Fastest Fifty Record in T20 : ಭಾರತದ  ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರು ಕ್ರಿಕೆಟ್ ಮೈದಾನದಲ್ಲಿ ಹಲವು ದಾಖಲೆಗಳನ್ನು ಮಾಡಿದ್ದಾರೆ. 2007ರ ಟಿ20 ವಿಶ್ವಕಪ್‌ನಲ್ಲಿ ಯುವಿ ಬೃಹತ್ ದಾಖಲೆ  ಬರೆದಿದ್ದರು. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಿದ ವಿಶ್ವದಾಖಲೆ ಇನ್ನೂ ಯುವಿ ಹೆಸರಿನಲ್ಲಿದೆ. ಈ ಮಧ್ಯೆ, ಅವರ ಒಂದು ದಾಖಲೆಯು 21 ದಿನಗಳಲ್ಲಿ ಎರಡು ಬಾರಿ ಮುರಿದಿದೆ.


COMMERCIAL BREAK
SCROLL TO CONTINUE READING

21 ದಿನಗಳಲ್ಲಿ ಎರಡು ಬಾರಿ ದಾಖಲೆ  ಬ್ರೇಕ್ : 
ಯುವರಾಜ್ 2007ರ ಟಿ20 ವಿಶ್ವಕಪ್‌ನಲ್ಲಿ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ವಿಶ್ವದಾಖಲೆ ನಿರ್ಮಿಸಿದ್ದರು. ಆ ವೇಳೆ, ಇಂಗ್ಲೆಂಡ್‌ನ ಸ್ಟಾರ್ ವೇಗಿ ಸ್ಟುವರ್ಟ್ ಬ್ರಾಡ್ ಅವರ ಒಂದು ಓವರ್‌ನಲ್ಲಿ 6 ಸಿಕ್ಸರ್‌ಗಳನ್ನು ಬಾರಿಸಿದ್ದರು.
ಇದೀಗ 16 ವರ್ಷಗಳ ಬಳಿಕ ಯುವರಾಜ್ ದಾಖಲೆಯನ್ನು ಮುರಿಯಲಾಗಿದೆ.  ಅತಿ ವೇಗದಲ್ಲಿ ಅರ್ಧಶತಕ ಪೂರೈಸಿದ ದಾಖಲೆಯನ್ನು ಮೊದಲು ನೇಪಾಳದ ದೀಪೇಂದ್ರ ಸಿಂಗ್  ಮುರಿದರೆ, ಇದಾದ ಬಳಿಕ ಅಶುತೋಷ್ ಶರ್ಮಾ ಕೂಡಾ ಈ ಸಾಲಿಗೆ ಸೇರಿಕೊಂಡಿದ್ದಾರೆ. ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅಶುತೋಷ್ ಈ ಸಾಧನೆ ಮಾಡಿದ್ದಾರೆ. 


ಇದನ್ನೂ ಓದಿ : ಭಾರತದ ವಿರುದ್ಧ ಹೀನಾಯ ಸೋಲು: ಐಸಿಸಿಗೆ ಪಾಕ್ ಕ್ರಿಕೆಟ್ ಮಂಡಳಿಯಿಂದ ದೂರು!


9 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ದೀಪೇಂದ್ರ  : 
ಚೀನಾದ ಹ್ಯಾಂಗ್‌ಝೌನಲ್ಲಿ ಸೆಪ್ಟೆಂಬರ್ 27 ರಂದು ನಡೆದ ಈ ಪಂದ್ಯದಲ್ಲಿ ದೀಪೇಂದ್ರ ಸಿಂಗ್ ಕೇವಲ 9 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಈ ಪಂದ್ಯದಲ್ಲಿ ದೀಪೇಂದ್ರ ಸಿಂಗ್ 5ನೇ ಸ್ಥಾನದಲ್ಲಿ ಬಂದು 10 ಎಸೆತಗಳಲ್ಲಿ 8 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ 52 ರನ್ ಗಳಿಸಿ ಅಜೇಯರಾಗಿ ಉಳಿದರು. 


ಅಬ್ಬರಿಸಿದ ಅಶುತೋಷ್ : 
ಇದೀಗ ನಿನ್ನೆ ನಡೆದ ಟಿ20 ಮುಷ್ತಾಕ್ ಅಲಿ ಟ್ರೋಫಿ ಟೂರ್ನಮೆಂಟ್ ನಲ್ಲಿ  ಅಶುತೋಷ್ ಶರ್ಮಾ ಸ್ಪೋಟಕ ಬ್ಯಾಟಿಂಗ್ ಮಾಡಿದ್ದಾರೆ. . ಕೇವಲ 11 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದಾರೆ. ರೈಲ್ವೇಸ್ ಪ್ರತಿನಿಧಿಸುತ್ತಿರುವ  25 ವರ್ಷದ ಅಶುತೋಷ್ 12 ಎಸೆತಗಳಲ್ಲಿ 53 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಅವಧಿಯಲ್ಲಿ 442 ಸ್ಟ್ರೈಕ್ ರೇಟ್‌ನಲ್ಲಿ ಆಡಿದ ಅವರು 1 ಬೌಂಡರಿ ಮತ್ತು 8 ಸಿಕ್ಸರ್‌ಗಳನ್ನು ಬಾರಿಸಿದರು. 


ಇದನ್ನೂ ಓದಿ : ಬಾಂಗ್ಲಾ ವಿರುದ್ದ ರೋಹಿತ್ ಜೊತೆ ಓಪನಿಂಗ್ ಮಾಡುವವರು ಇವರೇ ! ಈ ಬ್ಯಾಟ್ಸ್ ಮ್ಯಾನ್ ತಂಡದಿಂದ ಔಟ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್