ನವ ದೆಹಲಿ: ಅಮೆರಿಕಾದ ಅನಾಹೈಮ್ನಲ್ಲಿ ನಡೆದ ವಿಶ್ವ ವೆಟ್ಲಿಫ್ಟಿಂಗ್ ಚಾಂಪಿಯನ್ಷಿಪ್ನಲ್ಲಿ ಭಾರತದ ಮೀರಾಬಾಯಿ ಚಾನು ಚಿನ್ನದ ಪದಕ ಪಡೆದಿದ್ದಾರೆ. ಈ ಮೂಲಕ ವಿಶ್ವ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ನಲ್ಲಿ ಎರಡು ಬಾರಿ ಚಿನ್ನ ಗೆದ್ದ ಏಕೈಕ ಮಹಿಳಾ ಕ್ರೀಡಾಪಟು ಎಂಬ ಖ್ಯಾತಿಗೆ ಮೀರಾಬಾಯಿ ಚಾನು ಭಾಜನರಾಗಿದ್ದಾರೆ. 


COMMERCIAL BREAK
SCROLL TO CONTINUE READING

ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡುತ್ತಿರುವ ಚಾನು ಅವರು 48 ಕೆಜಿ ತೂಕದ ಮಹಿಳಾ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಒಟ್ಟಾರೆ 194 ಕೆಜಿ ತೂಕ ಎತ್ತುವ ಮೂಲಕ ನೂತನ ದಾಖಲೆ ಮಾಡಿದ್ದಾರೆ. ವೇದಿಕೆಯಿಂದ ತ್ರಿವರ್ಣ ಧ್ವಜವನ್ನು ನೋಡುತ್ತಿದ್ದಂತೆಯೇ ಖುಷಿಗೊಂಡ ಚಾನು, ಚಿನ್ನದ ಪದಕ ಹಿಡಿದು ಆನಂದಭಾಷ್ಪ ಸುರಿಸಿದರು. 



ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಕರ್ಣಂ ಮಲ್ಲೇಶ್ವರಿ ಸಹ 1994 ಮತ್ತು 1995ರಲ್ಲಿ ಎರಡು ಬಾರಿ ಚಿನ್ನ ಗೆದ್ದ ಸಾಧನೆ ಮಾಡಿದ್ದರು.