ಬೆಂಗಳೂರು: ಸತತ 2 ಗೆಲುವುಗಳಿಂದ ಅಭಿಮಾನಿಗಳ ಮನಗೆದ್ದಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಆಘಾತ ನೀಡಿದೆ. ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗುರುವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ನ ೭ನೇ ಪಂದ್ಯದಲ್ಲಿ RCB ವಿರುದ್ಧ ಡೆಲ್ಲಿ ತಂಡವು‌ 25 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ RCB ತಂಡದ ಹ್ಯಾಟ್ರಿಕ್‌ ಗೆಲುವಿನ ಓಟಕ್ಕೆ ಡೆಲ್ಲಿ ಬ್ರೇಕ್‌ ಹಾಕಿದೆ. ಈ ಮೂಲಕ RCB ಲೀಗ್​ನಲ್ಲಿ ತನ್ನ ಮೊದಲ ಸೋಲನ್ನು ಅನುಭವಿಸಿದೆ.


IND vs ENG: ಆಂಗ್ಲರ ವಿರುದ್ಧದ 5ನೇ ಟೆಸ್ಟ್’ಗೆ ಭಾರತ ತಂಡ ಪ್ರಕಟ: ಜಸ್ಪ್ರೀತ್ ಬುಮ್ರಾ ಕಂಬ್ಯಾಕ್… ರಾಹುಲ್ ಔಟ್


COMMERCIAL BREAK
SCROLL TO CONTINUE READING

ಬೃಹತ್‌ ಮೊತ್ತ ಪೇರಿಸಿದ ಡೆಲ್ಲಿ!


ಡೆಲ್ಲಿ ಪರ ನಾಯಕಿ ಮೆಗ್ ಲ್ಯಾನಿಂಗ್(11) ಬಹುಬೇಗನೆ ವಿಕೆಟ್‌ ಒಪ್ಪಿಸಿದರು. ಆದರೆ ಶಫಾಲಿ ವರ್ಮಾ(50) ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಇದಲ್ಲದೆ ಆಲಿಸ್ ಕ್ಯಾಪ್ಸಿ(46) ಉತ್ತಮ ಆಟವಾಡಿದರು. ಕೊನೆಯಲ್ಲಿ ಮರಿಜಾನ್ನೆ ಕಪ್(32), ಜೆಸ್ ಜೊನಾಸೆನ್ (ಅಜೇಯ 36) ಮತ್ತು ಅರುಂಧತಿ ರೆಡ್ಡಿ(ಅಜೇಯ 10) ತಂಡಕ್ಕೆ ಉತ್ತಮ ಕೊಡುಗೆ ನೀಡಿದರು. RCB ಪರ ಬೌಲಿಂಗ್‌ನಲ್ಲಿ ಸೋಫಿ ಡಿವೈನ್ ಮತ್ತು ನಾಡಿನ್ ಡಿ ಕ್ಲರ್ಕ್ ತಲಾ 2 ವಿಕೆಟ್‌ ಪಡೆದು ಮಿಂಚಿದರೆ, ಶ್ರೇಯಾಂಕಾ ಪಾಟೀಲ್ ಒಂದು ವಿಕೆಟ್‌ ಕಬಳಿಸಿದರು.


ಸ್ಮೃತಿ ಮಂಧಾನ ಏಕಾಂಗಿ ಹೋರಾಟ!


ಇನ್ನು 195 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ RCB ಪರ ನಾಯಕಿ ಸ್ಮೃತಿ ಮಂಧಾನ(74) ಏಕಾಂಗಿ ಹೋರಾಟ ನಡೆಸಿದರು. ಇನ್ನುಳಿದಂತೆ ಸಬ್ಬಿನೇನಿ ಮೇಘನಾ(36), ಸೋಫಿ ಡಿವೈನ್(23) ಮತ್ತು ರಿಚಾ ಘೋಷ್(19) ರನ್‌ ಗಳಿಸಿದರು. ಒಂದು ಕಡೆ RCBಯ ವಿಕೆಟ್‌ ಉರುಳಿದ್ದರೆ ಸ್ಮೃತಿ ಉತ್ತಮ ಆಟವಾಡಿದರು. ಆದರೆ ಯಾವ ಆಟಗಾರ್ತಿಯೂ ನಾಯಕಿ ಜೊತೆಗೆ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. ಪರಿಣಾಮ RCB ತಂಡವು ಲೀಗ್‌ನಲ್ಲಿ ಮೊದಲ ಸೋಲು ಕಾಣಬೇಕಾಯಿತು.  


ಇದನ್ನೂ ಓದಿ: ಐಪಿಎಲ್ ಆರಂಭಕ್ಕೂ ಮುನ್ನ ಲಕ್ನೋ ತಂಡದಲ್ಲಿ ಮಹತ್ವದ ಬದಲಾವಣೆ: ಹೊಸ ಉಪನಾಯಕನಾಗಿ ಈ ಆಟಗಾರ ಆಯ್ಕೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.