ಇಂದು ಭಾರತ-ಕಿವೀಸ್ ಮುಖಾಮುಖಿ : 2019ರ ಸೋಲಿನ ಸೇಡು ತೀರಿಸಿಕೊಳ್ಳಲು ಟೀಂ ಇಂಡಿಯಾ ವೇಟಿಂಗ್
India vs New Zealand Updates : 2019ರ ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ಟೀಂ ಇಂಡಿಯಾವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದ ಕಿವೀಸ್ ವಿರುದ್ದ ಸೇಡು ತೀರಿಸಿಕೊಳ್ಳು ಭಾರತ ತಂಡ ಕಾಯುತ್ತಿದೆ. ವಿಶ್ವಕಪ್ 2023ರ 21ನೇ ಪಂದ್ಯ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಇಂದು ನಡೆಯಲಿದೆ.
India vs New Zealand today match : ವಿಶ್ವಕಪ್ 2023ರ 21ನೇ ಪಂದ್ಯ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಇಂದು ನಡೆಯಲಿದೆ. ಧರ್ಮಶಾಲಾ ಕ್ರೀಡಾಂಗಣ ರೋಚಕ ಪಂದ್ಯಕ್ಕೆ ಸಾಕ್ಷಿಯಾಗಲಿದೆ. 2019ರ ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ಟೀಂ ಇಂಡಿಯಾವನ್ನು ಸೋಲಿಸಿ ಕಿವೀಸ್ ಫೈನಲ್ ಪ್ರವೇಶಿಸಿತ್ತು. ಈಗ ಆ ಸೋಲಿನ ಸೇಡು ತೀರಿಸಿಕೊಳ್ಳಲು ಭಾರತ ತಂಡ ಕಾಯುತ್ತಿದೆ.
ಅಂಕಪಟ್ಟಿಯಲ್ಲಿ ನಂಬರ್ ಓನ್ ಸ್ಥಾನ ಉಳಿಸಿಕೊಳ್ಳಲು ನ್ಯೂಜಿಲೆಂಡ್ ಪಣ ತೊಟ್ಟಿದ್ರೆ, ಭಾರತ ಕಿವೀಸ್ ಸೋಲಿಸಿ ಪಾರಮ್ಯ ಮೆರೆಯಲು ಸನ್ನದ್ಧವಾಗಿದೆ. ಎರಡು ತಂಡಗಳ ನಡುವೆ ಹಾವು ಏಣಿ ಆಟ ಶುರುವಾಗಿದ್ದು, ಗೆದ್ದು ನಂಬರ್ 1 ಸ್ಥಾನದಲ್ಲಿ ಮುಂದುವರಿಯಲು ರೋಹಿತ್ ಪಡೆ ರೆಡಿಯಾಗಿದೆ.
ಇದನ್ನೂ ಓದಿ:4 ರನ್’ಗೆ 2 ವಿಕೆಟ್ ಕಿತ್ತ ಕಿಲಾಡಿ! ಮಾವನ ದಾಖಲೆಯನ್ನೇ ಮುರಿದು ವಿಶ್ವದಾಖಲೆ ಬರೆದ ಸ್ಟಾರ್ ವೇಗಿ
ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾವೇ ಮೇಲುಗೈ ಸಾಧಿಸಿದೆ. ಆದರೆ ಐಸಿಸಿ ವಿಶ್ವಕಪ್‌ಗೆ ಬಂದಾಗ ಕಿವೀಸ್ ಪಡೆ ಭಾರತದ ವಿರುದ್ಧ ಕಳೆದ 20 ವರ್ಷಗಳಿಂದ ಸೋತೇ ಇಲ್ಲ ಅನ್ನೋದು ವಿಶೇಷ. ಧರ್ಮಶಾಲಾದಲ್ಲಿ ಆ ದಾಖಲೆಯನ್ನು ಈ ಬಾರಿಯಾದ್ರು ಭಾರತ ಬ್ರೇಕ್ ಮಾಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಈವರೆಗೆ ಆಡಿರುವ ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಭಾರತ 58 ಪಂದ್ಯಗಳನ್ನು ಗೆದ್ದಿದ್ದರೆ, ನ್ಯೂಜಿಲೆಂಡ್ 50 ಪಂದ್ಯಗಳಲ್ಲಿ ಜಯವನ್ನು ತನ್ನದಾಗಿಸಿಕೊಂಡಿದೆ. ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ವಿರುದ್ಧ ನ್ಯೂಜಿಲೆಂಡ್ 5 ಪಂದ್ಯಗಳನ್ನು ಗೆದ್ದಿದೆ. ಆದರೆ ಭಾರತ 3ರಲ್ಲಿ ಜಯ ಕಂಡಿದೆ. 2003ರ ಬಳಿಕ ನ್ಯೂಜಿಲೆಂಡ್ ವಿರುದ್ಧ ಭಾರತ ಗೆದ್ದೇ ಇಲ್ಲ. ಹೀಗಾಗಿ 20 ವರ್ಷಗಳ ಬಳಿಕ ಕಿವೀಸ್ ಪಡೆಯನ್ನ ಸೋಲಿಸಲೇಬೇಕೆಂದು ರೋಹಿತ್ ಅಂಡ್ ಟೀಂ ಪಣತೊಟ್ಟಿದೆ.
ಇದನ್ನೂ ಓದಿ: “ಕಸಿದುಕೊಂಡಿದ್ದೇನೆ ಕ್ಷಮಿಸು…”-ಶತಕ ಸಿಡಿಸಿದ ಬಳಿಕ ಜಡೇಜಾ ಬಳಿಕ ಕ್ಷಮೆ ಕೇಳಿದ ಕೊಹ್ಲಿ! ಕಾರಣ…?
2019ರ ವಿಶ್ವಕಪ್ ಸೆಮಿ ಫೈನಲ್ ಸೋಲಿನ ನಂತರ ಟೀಂ ಇಂಡಿಯಾ, ಮೊದಲ ವಿಶ್ವಕಪ್ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲೂ ಕಿವೀಸ್ ವಿರುದ್ಧ ಪರಾಭವಗೊಂಡಿದೆ. ಹಿಂದಿನ ಟೂರ್ನಿಗಳಿಗೆ ಹೋಲಿಸಿದರೆ ಈ ಬಾರಿಯ ಐಸಿಸಿ ವಿಶ್ವಕಪ್‌ನಲ್ಲಿ ರೋಹಿತ್ ಪಡೆ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಬ್ಯಾಟಿಂಗ್, ಬೌಲಿಂಗ್ ಫೀಲ್ಡಿಂಗಲ್ಲಿ ಒಗ್ಗಟ್ಟಿನ ಪ್ರದರ್ಶನ ನೀಡುತ್ತಿದ್ದು, ಈಗಾಗಲೇ ಆಡಿರುವ 4 ಪಂದ್ಯಗಳನ್ನು ಗೆದ್ದುಕೊಂಡಿದೆ. ಇತ್ತ ಕಿವೀಸ್ ಸಹ ಅಜೇಯ ಓಟ ಮುಂದುವರೆಸಲು ಪಣ ತೊಟ್ಟಿದ್ದು, ವಿಜಯಲಕ್ಷ್ಮೀ ಯಾರಿಗೆ ಒಲಿಯುತ್ತಾಳೆ ಎಂಬುದನ್ನು ಕಾದು ನೋಡಬೇಕಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.