World Cup 2023, Yashasvi Jaiswal: 2023 ರ ವಿಶ್ವಕಪ್‌ ನಲ್ಲಿ ಶುಭ್ಮನ್ ಗಿಲ್ ಸ್ಥಾನವನ್ನು ಕಿತ್ತುಕೊಳ್ಳಬಲ್ಲ ಸಾಮಾರ್ಥ್ಯ ಆ ಒಬ್ಬ ಆಟಗಾರನಿಗೆ ಇದೆ. ಕೇವಲ ಒಬ್ಬ ಬ್ಯಾಟ್ಸ್‌ಮನ್‌’ನಿಂದಾಗಿ ಈ ವರ್ಷ ಭಾರತದ ನೆಲದಲ್ಲಿ ನಡೆಯಲಿರುವ 2023 ರ ವಿಶ್ವಕಪ್ ಪಂದ್ಯಾವಳಿಯಲ್ಲಿ ಶುಭ್ಮನ್ ಗಿಲ್ ತಮ್ಮ ಆರಂಭಿಕ ಸ್ಥಾನವನ್ನು ಕಳೆದುಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ, ಈ ವರ್ಷ ಅಕ್ಟೋಬರ್ 5 ರಿಂದ ಭಾರತದಲ್ಲಿ ವಿಶ್ವಕಪ್ ಪ್ರಾರಂಭವಾಗಲಿದ್ದು, ಅದರ ಅಂತಿಮ ಪಂದ್ಯ ನವೆಂಬರ್ 19 ರಂದು ನಡೆಯಲಿದೆ. ವಿಶ್ವಕಪ್‌ ನಲ್ಲಿ ಶುಭಮನ್ ಗಿಲ್ ಅವರ ಆರಂಭಿಕ ಸ್ಥಾನಕ್ಕೆ ಈ ಬ್ಯಾಟ್ಸ್‌ಮನ್ ದೊಡ್ಡ ಅಪಾಯದಂತೆ ಕಾಣಿಕೊಳ್ಳುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Arjun Tendulkar: ಅರ್ಜುನ್ ತೆಂಡೂಲ್ಕರ್ ಮೇಲೆ ನಾಯಿ ದಾಳಿ: ಸ್ವಲ್ಪದರಲ್ಲೇ ಪಾರಾದ ಸಚಿನ್ ಪುತ್ರನ ಭವಿಷ್ಯ!


ಭಾರತದ ಈ ಅಪಾಯಕಾರಿ ಬ್ಯಾಟ್ಸ್‌ಮನ್ ಕ್ರೀಸ್‌ ಗೆ ಬಂದಾಗ, ತನ್ನ ಸ್ಫೋಟಕ ಬ್ಯಾಟ್ಸ್‌ಮನ್‌ ನಿಂದ ಎದುರಾಳಿ ತಂಡದ ಬೌಲರ್‌ಗಳನ್ನು ಬೆಂಡೆತ್ತುತ್ತಾರೆ.  2023ರ ವಿಶ್ವಕಪ್‌ ಗೆ 5-6 ತಿಂಗಳ ಮೊದಲು ಟೀಮ್ ಇಂಡಿಯಾದ ಆಯ್ಕೆಗಾರರು ಈ ಆಟಗಾರನ ಮೇಲೆ ಕಣ್ಣಿಟ್ಟಿದ್ದಾರೆ. ಈ ಬ್ಯಾಟ್ಸ್‌ಮನ್‌ನ ಕಿಲ್ಲರ್ ಬ್ಯಾಟಿಂಗ್ ನೋಡಿ, 2023 ರ ವಿಶ್ವಕಪ್‌ನಲ್ಲಿ ಶುಭ್ಮನ್ ಗಿಲ್ ಬದಲಿಗೆ ಅವರನ್ನು ಆಯ್ಕೆ ಮಾಡಲು ಆಯ್ಕೆದಾರರು ಮನಸ್ಸು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.


ಭಾರತದ ಈ ಅಪಾಯಕಾರಿ ಬ್ಯಾಟ್ಸ್‌ಮನ್ ಬೇರೆ ಯಾರೂ ಅಲ್ಲ ಯಶಸ್ವಿ ಜೈಸ್ವಾಲ್. ಯಶಸ್ವಿ ಜೈಸ್ವಾಲ್ 2023 ರ ವಿಶ್ವಕಪ್‌ ನಲ್ಲಿ ಶುಭ್ಮನ್ ಗಿಲ್ ಅವರ ಸ್ಥಾನವನ್ನು ಕಿತ್ತಿಕೊಳ್ಳಬಹುದು. ಸದ್ಯ ರಾಜಸ್ಥಾನ್ ರಾಯಲ್ಸ್ ತಂಡದ ಪರವಾಗಿ ಆಡುತ್ತಿರುವ ಯಶಸ್ವಿ ಜೈಸ್ವಾಲ್ ಈ ದಿನಗಳಲ್ಲಿ ಸ್ಪೋಟಕ ಬ್ಯಾಟಿಂಗ್ ಮಾಡುತ್ತಿದ್ದಾರೆ.


ಯಶಸ್ವಿ ಜೈಸ್ವಾಲ್ ಐಪಿಎಲ್ 2023ರಲ್ಲಿ ಇದುವರೆಗೆ 13 ಪಂದ್ಯಗಳಲ್ಲಿ ಆಡಿದ್ದಾರೆ. 166.18 ಸ್ಟ್ರೈಕ್ ರೇಟ್‌ ನಲ್ಲಿ 74 ಬೌಂಡರಿ ಮತ್ತು 26 ಸಿಕ್ಸರ್‌ ಗಳನ್ನು ಒಳಗೊಂಡಂತೆ 575 ರನ್ ಗಳಿಸಿದ್ದಾರೆ. ಯಶಸ್ವಿ ಜೈಸ್ವಾಲ್ ಐಪಿಎಲ್ 2023 ರಲ್ಲಿ 1 ಶತಕ ಮತ್ತು 4 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಇವರ ಅತ್ಯುತ್ತಮ ಸ್ಕೋರ್ 124 ರನ್ ಆಗಿದೆ.


ಈಗ ಶುಭಮನ್ ಗಿಲ್ ಬಗ್ಗೆ ಮಾತನಾಡುವುದಾದರೆ, ಪಿಎಲ್ 2023ರ 13 ಪಂದ್ಯಗಳಲ್ಲಿ 146.19 ಸ್ಟ್ರೈಕ್ ರೇಟ್‌ ನಲ್ಲಿ 62 ಬೌಂಡರಿಗಳು ಮತ್ತು 14 ಸಿಕ್ಸರ್‌ ಗಳನ್ನು ಒಳಗೊಂಡಂತೆ 576 ರನ್ ಗಳಿಸಿದ್ದಾರೆ. ಯಶಸ್ವಿ ಜೈಸ್ವಾಲ್ ಅವರನ್ನು ಶುಭ್ಮನ್‌  ಗೆ ಹೋಲಿಸಿದರೆ, ಅವರು ಗಿಲ್‌ ಗಿಂತ 12 ಬೌಂಡರಿ ಮತ್ತು 12 ಸಿಕ್ಸರ್‌ ಗಳನ್ನು ಹೆಚ್ಚು ಬಾರಿಸಿದ್ದಾರೆ. ಯಶಸ್ವಿ ಜೈಸ್ವಾಲ್ 166.18 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದಾರೆ. ಶುಭಮನ್ ಗಿಲ್ ಕೇವಲ 146.19 ಸ್ಟ್ರೈಕ್ ರೇಟ್‌ನಲ್ಲಿ ರನ್ ಸೇರಿಸಿದ್ದಾರೆ. ಯಶಸ್ವಿ ಜೈಸ್ವಾಲ್ ಎಡಗೈ ಬ್ಯಾಟ್ಸ್‌ಮನ್. ಇಂತಹ ಬ್ಯಾಟ್ಸ್‌ಮನ್‌ಗಳು ತಂಡಕ್ಕೆ ದೊಡ್ಡ ಎಕ್ಸ್-ಫ್ಯಾಕ್ಟರ್ ಎಂದು ಸಾಬೀತುಪಡಿಸುತ್ತಾರೆ.


2023ರ ವಿಶ್ವಕಪ್‌ ನಲ್ಲಿ ಶುಭ್ಮನ್ ಗಿಲ್ ಬದಲಿಗೆ ಯಶಸ್ವಿ ಜೈಸ್ವಾಲ್‌ ಗೆ ಅವಕಾಶ ಸಿಕ್ಕರೆ ಅದರಿಂದ ಭಾರತಕ್ಕೆ ಸಾಕಷ್ಟು ಲಾಭವಾಗಲಿದೆ. ಎಡಗೈ ಬಿರುಸಿನ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಮತ್ತು ಬಲಗೈ ಆರಂಭಿಕ ರೋಹಿತ್ ಶರ್ಮಾ ಅವರ ಆರಂಭಿಕ ಸಂಯೋಜನೆಯು 2023 ರ ವಿಶ್ವಕಪ್‌ ನಲ್ಲಿ ಟೀಮ್ ಇಂಡಿಯಾಗೆ ಹೊಸ ದಿಕ್ಕನ್ನೇ ನೀಡಬಹುದು.


ಇದನ್ನೂ ಓದಿ: Team India: ರೋಹಿತ್ ಶರ್ಮಾ ನಿವೃತ್ತಿ ಬಳಿಕ ಟೀಂ ಇಂಡಿಯಾದ ನಾಯಕನಾಗೋದು ಈ ಸ್ಟಾರ್ ಬ್ಯಾಟ್ಸ್’ಮನ್!


ಯಶಸ್ವಿ ಜೈಸ್ವಾಲ್ ಅವರು 2023 ರ ವಿಶ್ವಕಪ್‌ ನಲ್ಲಿ ಭಾರತೀಯ ಪಿಚ್‌ ಗಳಲ್ಲಿ ಶುಭಮನ್ ಗಿಲ್‌ ಗಿಂತ ವೇಗವಾಗಿ ರನ್ ಗಳಿಸಬಹುದು ಎಂದು ಹೇಳಲಾಗುತ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ