ಚಿಟ್ಟಿದ್ದಾರೆ.


ಇದನ್ನೂ ಓದಿ: BBK 10: ಬಿಗ್’ಬಾಸ್ ಮನೆಯಿಂದ ಈ ಬಾರಿ ಹೊರಬಿದ್ದ ಸ್ಪರ್ಧಿ ಯಾರು ಗೊತ್ತೇ?


“ಅವರೂ ನಿವೃತ್ತನಾಗಿದ್ದಾರೆ. ನಾನು ಕೂಡ ನಿವೃತ್ತಿಯಾಗಿದ್ದೇನೆ. ನಾವು ಭೇಟಿಯಾದಾಗ, ಸ್ನೇಹಿತರಂತೆ ಇರುತ್ತೇವೆ. ಇತ್ತೀಚೆಗೆ ಒಟ್ಟಿಗೆ ಜಾಹೀರಾತನ್ನೂ ಚಿತ್ರೀಕರಿಸಿದ್ದೇವೆ. ಈ ಸಮಯದಲ್ಲಿ ನಾವು ಹಳೆಯ ವಿಷಯಗಳನ್ನು ನೆನಪಿಸಿಕೊಳ್ಳುತ್ತಾ ತುಂಬಾ ಖುಷಿಪಟ್ಟೆವು” ಎಂದು ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.