Wrestlers Protest: ಕುಸ್ತಿಪಟುಗಳಾದ ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ರೈಲ್ವೇಯಲ್ಲಿ ತಮ್ಮ ಉದ್ಯೋಗಕ್ಕೆ ಮರಳಿದ್ದಾರೆ. ಒಲಿಂಪಿಕ್ ಪದಕ ವಿಜೇತರಾದ ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಅವರನ್ನು ಭಾರತೀಯ ರೈಲ್ವೆಯಲ್ಲಿ ಒಸಿಡಿ (ಕ್ರೀಡೆ) ಆಗಿ ನೇಮಿಸಲಾಗಿದೆ. ಆದರೆ, ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂಬುದನ್ನು ಅವರು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಸೋಮವಾರ ಹೇಳಿಕೆ ನೀಡಿರುವ ಸಾಕ್ಷಿ ಮಲಿಕ್ ಅವರು "ನಾವು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದೇವೆ, ಅದು ಒಂದು ಸಾಮಾನ್ಯ ಭೇಟಿಯಾಗಿತ್ತು, ನಮಗೆ ಒಂದೇ ಒಂದು ಬೇಡಿಕೆಯಿದೆ ಮತ್ತು ಅದು ಬ್ರಿಜ್ ಭೂಷಣ್ ಸಿಂಗ್ ಬಂಧಿಸಬೇಕು" ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತು ಸುದ್ದಿ ಸಂಸ್ಥೆ ಎಎನ್ಐಗೆ ಮಾಹಿತಿ ನೀಡಿದ ಅವರು, "ನಾನು ಪ್ರತಿಭಟನೆಯಿಂದ ಹಿಂದೆ ಸರಿದಿಲ್ಲ, ನಾನು ರೈಲ್ವೆಯಲ್ಲಿ OSD ಆಗಿ ನನ್ನ ಕೆಲಸವನ್ನು ಪುನರಾರಂಭಿಸಿದ್ದೇನೆ. ನಮಗೆ ನ್ಯಾಯ ಸಿಗುವವರೆಗೆ ನಾವು ಪ್ರತಿಭಟನೆ ಮುನ್ನಡೆಸಲು ಬಯಸುತ್ತೇನೆ ಎಂದು ನಾನು ಸ್ಪಷ್ಟಪಡಿಸುತ್ತೇನೆ" ಎಂದು ಹೇಳಿದ್ದಾರೆ. ನಾವು ಪ್ರತಿಭಟನೆ ಮುನ್ನಡೆಸಲಿದ್ದೇವೆ, ನಾವು ಹಿಂದೆ ಸರಿಯುವುದಿಲ್ಲ. ಸಂತ್ರಸ್ತೆ ಯಾವುದೇ ಎಫ್‌ಐಆರ್ ಹಿಂಪಡೆದಿಲ್ಲ, ಅದೆಲ್ಲವೂ ಸುಳ್ಳು" ಎಂದು ಸಾಕ್ಷಿ ಹೇಳಿದ್ದಾರೆ. 


ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಯಲಿದೆ
ಧರಣಿಯಿಂದ ಹಿಂದೆ ಸರಿದಿರುವ ವರದಿಗಳು ತಪ್ಪು ಎಂದು ಹೇಳಿರುವ ಸಾಕ್ಷಿ ಮಲಿಕ್, "ಈ ಸುದ್ದಿ ಸಂಪೂರ್ಣ ತಪ್ಪು. ನ್ಯಾಯಕ್ಕಾಗಿ ಹೋರಾಟದಲ್ಲಿ ನಾವ್ಯಾರೂ ಹಿಂದೆ ಸರಿದಿಲ್ಲ, ನಾವೂ ಸಹ ಹಿಂದೆ ಸರಿಯುವುದಿಲ್ಲ. ಸತ್ಯಾಗ್ರಹದ ಜೊತೆಗೆ ರೈಲ್ವೇಯಲ್ಲಿ ನಮ್ಮ ಜವಾಬ್ದಾರಿಯನ್ನು ನಿರ್ವಹಿಸಳಿದ್ದೇವೆ" ಎಂದು ಅವರು ಹೇಳಿದ್ದಾರೆ. ನಮಗೆ ನ್ಯಾಯ ಸಿಗುವವರೆಗೆ ಹೋರಾಟ ನಡೆಸಲಾಗುವುದು, ದಯವಿಟ್ಟು ಯಾವುದೇ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದಿದಾರೆ. ವಾಸ್ತವದಲ್ಲಿ, ಸಾಕ್ಷಿ ಮಲಿಕ್ ಬಗ್ಗೆ ವರದಿ ಪ್ರಕಟಿಸಿದ್ದ ಸುದ್ದಿ ಸಂಸ್ಥೆ ANI, ಸಾಕ್ಷಿ ಭಾರತೀಯ ರೈಲ್ವೇಯಲ್ಲಿ ತನ್ನ ಕೆಲಸಕ್ಕೆ ಪುನಃ ಸೇರಿದ್ದಾರೆ ಎಂದು ಸೋಮವಾರ ತಿಳಿಸಿತ್ತು. ಈ ಸುದ್ದಿ ಮುನ್ನೆಲೆಗೆ ಬಂದ ನಂತರ ಸಾಕ್ಷಿ ಮಲಿಕ್ ಕುಸ್ತಿಪಟುಗಳ ಪ್ರತಿಭಟನೆಯಿಂದ ದೂರ ಸರಿದಿದ್ದಾರೆ ಎಂದು ಹೇಳಲಾಗಿತ್ತು.


ಇದನ್ನೂ ಓದಿ- Test Cricket ಗೆ ವಿದಾಯ ಹೇಳಿದ ಡೇವಿಡ್ ವಾರ್ನರ್! ಇದುವೇ ನನ್ನ ಕೊನೆಯ ಟೆಸ್ಟ್ ಪಂದ್ಯ ಎಂದ ವಾರ್ನರ್


"ನಾವು ಹಿಂದೆ ಸರಿದಿಲ್ಲ"
ಮತ್ತೊಂದೆಡೆ, ಈ ಕುರಿತು ಟ್ವೀಟ್ ಮಾಡಿರುವ ಬಜರಂಗ್ ಪುನಿಯಾ "ಪ್ರತಿಭಟನೆ ಹಿಂತೆಗೆದುಕೊಳ್ಳುವ ಸುದ್ದಿ ಒಂದು ವದಂತಿಯಾಗಿದೆ. ನಮಗೆ ಹಾನಿ ಮಾಡಲು ಇಂತಹ  ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ನಾವು ಪ್ರತಿಭಟನೆಯನ್ನು  ಹಿಂಪಡೆದಿಲ್ಲ ಅಥವಾ ನಾವು ಹಿಂದಕ್ಕೂ ಸರಿದಿಲ್ಲ. ಮಹಿಳಾ ಕುಸ್ತಿಪಟುಗಳು ಎಫ್‌ಐಆರ್ ಹಿಂಪಡೆದ ಸುದ್ದಿಯೂ ಇದೆ. ಅದು ಸುಳ್ಳು, ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಯಲಿದೆ.


ಇದನ್ನೂ ಓದಿ-Wrestlers Protest: ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಪ್ರಕರಣ, ಬೃಜ್ ಭೂಷಣ್ ಗೆ ಹೇಳಿಕೆ ನೀಡದಿರಲು ಸೂಚನೆ ನೀಡಿದ ಹೈಕಮಾಂಡ್


"ಮತ್ತೆ ಪ್ರತಿಭಟನೆ ಆರಂಭಿಸುತ್ತೇನೆ"
ಕುಸ್ತಿಪಟು ಮತ್ತು ಸಾಕ್ಷಿ ಮಲಿಕ್ ಅವರ ಪತಿ ಸತ್ಯವ್ರತ್ ಕಡಿಯಾನ್, "ನಮ್ಮ ನಿರ್ಧಾರದ ಮೇಲೆ ಪ್ರಭಾವ ಬೀರಲು ಇಂತಹ ವಿಷಯಗಳನ್ನು ನಡೆಸಲಾಗುತ್ತಿದೆ, ನಾವು ಪ್ರತಿಭಟನೆಯಿಂದ ಹಿಂದೆ ಸರಿದಿಲ್ಲ, ನಮ್ಮ ಪ್ರತಿಭಟನೆ ಮುಂದುವರೆಯಲಿದೆ, ಜಂತರ್ ಮಂತರ್‌ನಲ್ಲಿ ನಮಗೆ ಏನಾಯಿತು, ನಂತರ ನಾವು ಹಿಂತಿರುಗಿದ್ದೇವೆ. ನಾವು ಮತ್ತೆ ಆಂದೋಲನ ಪ್ರಾರಂಭಿಸುತ್ತೇವೆ.  ದೆಹಲಿ ಪೊಲೀಸರು ನಮಗೆ ಏನು ಮಾಡಿದ್ದಾರೆಂದು ಇಡೀ ದೇಶವು ನೋಡಿದೆ, ಎಲ್ಲರೂ ಅದನ್ನು ವಿರೋಧಿಸಿದ್ದಾರೆ ಅಂದು ಅವರು ಹೇಳಿದ್ದಾರೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.