Viral Video: ರಣರಂಗವಾಯ್ತು ಫುಟ್ಬಾಲ್ ಮೈದಾನ: ಆಟಗಾರರ ಮಧ್ಯೆ ಮಾರಾಮಾರಿ
Football Match Fight: ಸ್ಪಾರ್ಟಕ್ ಮಾಸ್ಕೋಗೆ ಫ್ರೀ ಕಿಕ್ ಇತ್ತು. ಅದೇ ಸಮಯದಲ್ಲಿ, ಫಾರ್ವರ್ಡ್ ಕ್ವಿನ್ಸಿ ಪ್ರೋಮ್ಸ್ ಮತ್ತು ಝೆನಿಟ್ ಸೇಂಟ್ ಪೀಟರ್ಸ್ಬರ್ಗ್ ಮಿಡ್ಫೀಲ್ಡರ್ ವಿಲ್ಮರ್ ಬ್ಯಾರಿಯೋಸ್ ಪರಸ್ಪರರ ಭುಜಗಳಿಗೆ ಬಡಿದುಕೊಂಡು. ಅಷ್ಟೇ ಅಲ್ಲದೆ ಪರಸ್ಪರ ಕೆಲವು ಮಾತುಗಳನ್ನು ಹೇಳಿಕೊಂಡರು. ಇದೇ ವಿಚಾರವಾಗಿ ಪ್ರಾರಂಭವಾದ ಗಲಭೆ ತಾರಕಕ್ಕೇರಿತ್ತು.
Football Match Fight: ಫುಟ್ಬಾಲ್ ಮೈದಾನದಲ್ಲಿ ಆಟಗಾರರ ನಡುವೆ ತಳ್ಳಾಟ ನೂಕಾಟ ನಡೆಯುವುದು ಸಾಮಾನ್ಯ. ಆದರೆ ಭಾನುವಾರ ಅಂದರೆ ನವೆಂಬರ್ 27 ರಂದು ನಡೆದ ರಷ್ಯಾ ಕಪ್ ಪಂದ್ಯದಲ್ಲಿ ನಡೆದ ಘಟನೆ ಇಡೀ ಫುಟ್ಬಾಲ್ ಲೋಕವೇ ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡಿದೆ. ಕ್ರೆಸ್ಟೋವ್ಸ್ಕಿ ಸ್ಟೇಡಿಯಂನಲ್ಲಿ ಜೆನಿತ್ ಸೇಂಟ್ ಪೀಟರ್ಸ್ಬರ್ಗ್ ಮತ್ತು ಸ್ಪಾರ್ಟಕ್ ಮಾಸ್ಕೋ ನಡುವೆ ಪಂದ್ಯ ನಡೆಯುತ್ತಿತ್ತು. ಈ ವೇಳೆ ಎರಡೂ ತಂಡಗಳ ಆಟಗಾರರು ಹಾಗೂ ಕೋಚ್ ಗಳು ಪರಸ್ಪರ ಶತ್ರುಗಳಂತೆ ಹೊಡೆದಾಡಿಕೊಂಡರು. ಕ್ರೀಡಾಸ್ಫೂರ್ತಿಯನ್ನು ಬದಿಗೊತ್ತಿ ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದು, ಫುಟ್ಬಾಲ್ ಮೈದಾನದಲ್ಲಿ WWE ಕಾದಾಟದಂತಹ ವಾತಾವರಣ ನಿರ್ಮಾಣವಾಯಿತು.
ಇದನ್ನೂ ಓದಿ: IPL 2022 Final: ಗಿನ್ನಿಸ್ ರೆಕಾರ್ಡ್ ಪುಟ ಸೇರಿದ IPL 2022 ಫೈನಲ್ ಪಂದ್ಯ: ಏನಿದರ ವಿಶೇಷತೆ?
ಸ್ಪಾರ್ಟಕ್ ಮಾಸ್ಕೋಗೆ ಫ್ರೀ ಕಿಕ್ ಇತ್ತು. ಅದೇ ಸಮಯದಲ್ಲಿ, ಫಾರ್ವರ್ಡ್ ಕ್ವಿನ್ಸಿ ಪ್ರೋಮ್ಸ್ ಮತ್ತು ಝೆನಿಟ್ ಸೇಂಟ್ ಪೀಟರ್ಸ್ಬರ್ಗ್ ಮಿಡ್ಫೀಲ್ಡರ್ ವಿಲ್ಮರ್ ಬ್ಯಾರಿಯೋಸ್ ಪರಸ್ಪರರ ಭುಜಗಳಿಗೆ ಬಡಿದುಕೊಂಡು. ಅಷ್ಟೇ ಅಲ್ಲದೆ ಪರಸ್ಪರ ಕೆಲವು ಮಾತುಗಳನ್ನು ಹೇಳಿಕೊಂಡರು. ಇದೇ ವಿಚಾರವಾಗಿ ಪ್ರಾರಂಭವಾದ ಗಲಭೆ ತಾರಕಕ್ಕೇರಿತ್ತು.
ಜೆನಿತ್ ಸೇಂಟ್ ಪೀಟರ್ಸ್ ಬರ್ಗ್ ನ ರೋಡ್ರಿಗೋ ಪ್ರಾಡೊ ರೆಫರಿ ಎದುರು ಸ್ಪಾರ್ಟಕ್ ಆಟಗಾರರನ್ನು ಒದ್ದರು. ಸ್ಪಾರ್ಟಕ್‌ನ ಬದಲಿ ಆಟಗಾರ ಅಲೆಕ್ಸಾಂಡರ್ ಸೊಬೊಲೆವ್ ಕೂಡ ಅಂಗಣಕ್ಕೆ ಧುಮುಕಿದರು. ಉಳಿದ ಆಟಗಾರರು ಕೂಡ ಹೊಡೆದಾಟ ಜೋರಾಗಿಯೇ ನಡೆಸಿದರು. ಈ ಹೊಡೆದಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.
ಕಾರ್ಡ್ ತೋರಿಸಿದರೂ…
ಮ್ಯಾಚ್ ರೆಫರಿ ವ್ಲಾಡಿಮಿರ್ ಮೊಸ್ಕಾಲೆವ್ ಆರಂಭದಲ್ಲಿ ಆಟಗಾರರನ್ನು ಮತ್ತು ವಾತಾವರಣವನ್ನು ಶಾಂತಗೊಳಿಸಲು ಪ್ರಯತ್ನಿಸಿದರೂ, ಅಷ್ಟರೊಳಗೆ ವಿಷಯ ಕೈ ಮೀರಿತ್ತು. ರೆಫರಿ 6 ಆಟಗಾರರಿಗೆ ರೆಡ್ ಕಾರ್ಡ್ ತೋರಿಸಿದರು. ಇದರಲ್ಲಿ ಎರಡೂ ತಂಡಗಳ ಮೂವರು ಆಟಗಾರರು ಇದ್ದರು. ಈ ಪಟ್ಟಿಯಲ್ಲಿ ಸ್ಪಾರ್ಟಕ್‌ನ ಅಲೆಕ್ಸಾಂಡರ್ ಸೊಬೆಲೆವ್, ಶಮರ್ ನಿಕೋಲ್ಸನ್ ಮತ್ತು ಅಲೆಕ್ಸಾಂಡರ್ ಸೆಲಿಖೋವ್ ಸೇರಿದ್ದಾರೆ. ಜೆನಿತ್ ಸೇಂಟ್ ಪೀಟರ್ಸ್‌ಬರ್ಗ್‌ನಿಂದ ಬ್ಯಾರಿಯೊಸ್, ರೋಡ್ರಿಗೋ ಮತ್ತು ಮಾಲ್ಕಮ್ ಇದ್ದಾರೆ. ಆದರೆ, ಅಚ್ಚರಿಯ ವಿಷಯವೆಂದರೆ ರೆಡ್ ಕಾರ್ಡ್ ಪಡೆದ ಆಟಗಾರರು ಬೆಂಚ್ ಮೇಲೆ ಕುಳಿತು ನೇರವಾಗಿ ಹೋರಾಟದ ಭಾಗವಾಗಿರಲಿಲ್ಲ.
ಇದನ್ನೂ ಓದಿ: FIFA World Cupನಲ್ಲಿ ಸೋತ ಬೆಲ್ಜಿಯಂ: ಕೋಪಗೊಂಡ ಅಭಿಮಾನಿಗಳಿಂದ ಬ್ರಸೆಲ್ಸ್ ನಲ್ಲಿ ಗಲಭೆ ಸೃಷ್ಟಿ, ವಾಹನಗಳಿಗೆ ಬೆಂಕಿ
ಈ ಪಂದ್ಯವನ್ನು ಜೆನಿತ್ ಸೇಂಟ್ ಪೀಟರ್ಸ್ ಬರ್ಗ್ 4-2 ಅಂತರದಿಂದ ಗೆದ್ದು ಇದೀಗ ಮುಂದಿನ ಸುತ್ತಿಗೆ ತಲುಪಿದೆ. ಪಂದ್ಯ ಪೆನಾಲ್ಟಿ ಶೂಟೌಟ್‌ಗೆ ಹೋಗಿತ್ತು. ಈ ಪಂದ್ಯದ ಫಲಿತಾಂಶ ಪೆನಾಲ್ಟಿ ಶೂಟೌಟ್‌ನಿಂದ ಹೊರಬಿದ್ದಿದೆ. ಆದರೆ ಪಂದ್ಯದಲ್ಲಿ ಆಟಗಾರರ ವರ್ತನೆ ನೋಡಿ ಎಲ್ಲರಿಗೂ ನಿರಾಸೆಯಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.