Yuvraj Singh T20 World Cup 2024 Ambassador: ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಭಾರತದ ದಂತಕಥೆ ಯುವರಾಜ್ ಸಿಂಗ್ ಅವರನ್ನು ಐಸಿಸಿ ಪುರುಷರ T20 ವಿಶ್ವಕಪ್ 2024 ರಾಯಭಾರಿ ಎಂದು ಘೋಷಿಸಿದೆ. 2007 ರಲ್ಲಿ ಭಾರತವು ಮೊದಲ T20 ವಿಶ್ವಕಪ್‌ ಟ್ರೋಫಿ ಗೆದ್ದಿತ್ತು. ಆ ಪಂದ್ಯದ ಒಂದು ಓವರ್‌’ನಲ್ಲಿ ಯುವರಾಜ್ ಸಿಂಗ್ 36 ರನ್ ಗಳಿಸಿದ್ದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಈ 4 ಗಿಡಗಳನ್ನು ಮನೆಯಲ್ಲಿ ನೆಟ್ಟರೆ ಸೊಳ್ಳೆಗಳು ಹತ್ತಿರವೂ ಸುಳಿಯುವುದಿಲ್ಲ!


ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ಯುವರಾಜ್ ಸಿಂಗ್, "ಒಂದು ಓವರ್‌’ನಲ್ಲಿ ಆರು ಸಿಕ್ಸರ್‌ ಬಾರಿಸಿರುವುದು ಸೇರಿದಂತೆ T20 ವಿಶ್ವಕಪ್‌’ನಲ್ಲಿ ನನ್ನ ಕೆಲವು ಅಚ್ಚುಮೆಚ್ಚಿನ ಕ್ರಿಕೆಟ್ ನೆನಪುಗಳು ಇವೆ. ಆದ್ದರಿಂದ ಈ ಆವೃತ್ತಿಯ ಭಾಗವಾಗಲು ಸಂತಸವಾಗುತ್ತಿದೆ. ವೆಸ್ಟ್ ಇಂಡೀಸ್ ಕ್ರಿಕೆಟ್ ಆಡಲು ಉತ್ತಮ ಸ್ಥಳ. ಆದರೆ USA ಕಡೆ ಕ್ರಿಕೆಟ್ ವಿಸ್ತರಿಸಿದ್ದು, ಆ ಬೆಳವಣಿಗೆಯ ಭಾಗವಾಗಲು ಉತ್ಸುಕನಾಗಿದ್ದೇನೆ” ಎಂದಿದ್ದಾರೆ.


ಐಸಿಸಿ ಜನರಲ್ ಮ್ಯಾನೇಜರ್  ಕ್ಲೇರ್ ಫರ್ಲಾಂಗ್ ಮಾತನಾಡಿ, "ಯುವರಾಜ್ ಅವರನ್ನು ಐಸಿಸಿ ಪುರುಷರ T20 ವಿಶ್ವಕಪ್ ರಾಯಭಾರಿಯಾಗಿ ಮಾಡಿರುವುದು ಸಂತಸ. ಅವರ ಹೆಸರು T20 ವಿಶ್ವಕಪ್‌’ಗೆ ಸಮಾನಾರ್ಥಕವಾಗಿದೆ. T20 ಇಂಟರ್‌ನ್ಯಾಶನಲ್‌’ನಲ್ಲಿ ಆರು ಸಿಕ್ಸರ್‌’ಗಳನ್ನು ಬಾರಿಸಿದ ಮೊದಲ ಆಟಗಾರ ಅವರು. ಕ್ರಿಸ್ ಗೇಲ್ ಮತ್ತು ಉಸೇನ್ ಬೋಲ್ಟ್‌ ಮೊದಲ ರಾಯಭಾರಿಗಳಾಗಿ ಸೇರುತ್ತಾರೆ” ಎಂದಿದ್ದಾರೆ.


ಇದನ್ನೂ ಓದಿ: ತೆಂಗಿನೆಣ್ಣೆಗೆ ಈ ಹಣ್ಣಿನ ರಸ ಬೆರೆಸಿ ಹಚ್ಚಿ: ಚಿಟಿಕೆಯಲ್ಲಿ ಬಿಳಿಕೂದಲು ಶಾಶ್ವತವಾಗಿ ಕಡುಕಪ್ಪಾಗುವುದಲ್ಲದೆ ಮಾರುದ್ದ ಸೊಂಪಾಗಿ ಬೆಳೆಯುತ್ತೆ!


ICC ಪುರುಷರ T20 ವಿಶ್ವಕಪ್ ಜೂನ್ 1-29 ರವರೆಗೆ ಟೆಕ್ಸಾಸ್‌’ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿ ಆರಂಭಿಕ ಪಂದ್ಯದಲ್ಲಿ ಸಹ-ಆತಿಥೇಯ USA ಕೆನಡಾವನ್ನು ಎದುರಿಸಲಿದೆ. ಒಟ್ಟು 55 ಪಂದ್ಯಗಳನ್ನು 20 ತಂಡಗಳು 9 ಸ್ಥಳಗಳಲ್ಲಿ ಆಡಲಿದ್ದು, ಜೂನ್ 29 ರಂದು ಬಾರ್ಬಡೋಸ್‌’ನಲ್ಲಿ ಫೈನಲ್‌ನಲ್ಲಿ ಮುಕ್ತಾಯಗೊಳ್ಳಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್