WTC Final 2021: WTC ಫೈನಲ್ ಗೆ ತಂಡ ಪ್ರಕಟಿಸಿದ BCCI, ಯಾವ ಯಾವ ಆಟಗಾರರಿಗೆ ಸಿಕ್ತು ಅವಕಾಶ?
WTC Final 2021 - ಶುಕ್ರವಾರದಿಂದ ನ್ಯೂಜಿಲೆಂಡ್‌ನೊಂದಿಗೆ ನಡೆಯಬೇಕಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ಪಂದ್ಯಕ್ಕೆ ಭಾರತ ತನ್ನ ತಂಡವನ್ನು ಮಂಗಳವಾರ ಪ್ರಕಟಿಸಿದೆ.
ನವದೆಹಲಿ: WTC Final 2021 - ವಿರಾಟ್ ಕೊಹ್ಲಿ (Virat Kohli)ನೇತೃತ್ವದ ಟೀಮ್ ಇಂಡಿಯಾ (Team India)ಪ್ರಸ್ತುತ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ (World Test Championship) ತಯಾರಿ ನಡೆಸುತ್ತಿದೆ. ಭಾರತ ತಂಡವು ಜೂನ್ 18 ರಿಂದ 22 ರವರೆಗೆ ನ್ಯೂಜಿಲೆಂಡ್ ವಿರುದ್ಧ (Ind Vs NZ) ಡಬ್ಲ್ಯುಟಿಸಿ ಫೈನಲ್ (WTC Final) ಪಂದ್ಯವನ್ನು ಆಡಲಿದೆ. ಈ ದೊಡ್ಡ ಪಂದ್ಯಕ್ಕಾಗಿ ಭಾರತೀಯ ತಂಡದ ಘೋಷಣೆ ಮಾಡಲಾಗಿದೆ.
WTC Finalಗೆ ತಂಡ ಘೋಷಣೆ (World Test Championship 2021)
ಶುಕ್ರವಾರದಿಂದ ನ್ಯೂಜಿಲೆಂಡ್‌ನೊಂದಿಗೆ ನಡೆಯಬೇಕಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ಪಂದ್ಯಕ್ಕೆ ಭಾರತ ತನ್ನ ತಂಡವನ್ನು ಮಂಗಳವಾರ ಪ್ರಕಟಿಸಿದೆ. ಇನ್ನೊಂದೆಡೆ ನ್ಯೂಜಿಲ್ಯಾಂಡ್ ಕೂಡ ಮಂಗಳವಾರವೇ ಫೈನಲ್ ಪಂದ್ಯಕ್ಕೆ ತನ್ನ ತಂಡದ ಘೋಷಣೆ ಮಾಡಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡುವ ಮೂಲಕ ಟೀಂ ಇಂಡಿಯಾ ಘೋಷಣೆ ಮಾಡಿದೆ. BCCI ಘೋಷಣೆ ಮಾಡಿರುವ 15 ಸದಸ್ಯರ ತಂಡದಲ್ಲಿ ರಿಷಬ್ ಪಂತ್ ಹಾಗೂ ರಿದ್ಧಿಮಾನ್ ಸಾಹಾ ರೂಪದಲ್ಲಿ ಒಟ್ಟು ಇಬ್ಬರು ವಿಕೆಟ್ ಕೀಪರ್ ಗಳಿದ್ದಾರೆ. ಇದಲ್ಲದೆ ರವಿಚಂದ್ರನ್ ಅಶ್ವಿನ್ ಹಾಗೂ ರವಿಂದ್ರ ಜಡೇಜಾಗೂ ಕೂಡ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ.
Sri Lanka Cricket Tour: ಭಾರತ ಕ್ರಿಕೆಟ್ ತಂಡಕ್ಕೆ ರಾಹುಲ್ ದ್ರಾವಿಡ್ ಕೋಚ್
WTC Final ಪಂದ್ಯಕ್ಕೆ 15 ಸದಸ್ಯರ ಭಾರತೀಯ ತಂಡ ಕೆಳಗಿನಂತಿದೆ (WTC Final 2021 Team India)
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶುಭಮನ್ ಗಿಲ್, ಚೆತೆಶ್ವರ್ ಪುಜಾರಾ, ಅಜಿಂಕ್ಯ ರಹಾಣೆ (ಉಪನಾಯಕ), ಹನುಮ ವಿಹಾರಿ, ರಿಷಬ್ ಪಂತ್, ರಿದ್ಧಿಮಾನ್ ಸಾಹಾ, ರವಿಚಂದ್ರನ್ ಅಶ್ವಿನ್, ರವಿಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್ ಹಾಗೂ ಮೊಹಮ್ಮದ್ ಶಮಿ.
ಇದನ್ನೂ ಓದಿ-MS Dhoni: ಸ್ನೇಹಿತನ ಪ್ರಾಣ ಉಳಿಸಲು ಹೆಲಿಕಾಪ್ಟರ್ ಕಳುಹಿಸಿದ್ದ ಧೋನಿ, ಆದರೆ...
WTC Final ಪಂದ್ಯಕ್ಕೆ 15 ಸದಸ್ಯರ ನ್ಯೂಜಿಲ್ಯಾಂಡ್ ತಂಡ ಕೆಳಗಿನಂತಿದೆ (WTC Final 2021 New Zealand Team)
ಕೆನ್ ವಿಲಿಯಮ್ಸನ್ (ನಾಯಕ), ಟಾಮ್ ಬ್ಲಂಡಲ್, ಟ್ರೆಂಟ್ ಬೋಲ್ಟ್, ಡಿವೊನ್ ಕಾನ್ವೆ, ಕೊಲಿನ್ ಡಿ ಗ್ರೌಂಡ್ಹೋಮ್, ಮ್ಯಾಟ್ ಹೆನ್ರಿ, ಕೈಲ್ ಜ್ಯಾಮಿಸನ್, ಟಾಮ್ ಲ್ಯಾಥಂ, ಹೆನ್ರಿ ನಿಕೊಲ್ಸ್, ಎಜಾಜ್ ಪಟೇಲ್, ಟಿಮ್ ಸೌಥಿ, ರಾಸ್ ಟೇಲರ್, ನೀಲ್ ವ್ಯಾಗ್ನರ್, ಬಿಜೆ ವಾಟ್ಲಿಂಗ್, ವಿಲ್ ಯಂಗ್.
ಇದನ್ನೂ ಓದಿ-Suresh Raina : ಟೀಂ ಇಂಡಿಯಾದ ಮಾಜಿ ಆಲ್‌ರೌಂಡರ್ ಸುರೇಶ್ ರೈನಾ ಆತ್ಮಕಥೆ ಜು.14ಕ್ಕೆ ಬಿಡುಗಡೆ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.