Emerging Asia Cup, IND A vs UAE A: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಪ್ರಸ್ತುತ ಯುಗದ ಅತ್ಯುತ್ತಮ ಬ್ಯಾಟ್ಸ್‌ಮನ್‌ ಗಳಲ್ಲಿ ಒಬ್ಬರು ಎಂದು ಗುರುತಿಸಲ್ಪಟ್ಟಿದ್ದಾರೆ. ಅವರ ನಾಯಕತ್ವದಲ್ಲಿ ಟೀಂ ಇಂಡಿಯಾಕ್ಕೆ ಯಾವುದೇ ಐಸಿಸಿ ಟ್ರೋಫಿಯನ್ನು ಗೆಲ್ಲಲು ಸಾಧ್ಯವಾಗದಿದ್ದರೂ, ಅವರ ಬ್ಯಾಟಿಂಗ್ ಮಾತ್ರ ಸಖತ್ ಆಗಿಯೇ ಮಿಂಚುತ್ತಿತ್ತು. ಈ ದಿಲ್ಲಿ ಆಟಗಾರ ಏಕಾಂಗಿಯಾಗಿ ಹಲವು ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ ಎಂಬುದನ್ನು ಇಲ್ಲಿ ಉಲ್ಲೇಖಿಸಲೇಬೇಕು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 13 ವರ್ಷಗಳ ಬಳಿಕ… ಗವಾಸ್ಕರ್, ಸೆಹ್ವಾಗ್ ಕೂಡ ಮಾಡಲು ಸಾಧ್ಯವಾಗದ ಆ ವಿಶೇಷ ದಾಖಲೆ ಬರೆದ ಜೈಸ್ವಾಲ್!


ವಿರಾಟ್ ಗೆ ಈಗ 34 ವರ್ಷ ವಯಸ್ಸಾಗಿದ್ದು, ಟೀಂ ಇಂಡಿಯಾಕ್ಕೆ ಹಲವು ವರ್ಷಗಳ ಕಾಲ ತಮ್ಮ ಸೇವೆಯನ್ನು ನೀಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಈಗಾಗಲೇ ಆಯ್ಕೆ ಸಮಿತಿ ವಿರಾಟ್ ಸ್ಥಾನವನ್ನು ತುಂಬಬಲ್ಲ ಆಟಗಾರ ಯಾರೆಂಬ ಹುಡುಕಾಟವನ್ನು ಮುಂದುವರೆಸಿದೆ. ಈ ವೇಳೆ ಆಟಗಾರನೊಬ್ಬ ಎಲ್ಲರ ಗಮನ ಸೆಳೆದಿದ್ದಾನೆ.


ವಿರಾಟ್‌ ರಂತೆಯೇ ಈ ಆಟಗಾರ ದೆಹಲಿಯ ನಿವಾಸಿ. ಅಷ್ಟೇ ಅಲ್ಲ, ದೇಶೀಯ ಕ್ರಿಕೆಟ್‌ ನಲ್ಲಿ ದೆಹಲಿಯನ್ನು ಪ್ರತಿನಿಧಿಸುತ್ತಿದ್ದಾನೆ. ಬಲಗೈ ಬ್ಯಾಟ್ಸ್‌ಮನ್ ಆಗಿದ್ದು, ಭಾರತದ ಅಂಡರ್-19 ತಂಡದಲ್ಲಿ ಆಡಿದ್ದಾನೆ. ವಿರಾಟ್‌ ಅವರಂತೆ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಕೂಡ ಹೌದು. ಈಗ ನೀವು ಈ ಆಟಗಾರ ಯಾರೆಂದು ಯೋಚಿಸುತ್ತಿರಬಹುದು.. ಈ ಆಟಗಾರ ಬೇರಾರು ಅಲ್ಲ, 20 ನೇ ವಯಸ್ಸಿನಲ್ಲಿ ಭಾರತ ಎ ತಂಡದ ನಾಯಕತ್ವವನ್ನು ನಿಭಾಯಿಸುತ್ತಿರುವ ಯಶ್ ಧುಲ್. ಅಜೇಯ ಶತಕದಿಂದಾಗಿ ಉದಯೋನ್ಮುಖ ಏಷ್ಯಾ ಕಪ್‌ ನಲ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ.


ಉದಯೋನ್ಮುಖ ಏಷ್ಯಾಕಪ್‌ ನ ಬಿ ಗುಂಪಿನ ಪಂದ್ಯದಲ್ಲಿ ಭಾರತ ಎ ತಂಡದ ನಾಯಕ ಯಶ್ ಧುಲ್ ಟಾಸ್ ಗೆದ್ದು ಯುಎಇ ಎ ತಂಡವನ್ನು ಬ್ಯಾಟಿಂಗ್‌ ಗೆ ಕಳುಹಿಸಿದರು. ಕೊಲಂಬೊದಲ್ಲಿ ನಡೆದ ಈ ಪಂದ್ಯದಲ್ಲಿ ಯುಎಇ ತಂಡ 50 ಓವರ್‌ ಗಳನ್ನು ಆಡಿದರೂ 9 ವಿಕೆಟ್ ಕಳೆದುಕೊಂಡು 175 ರನ್ ಗಳಿಸಲಷ್ಟೇ ಶಕ್ತವಾಯಿತು. ನಾಯಕ ವಿ ಚಿದಂಬರಂ (46) ಮತ್ತು ಆರಂಭಿಕ ಆರ್ಯನ್ಶ್ ಶರ್ಮಾ (38) ಕೊಡುಗೆ ನೀಡಿದರು. ಹರ್ಷಿತ್ ರಾಣಾ ಬೌಲಿಂಗ್ ನಲ್ಲಿ 4 ವಿಕೆಟ್ ಪಡೆದಿದ್ದಾರೆ. ಇದಾದ ಬಳಿಕ ನಾಯಕ ಯಶ್ (108*) ಅವರ ಅಜೇಯ ಶತಕದ ನೆರವಿನಿಂದ ಭಾರತ ಎ ತಂಡ 26.3 ಓವರ್‌ ಗಳಲ್ಲಿ ಗುರಿ ತಲುಪಿತು. ಯಶ್ ಅವರ ಇನ್ನಿಂಗ್ಸ್‌ ನಲ್ಲಿ 20 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿದ್ದರು.


ಇದನ್ನೂ ಓದಿ: ಈ ರಾಶಿಯವರ ಕೈಹಿಡಿದು ಮುನ್ನಡೆಸುವನು ಬುಧದೇವ: ಹಣದ ಮಳೆ ಗ್ಯಾರಂಟಿ-ಹೆಜ್ಜೆಹೆಜ್ಜೆಗೂ ಯಶಸ್ಸು ಬೆನ್ನೇರಲಿದೆ!


ದೇಶೀಯ ಕ್ರಿಕೆಟ್‌ ನಲ್ಲಿ ದೆಹಲಿಯನ್ನು ಪ್ರತಿನಿಧಿಸುತ್ತಿರುವ ವಿರಾಟ್ ಅವರಂತೆ, ಯಶ್ ಧುಲ್ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 15 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. 4 ಶತಕ ಮತ್ತು 4 ಅರ್ಧ ಶತಕಗಳ ಸಹಾಯದಿಂದ ಒಟ್ಟು 1145 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ, ಅವರ ಬ್ಯಾಟಿಂಗ್ ಸರಾಸರಿ 49.78 ಆಗಿದೆ. ಪ್ರಥಮ ದರ್ಜೆ ಕ್ರಿಕೆಟ್‌ ನಲ್ಲಿ ದ್ವಿಶತಕ ಗಳಿಸಿದ್ದಾರೆ ಮತ್ತು ಅವರ ಅತ್ಯುತ್ತಮ ಸ್ಕೋರ್ 200 (ನಾಟೌಟ್) ಆಗಿದೆ. ಎ ಲಿಸ್ಟ್ ನಲ್ಲಿಯೂ 8 ಪಂದ್ಯಗಳಲ್ಲಿ ಶತಕದ ನೆರವಿನಿಂದ 299 ರನ್ ಗಳಿಸಿದ್ದಾರೆ. ತಮ್ಮ ಒಟ್ಟಾರೆ T20 ವೃತ್ತಿಜೀವನದಲ್ಲಿ, ಯಶ್ 12 ಪಂದ್ಯಗಳ 11 ಇನ್ನಿಂಗ್ಸ್‌ ಗಳಲ್ಲಿ 3 ಅರ್ಧ ಶತಕಗಳ ಸಹಾಯದಿಂದ 379 ರನ್ ಗಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ