Wrestlers Protest: ದೇಶದ ಕುಸ್ತಿಪಟುಗಳು ನಡೆಸುತ್ತಿರುವ ಹೋರಾಟವನ್ನು ಬೆಂಬಳಿಸಲು ಶನಿವಾರ ಹರಿಯಾಣದ ಸೋನಿಪತ್‌ನಲ್ಲಿ ಮಹಾಪಂಚಾಯತ್ ಆಯೋಜಿಸಲಾಗಿದೆ. ಈ ವೇಳೆ ಕುಸ್ತಿಪಟು ಸಾಕ್ಷಿ ಮಲಿಕ್ ಮಾತನಾಡಿದಾರೆ, ಈ ಸಂದರ್ಭದಲ್ಲಿ ಮಾತನಾಡಿರುವ ಸಾಕ್ಷಿ, ‘ಈ ಸಂಪೂರ್ಣ ಪ್ರಕರಣ ಇತ್ಯರ್ಥವಾದ ಬಳಿಕವೇ ನಾವು ಏಷ್ಯನ್ ಗೇಮ್ಸ್ ಆಡುತ್ತೇವೆ’ ಎಂದಿದ್ದಾರೆ. ಲೈಂಗಿಕ ಕಿರುಕುಳದ ಆರೋಪದ ಮೇಲೆ ಕುಸ್ತಿಪಟುಗಳು ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್‌ಐ) ನಿರ್ಗಮಿತ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯಿಸುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಜೂನ್ 15ರೊಳಗೆ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳದಿದ್ದರೆ ಮುಂದಿನ ಕಾರ್ಯತಂತ್ರ ಪ್ರಕಟಿಸಲಾಗುವುದು ಎಂದು ಮಹಾಪಂಚಾಯತ್‌ನಲ್ಲಿ ತೀರ್ಮಾನಿಸಲಾಗಿದೆ.  ಈ ಸಂದರ್ಭದಲ್ಲಿ ಸಾಕ್ಷಿ ಮಲಿಕ್, "ಬ್ರಿಜ್ ಭೂಷಣ್ ಸಿಂಗ್ ಅವರನ್ನು ಬಂಧಿಸಬೇಕು. ಅವರು ಹೊರಗೆ ಉಳಿದರೆ ಭಯದ ವಾತಾವರಣವಿರುತ್ತದೆ. ಮೊದಲು ಆತನನ್ನು ಬಂಧಿಸಿ ನಂತರ ತನಿಖೆ ಮಾಡಿ. ನಮಗೆ ಬೆಂಬಲ ಸಿಗುತ್ತಿದೆ. ನಾವು ಸತ್ಯದ ಹೋರಾಟ ನಡೆಸುತ್ತಿದ್ದೇವೆ. ಕೆಲವು ಸುಳ್ಳು ಸುದ್ದಿಗಳನ್ನು ಕೂಡ ಹಬ್ಬಿಸಲಾಗುತ್ತಿದೆ" ಎಂದು ಹೇಳಿದ್ದಾರೆ. 


ಇದನ್ನೂ ಓದಿ-Wrestlers Protest: ಕುಸ್ತಿ ಪ್ರತಿಭಟನೆಗೆ ಹೊಸ ತಿರುವು, ಪೊಲೀಸ್ ರಕ್ಷಣೆಯಲ್ಲಿ ಬ್ರಿಜ್ ಭೂಷಣ್ ಮನೆ ತಲುಪಿದ ಮಹಿಳಾ ಕುಸ್ತಿಪಟು


ಸೋನೆಪತ್‌ನಲ್ಲಿ ಮಹಾಪಂಚಾಯತ್ ಆಯೋಜಿಸಲಾಗಿದೆ
ಮಹಾಪಂಚಾಯತ್ ಆರಂಭಕ್ಕೂ ಮುನ್ನ ಮಾತನಾಡಿದ ಕುಸ್ತಿಪಟು ಬಜರಂಗ್ ಪುನಿಯಾ, ‘ಸರ್ಕಾರದೊಂದಿಗೆ ನಾವು ನಡೆಸುವ ಮಾತುಕತೆಯನ್ನು ನಮ್ಮ ನಮ್ಮ ನಡುವೆಯೇ ಇರಲಿದೆ, ಸಂಘಟನೆಯಾಗಲಿ ಅಥವಾ ಬೆಂಬಲವಾಗಿ ನಿಂತಿರುವವರ ಮುಂದೆ ಈ ಮಾತನ್ನು ಇಡುತ್ತೇವೆ. ಅದರಲ್ಲಿ ಒಂದು ಖಾಪ್ ಪಂಚಾಯತ್. ಆಟಗಾರರು ಖಾಪ್ ಪಂಚಾಯತ್‌ಗಳೊಂದಿಗೆ ಚರ್ಚಿಸಿದ ನಂತರವೇ ಮುಂದಿನ ಕಾರ್ಯತಂತ್ರವನ್ನು ನಿರ್ಧರಿಸುತ್ತಾರೆ" ಎಂದು ಹೇಳಿದ್ದಾರೆ.  ಈ ಹಿಂದೆ ಯುಪಿಯ ಮುಜಾಫರ್‌ನಗರ ಮತ್ತು ಹರಿಯಾಣದ ಕುರುಕ್ಷೇತ್ರದಲ್ಲಿ ಕುಸ್ತಿಪಟುಗಳಿಗೆ ಬೆಂಬಲವಾಗಿ ಖಾಪ್ ಮಹಾಪಂಚಾಯತ್‌ಗಳು ನಡೆದಿದ್ದವು.


ಇದನ್ನೂ ಓದಿ-Wrestlers Protest: 'ಆಕೆಯ ಜೊತೆಗೆ ಅನುಚಿತ ವರ್ತನೆ ನಡೆದಿತ್ತು...' ಬ್ರಿಜ್ ಭೂಷಣ್ ವಿರುದ್ಧ ಅಂತಾರಾಷ್ಟ್ರೀಯ ರೇಫರಿ ಹೇಳಿಕೆ


ಬಳಿಕ ಕ್ರೀಡಾ ಸಚಿವರನ್ನು ಭೇಟಿಯಾದ ಕುಸ್ತಿಪಟುಗಳು
ಈ ಹಿನ್ನೆಲೆ ಕುಸ್ತಿಪಟುಗಳು ಜೂನ್ 7 ರಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರೊಂದಿಗೆ ಸಭೆ ನಡೆಸಿದ್ದಾರೆ. ಈ ಸಭೆಯ ನಂತರ, ಕುಸ್ತಿಪಟುಗಳು ಜೂನ್ 15 ರೊಳಗೆ ಈ ಬಗ್ಗೆ ಚಾರ್ಜ್ ಶೀಟ್ ಸಲ್ಲಿಸುವಂತೆ ದೆಹಲಿ ಪೊಲೀಸರಿಗೆ ತಿಳಿಸಲಾಗಿದೆ ಎಂದು ಹೇಳಿದ್ದರು. ದೆಹಲಿ ಪೊಲೀಸರು ಆಟಗಾರರ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ ಹಿಂಪಡೆಯಲಿದ್ದಾರೆ. ಹಾಗಾಗಿ ಜುಲೈ 15ಕ್ಕೆ ಚಳವಳಿಯನ್ನು ಮುಂದೂಡಿದ್ದೇವೆ ಎಂದು ಕುಸ್ತಿಪಟುಗಳು ಹೇಳಿದ್ದಾರೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.