ಕ್ರಿಕೆಟ್​ ಲೋಕದಲ್ಲಿ ಕ್ಯೂಟ್​ ಜೋಡಿ ಎಂದೇ ಗುರುತಿಸಿ ಕೊಂಡಿರುವ ಟೀಂ ಇಂಡಿಯಾದ ಸ್ಪೋಟಕ ಬೌಲರ್​ ಯುಜವೇಂದ್ರ ಚಹಲ್  ಮತ್ತು ಪತ್ನಿ ಧನಶ್ರೀ ವರ್ಮಾ ಸಂಬಂಧದಲ್ಲಿ ಬಿರುಕು ಉಂಟಾಗಿದೆ ಎಂಬ ಗಾಳಿಸುದ್ದಿ ಹರಿದಾಡುತ್ತಿದೆ.


COMMERCIAL BREAK
SCROLL TO CONTINUE READING

ಮತ್ತಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟ ಈ ಪೋಸ್ಟ್


ಚಹಾಲ್ ಮತ್ತು ಧನಶ್ರೀ ದಾಂಪತ್ಯ ಜೀವನದಲ್ಲಿ ಇದೀಗ ಬಿರುಕು ಮೂಡಿದೆ ಎಂಬ ಅನುಮಾನಗಳು ಉಂಟಾಗಿದೆ. ಇದಕ್ಕೆ ಕಾರಣ ಅವರಿಬ್ಬರ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪೋಸ್ಟ್. ಹೌದು, ಮೊದಲಿಗೆ ಧನಶ್ರೀ ತಮ್ಮ ಇನ್​ಸ್ಟಾಗ್ರಾಂ ನಲ್ಲಿ ತಮ್ಮ ಹೆಸರಿನ ಮುಂದೆ ಪತಿ ಚಹಾಲ್ ಹೆಸರನ್ನು ತೆಗೆದು ಹಾಕಿ, ಧನಶ್ರೀ ಮಾತ್ರ ಉಳಿಸಿಕೊಂಡಿದ್ದಾರೆ. ಇದು ಸಧ್ಯ, ಇದೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. 


ಇದನ್ನೂ ಓದಿ : Team India : ರೋಹಿತ್‌ನಂತೆ ಈ ಸ್ಫೋಟಕ ಬ್ಯಾಟ್ಸಮನ್ ಗೆ ಓಪನರ್ ಆಗಿ ಚಾನ್ಸ್..!


ಬುಧವಾರ (ಆಗಸ್ಟ್ 17), ಚಹಾಲ್ ತಮ್ಮ ಟ್ವಿಟ್ಟರ್ ನಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದರು ಅದರಲ್ಲಿ "ನ್ಯೂ ಲೈಫ್ ಲೋಡ್ ಆಗುತ್ತಿದೆ....' ಎಂದು ಬರೆಯಲಾಗಿತ್ತು. 


ಧನಶ್ರೀ ಅವರೊಂದಿಗೆ ಚಹಲ್ ತಮ್ಮ ಮೊದಲ ಮಗುವನ್ನು ಸ್ವಾಗತಿಸಲಿದ್ದಾರೆ ಎಂದು ಕೆಲವರು ಭಾವಿಸಿದ್ದಾರೆ.


ಚಾಹಲ್ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿರುವ ಪೋಸ್ಟ್ ಅವರ ಪತ್ನಿ ಸರ್ ನೇಮ್ ಚೇಂಜ್ ಮಾಡಿರುವುದು ಕೆಲವು ಕೆಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. 


2022 ರ ಏಷ್ಯಾ ಕಪ್ ನಲ್ಲಿ  ಚಾಹಲ್ ಕಾಣಿಸಿಕೊಳ್ಳಲಿದ್ದಾರೆ, ಅಲ್ಲಿ ಭಾರತವು ಆಗಸ್ಟ್ 28 ರಂದು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಮೊದಲ ಪಂದ್ಯ ಆಡಲಿದೆ.


ಇದನ್ನೂ ಓದಿ : ಟಿಪಿಎಲ್ ಜೆರ್ಸಿ-ಟ್ರೋಫಿ ಬಿಡುಗಡೆ: ಇನ್ಮುಂದೆ ನಡೆಯಲಿದೆ ಕಿರುತೆರೆ ಕಲಾವಿದರ ಕ್ರಿಕೆಟ್ ಲೀಗ್


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.