Womens Premier League 2024: RCB ಅಭಿಮಾನಿಗಳ ಹದಿನಾರು ವರ್ಷಗಳ ಸುದೀರ್ಘ ಕಾಯುವಿಕೆ ಕೊನೆಗೊಂಡಿದೆ. ಪುರುಷರೂ ಮಾಡದ ಸಾಧನೆಯನ್ನು ಮಹಿಳೆಯರು ಮಾಡಿ ತೋರಿಸಿದ್ದಾರೆ. ಈ ಮೂಲಕ ʼಹೆಣ್ಮಕ್ಳೆ ಸ್ಟ್ರಾಂಗು ಗುರು!ʼ ಅನ್ನೋದನ್ನು ಪ್ರೂವ್‌ ಮಾಡಿದ್ದಾರೆ. ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣಲ್ಲಿ ಭಾನುವಾರ ನಡೆದ ಮಹಿಳಾ ಪ್ರೀಮಿಯರ್‌ ಲೀಗ್‌ನ ಫೈನಲ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ RCB 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದರು. ಈ ಮೂಲಕ ಚೊಚ್ಚಲ ಟ್ರೋಫಿ ಗೆಲ್ಲುವ ಮೂಲಕ ಅಭಿಮಾನಿಗಳ ಬಹುವರ್ಷದ ಆಸೆಯನ್ನು ಮಹಿಳೆಯರು ಈಡೇರಿಸಿದ್ದಾರೆ.


COMMERCIAL BREAK
SCROLL TO CONTINUE READING

ಉತ್ತರ ಕರ್ನಾಟಕದ ಹುಡುಗಿಯ ಮಾರಕ ಬೌಲಿಂಗ್‌


ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಬ್ಯಾಟಿಂಗ್‌ ಬೆನ್ನೆಲುಬು ಮುರಿಯುವ ಮೂಲಕ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಉತ್ತರ ಕರ್ನಾಟಕದ ಹುಡುಗಿ ಶ್ರೇಯಾಂಕಾ ಪಾಟೀಲ್.‌ ಒಂದು ಹಂತದಲ್ಲಿ 64 ರನ್‌ಗಳವರೆಗೂ ಒಂದು ವಿಕೆಟ್‌ ಕಳೆದುಕೊಳ್ಳದೆ ಉತ್ತಮ ಜೊತೆಯಾಟದ ಮೂಲಕ ಬೃಹತ್‌ ಮೊತ್ತ ಪೇರಿಸುವ ಸೂಚನೆ ನೀಡಿದ್ದ ಡೆಲ್ಲಿಗೆ ಆಘಾತ ನೀಡಿದ್ದು ಸೋಫಿ ಮೊಲಿನೆಕ್ಸ್.


IPL 2024: ವಿರಾಟ್ ಕೊಹ್ಲಿ ಐಪಿಎಲ್ ಆಡಲ್ವಾ?; ಹೊರಬಿತ್ತು ಬಿಗ್‌ ಸಿಕ್ರೇಟ್!!


ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸುತ್ತಿದ್ದ ಶಫಾಲಿ ವರ್ಮಾರ ವಿಕೆಟ್‌ ತೆಗೆಯುವ ಮೂಲಕ ಸೋಫಿ ಪಂದ್ಯಕ್ಕೆ ಮಹತ್ವದ ತಿರುವು ತಂದುಕೊಟ್ಟರು. ನಂತರ ಮಾರಕ ಬೌಲಿಂಗ್‌ ಮೂಲಕ ಡೆಲ್ಲಿಗೆ ಆಘಾತ ನೀಡಿದ್ದು ಶ್ರೇಯಾಂಕಾ ಪಾಟೀಲ್.‌ 12ಕ್ಕೆ 4 ವಿಕೆಟ್‌ ಕಬಳಿಸುವ ಮೂಲಕ ಶ್ರೇಯಾಂಕಾ ಡೆಲ್ಲಿ ತಂಡವು ಅಲ್ಪಮೊತ್ತಕ್ಕೆ ಕುಸಿಯಲು ಕಾರಣವಾದರು.


ಆಶಾ ಸೋಭಾನ (14ಕ್ಕೆ 2) ಸಹ ಉತ್ತಮ ಬೌಲಿಂಗ್‌ ಮೂಲಕ RCBಗೆ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. 


ಇದನ್ನೂ ಓದಿ: IPL 2024 ಆರಂಭಕ್ಕೂ ಮುನ್ನವೇ ಮುಂಬೈ ಇಂಡಿಯನ್ಸ್‌ ತಂಡದಿಂದ ಈ ಸ್ಟಾರ್‌ ಆಟಗಾರ ಔಟ್.!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ