Yashasvi Jaiswal century News : ಭಾರತದ ಯುವ ಸ್ಟಾರ್ ಯಶಸ್ವಿ ಜೈಸ್ವಾಲ್ ಟೆಸ್ಟ್ ಮಾದರಿಯಲ್ಲಿ ಆರಂಭಿಕ ಆಟಗಾರನಾಗಿ ಅಬ್ಬರಿಸುತ್ತಿದ್ದಾರೆ. ರಾಜ್‌ಕೋಟ್ ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯ ನಡೆಯುತ್ತಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್ ಭಾರತದ ಪರ ಅದ್ಭುತ ಶತಕ ಬಾರಿಸಿದರು. 5 ಸಿಕ್ಸರ್ ಮತ್ತು 9 ಬೌಂಡರಿಗಳ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ತಮ್ಮ ನಾಲ್ಕನೇ ಶತಕವನ್ನು ದಾಖಲಿಸಿದರು. 


COMMERCIAL BREAK
SCROLL TO CONTINUE READING

ಯಶಸ್ವಿ ಜೈಸ್ವಾಲ್ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ತಮ್ಮ ಬ್ಯಾಟಿಂಗ್‌ ಶೈಲಿಯಿಂದ ಸಂಚಲನ ಮೂಡಿಸಿದ್ದಾರೆ. ಯಶಸ್ವಿ ಜೈಸ್ವಾಲ್ ಅವರ ಈ ಆಟದಿಂದ ಟೆಸ್ಟ್ ಮಾದರಿಯಲ್ಲಿ ಆರಂಭಿಕ ಆಟಗಾರನಾಗಿ ಅವರ ಸ್ಥಾನ ಟೀಮ್‌ ಇಂಡಿಯಾದಲ್ಲಿ ಖಾತ್ರಿಯಾಗಿದೆ. ಆದರೆ ಕೆಲ ಟೀಮ್ ಇಂಡಿಯಾ ಆಟಗಾರರ ಬಾಗಿಲು ಮುಚ್ಚಿದೆ.


ಇದನ್ನೂ ಓದಿ: ಇತಿಹಾಸ ಸೃಷ್ಟಿಸಿದ ಅಶ್ವಿನ್.. ದಿಗ್ಗಜರ ದಾಖಲೆಳೆಲ್ಲ ಉಡೀಸ್! 


ಅಭಿಮನ್ಯು ಈಶ್ವರನ್: 28 ವರ್ಷದ ಅಭಿಮನ್ಯು ಟೀಮ್ ಇಂಡಿಯಾದಲ್ಲಿ ಎರಡ್ಮೂರು ಬಾರಿ ಸ್ಥಾನ ಪಡೆದಿದ್ದರು. ಆದರೆ ಪ್ಲೇಯಿಂಗ್ 11 ರಲ್ಲಿ ಆಡಲು ಅವಕಾಶ ಸಿಗಲಿಲ್ಲ. ಇದೀಗ ಟೀಮ್ ಇಂಡಿಯಾದಲ್ಲಿ ಹಲವು ಓಪನರ್‌ಗಳಿರುವ ಕಾರಣ ಇವರ ವಾಪಾಸಾತಿ ಕಷ್ಟವಾಗಿದೆ.


ಪೃಥ್ವಿ ಶಾ: 24 ವರ್ಷದ ಪೃಥ್ವಿ ಶಾ ಭಾರತ ಪರ 5 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 2020 ರಲ್ಲಿ ಕೊನೆಯ ಟೆಸ್ಟ್ ಆಡಿದ್ದ ಪೃಥ್ವಿ ಶಾ, ಗಾಯದ ಸಮಸ್ಯೆಯಿಂದ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಇತ್ತೀಚೆಗಷ್ಟೇ ಪೃಥ್ವಿ ಶಾ ವಾಪಸ್ಸಾಗಿದ್ದಾರೆ. ಆದರೆ ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ಪೃಥ್ವಿ ಶಾ ಮರಳುವುದು ಕಷ್ಟಸಾಧ್ಯ ಎನ್ನಲಾಗ್ತಿದೆ. 


ಇದನ್ನೂ ಓದಿ: ರಾಜ್’ಕೋಟ್’ನಲ್ಲಿ ಯಶಸ್ವಿ ಬ್ಯಾಟಿಂಗ್ ಅಬ್ಬರ… ಮತ್ತೊಂದು ಟೆಸ್ಟ್ ಶತಕ ಸಿಡಿಸಿದ ಜೈಸ್ವಾಲ್


ಮಯಾಂಕ್ ಅಗರ್ವಾಲ್: 33 ವರ್ಷದ ಮಯಾಂಕ್ ಅಗರ್ವಾಲ್ ಭಾರತದ ಓಪನರ್ ಆಗಿದ್ದಾರೆ. 2022 ರಿಂದ ಮಯಾಂಕ್ ತಂಡದಿಂದ ಹೊರಗುಳಿದಿದ್ದಾರೆ. ಮಯಾಂಕ್ ಅವರು ಭಾರತಕ್ಕಾಗಿ 21 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.  ಮಯಾಂಕ್ ಅಗರ್ವಾಲ್ ಹೆಸರಲ್ಲಿ 4 ಶತಕಗಳಿವೆ. ಆದರೆ ಇದೀಗ ಅವರ ಹಾದಿ ಸುಲಭವಲ್ಲ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.