ವಿಶ್ವದ ಬೆಸ್ಟ್ ಫಾಸ್ಟ್ ಬೌಲರ್ನ್ನೇ ಮೈದಾನದಲ್ಲಿ ಹೀಯಾಳಿಸಿದ ಯಶಸ್ವಿ ಜೈಸ್ವಾಲ್..! ʼಮರಿ ಹುಲಿʼ ಖದರ್‌ಗೆ ಅವಮಾನಗೊಂಡ ಆಸೀಸ್ ಆಟಗಾರ ಏನ್ ಮಾಡಿದ್ರು ನೋಡಿ
Yashasvi Jaiswal century: ಸ್ಟಾರ್ಕ್ ಸ್ಟಂಪ್ ಹೊರಗೆ ಫುಲ್ ಲೆಂಗ್ತ್ ಎಸೆತವನ್ನು ಬೌಲ್ಡ್ ಮಾಡಿದರು. ಆದರೆ ಯಶಸ್ವಿ ಜೈಸ್ವಾಲ್ ಆ ಎಸೆತವನ್ನು ವಿಸ್ತಾರವಾಗಿ ಹೊಡೆದರು. ಬಾಲ್ ಬೌಂಡರಿ ಗೆರೆ ತಲುಪಿತ್ತು. ಈ ಸಂದರ್ಭದಲ್ಲಿ ಸ್ಟಾಕ್, ಯಶಸ್ವಿಯನ್ನು ನೋಡಿ ಅಣಕಿಸುವಂತೆ ಮಾಡಿದ್ದರು.
Yashasvi Jaiswal: ನವೆಂಬರ್ 23ರ ಶನಿವಾರದಂದು ಪರ್ತ್ ಟೆಸ್ಟ್‌ನ 2 ನೇ ದಿನ... ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಅವರನ್ನು ಸ್ಲೆಡ್ಜ್ ಮಾಡಲು ಯಶಸ್ವಿ ಜೈಸ್ವಾಲ್ ನಿರ್ಧಾರ ಮಾಡಿಯಾಗಿತ್ತು. ಭಾರತದ ಎರಡನೇ ಇನ್ನಿಂಗ್ಸ್ 19 ನೇ ಓವರ್‌ನಲ್ಲಿ ಆರಂಭಿಕ ಆಟಗಾರನು ಲಾಫ್ಟ್ ಶಾಟ್‌ಗಾಗಿ ಪೇಸರ್‌ಗೆ ಹೊಡೆದಾಗ ಜೈಸ್ವಾಲ್ ಮತ್ತು ಸ್ಟಾರ್ಕ್ ಫನ್ನಿ ಮಾತುಕತೆ ಮಾಡಿಕೊಂಡಿದ್ದಾರೆ.
ಸ್ಟಾರ್ಕ್ ಸ್ಟಂಪ್ ಹೊರಗೆ ಫುಲ್ ಲೆಂಗ್ತ್ ಎಸೆತವನ್ನು ಬೌಲ್ಡ್ ಮಾಡಿದರು. ಆದರೆ ಯಶಸ್ವಿ ಜೈಸ್ವಾಲ್ ಆ ಎಸೆತವನ್ನು ವಿಸ್ತಾರವಾಗಿ ಹೊಡೆದರು. ಬಾಲ್ ಬೌಂಡರಿ ಗೆರೆ ತಲುಪಿತ್ತು. ಈ ಸಂದರ್ಭದಲ್ಲಿ ಸ್ಟಾಕ್, ಯಶಸ್ವಿಯನ್ನು ನೋಡಿ ಅಣಕಿಸುವಂತೆ ಮಾಡಿದ್ದರು.
ಆದರೆ ಜೈಸ್ವಾಲ್ "ನೀವು ತುಂಬಾ ನಿಧಾನವಾಗಿ ಬರುತ್ತಿದ್ದೀರಿ" ಎಂದು ಮೈದಾನದಲ್ಲೇ ಕಾಲೆಳೆದಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮರಿ ಹುಲಿ ಯಶಸ್ವಿ ಖದರ್‌ಗೆ ವಿಶ್ವದ ಫಾಸ್ಟ್ ಬೌಲರ್ ಕೂಡ ಗಪ್‌ಚುಪ್ ಆಗಿದ್ದಾರೆ ಎಂದೆಲ್ಲಾ ಬರೆದುಕೊಳ್ಳುತ್ತಿದ್ದಾರೆ.
ಭಾರತ 130 ರನ್‌ಗಳ ಮುನ್ನಡೆಯೊಂದಿಗೆ ಟೀ ಬ್ರೇಕ್ ಪಡೆದುಕೊಂಡಾಗ ಯಶಸ್ವಿ 88 ಎಸೆತಗಳಲ್ಲಿ 42 ರನ್ ಗಳಿಸಿದ್ದರು. ಇದರೊಂದಿಗೆ ಜೈಸ್ವಾಲ್ ಅವರು ಗೌತಮ್ ಗಂಭೀರ್ ಹೆಸರಿನಲ್ಲಿದ್ದ 16 ವರ್ಷಗಳ ಹಳೆಯ ದಾಖಲೆಯನ್ನೂ ಮುರಿದಿದ್ದರು. ಜೈಸ್ವಾಲ್ ಈಗ ಒಂದು ಕ್ಯಾಲೆಂಡರ್ ವರ್ಷದಲ್ಲಿ ಟೆಸ್ಟ್‌ನಲ್ಲಿ ಭಾರತೀಯ ಎಡಗೈ ಬ್ಯಾಟರ್ ಆಗಿ ಅತಿ ಹೆಚ್ಚು ರನ್ ಗಳಿಸಿದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಇಂದಿನ ಅಪ್ಡೇಟ್:
ಆಸ್ಟ್ರೇಲಿಯಾದಲ್ಲಿ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್ ಆಡುತ್ತಿರುವ ಯಶಸ್ವಿ ಜೈಸ್ವಾಲ್, ಪರ್ತ್‌ನ ಕಠಿಣ ಪಿಚ್ʼನಲ್ಲಿ ಶತಕ ಬಾರಿಸುವ ಮೂಲಕ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಆಸ್ಟ್ರೇಲಿಯಾ ನೆಲದಲ್ಲಿ ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ ಖಾತೆ ತೆರೆಯಲು ವಿಫಲರಾದ ಯಶಸ್ವಿ, ಕೇವಲ 24 ಗಂಟೆಗಳಲ್ಲಿ ಅದ್ಭುತ ಪುನರಾಗಮನವನ್ನು ಮಾಡಿದ್ದಾರೆ. ಜೊತೆಗೆ ತಮ್ಮ ಟೆಸ್ಟ್ ವೃತ್ತಿಜೀವನದ ನಾಲ್ಕನೇ ಶತಕ ಗಳಿಸಿದ್ದಾರೆ. ಯಶಸ್ವಿ ಅವರ ಈ ಅದ್ಭುತ ಶತಕ ಮತ್ತು ಕೆಎಲ್ ರಾಹುಲ್ ಜೊತೆಗಿನ ದಾಖಲೆಯ ಜೊತೆಯಾಟವು ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಬಲಿಷ್ಠ ಸ್ಥಿತಿಯಲ್ಲಿರಿಸಿದೆ
ಪರ್ತ್‌ನಲ್ಲಿ ಯಶಸ್ವಿ 205 ಎಸೆತಗಳಲ್ಲಿ ತಮ್ಮ ಅದ್ಭುತ ಶತಕದ ದಾಖಲೆ ಬರೆದಿದ್ದಾರೆ. ಈ ಶತಕದ ಮೂಲಕ ಇತಿಹಾಸವನ್ನೂ ಸೃಷ್ಟಿಸಿದರು. ಎಂಎಲ್ ಜೈಸಿಂಹ ಮತ್ತು ಸುನಿಲ್ ಗವಾಸ್ಕರ್ ನಂತರ, ಆಸ್ಟ್ರೇಲಿಯಾದ ನೆಲದಲ್ಲಿ ಆಡಿದ ತಮ್ಮ ಮೊದಲ ಟೆಸ್ಟ್ʼನಲ್ಲಿ ಶತಕ ಗಳಿಸಿದ ಮೂರನೇ ಭಾರತೀಯ ಎಂಬ ಹೆಗ್ಗಳಿಕೆಗೆ ಜೈಸ್ವಾಲ್ ಪಾತ್ರರಾಗಿದ್ದಾರೆ. ಆಸ್ಟ್ರೇಲಿಯಾದಲ್ಲಿ ಶತಕ ಬಾರಿಸಿದ ನಾಲ್ಕನೇ ಅತಿ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇದು ಆಸ್ಟ್ರೇಲಿಯಾ ವಿರುದ್ಧ ಗಳಿಸಿದ ಒಟ್ಟಾರೆ ಮೊದಲ ಶತಕ ಮತ್ತು ವಿದೇಶಿ ನೆಲದಲ್ಲಿ ಗಳಿಸಿದ ಎರಡನೇ ಶತಕವಾಗಿದೆ.
ಮೊದಲ ಬಾರಿಗೆ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ಜೈಸ್ವಾಲ್ ಅವರು ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಎದುರಾಳಿಗಳನ್ನು ಸೋಲಿಸುವುದು ಮಾತ್ರವಲ್ಲದೆ ಕ್ರೀಸ್‌ನಲ್ಲಿ ಉಳಿದು ಹಳೆಯ ಶೈಲಿಯ ಬ್ಯಾಟಿಂಗ್ ಮೂಲಕ ಬೌಲರ್‌ಗಳನ್ನು ಬೆಂಡೆತ್ತುತ್ತಿದ್ದಾರೆ. ಪರ್ತ್‌ನಲ್ಲಿ ಶತಕ ಬಾರಿಸಿ ಆಸ್ಟ್ರೇಲಿಯವನ್ನು ತಲ್ಲಣಗೊಳಿಸಿದ್ದ ಯಶಸ್ವಿ, ಟೆಸ್ಟ್ ಕ್ರಿಕೆಟ್‌ನಲ್ಲಿ 1500 ರನ್ ಪೂರೈಸಿದ್ದಾರೆ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.