Yuzvendra Chahal Asia cup 2023 : ಏಷ್ಯಾಕಪ್‌ಗೆ 17 ಸದಸ್ಯರ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿರುವುದು ಗೊತ್ತೇ ಇದೆ. ಗಾಯದ ನಂತರ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಮರು ಪ್ರವೇಶ ಮಾಡಿದರು. ತೆಲುಗಿನ ಹುಡುಗ ತಿಲಕ್ ವರ್ಮಾ ಏಕದಿನ ತಂಡವನ್ನು ಪ್ರವೇಶಿಸಿದ್ದಾರೆ. ತಂಡದಲ್ಲಿ ಸ್ಪಿನ್ ಆಲ್ ರೌಂಡರ್ ಗಳಾಗಿ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಆಯ್ಕೆಯಾಗಿದ್ದರೆ, ಕುಲದೀಪ್ ಯಾದವ್ ಅವರನ್ನು ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿ ತೆಗೆದುಕೊಳ್ಳಲಾಗಿದೆ. ಆದರೆ ಮತ್ತೊಬ್ಬ ಸ್ಪಿನ್ನರ್ ಯುಜುವೇಂದ್ರ ಚಾಹಲ್‌ಗೆ ತಂಡದಲ್ಲಿ ಸ್ಥಾನ ನೀಡಿಲ್ಲ, 


COMMERCIAL BREAK
SCROLL TO CONTINUE READING

ಏಷ್ಯಾಕಪ್‌ ನಿಂದ ತಮ್ಮ ಪತಿಯನ್ನು ತೆಗೆದುಹಾಕಿರುವ ಕುರಿತು ಚಹಾಲ್ ಪತ್ನಿ ಧನಶ್ರೀ ವರ್ಮಾ ಪ್ರತಿಕ್ರಿಯಿಸಿದ್ದಾರೆ. ಬಿಸಿಸಿಐಗೆ ನೇರವಾಗಿ ಪ್ರಶ್ನಿಸದಿದ್ದರೂ ಚಹಾಲ್ ಅವರನ್ನು ಆಯ್ಕೆ ಮಾಡದಿದ್ದಕ್ಕೆ ಪೋಸ್ಟ್ ಮಾಡಿದ್ದಾರೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಈಗ ಈ ವಿಷಯ ಗಂಭೀರವಾಗುತ್ತಿದೆ.


ಧೋನಿ-ಯುವಿ ಬಳಿಕ Team Indiaದಲ್ಲಿ ಫಿನಿಶಿಂಗ್ ಸ್ಥಾನ ತುಂಬಿದ ಏಕೈಕ ಆಟಗಾರ 31ರ ಹರೆಯದ ಈ ಕನ್ನಡಿಗ!


ತುಂಬಾ ವಿಧೇಯರಾಗಿರುವುದು.. ಕೆಲಸದಲ್ಲಿನ ಬೆಳವಣಿಗೆಗೆ ಅಡ್ಡಿಯೇ..? ಅಥವಾ ಜೀವನದಲ್ಲಿ ಮುಂದೆ ಬರಲು ನಾವೆಲ್ಲರೂ ಸ್ಮಾರ್ಟ್ ಆಗಬೇಕೇ..? ಎಂದು ಪ್ರಶ್ನೆ ಮಾಡಿದ್ದಾರೆ. ದೇವರು ದೊಡ್ಡವನು.. ಅದೃಷ್ಟವಶಾತ್ ಜಗತ್ತು ನಿಮ್ಮೊಂದಿಗಿದೆ ಎಂದು ಮರ್ಮ ನುಡಿಗಳನ್ನಾಡಿದ್ದಾರೆ. ಸದ್ಯ ಈ ಪೋಸ್ಟ್ ವೈರಲ್ ಆಗುತ್ತಿದೆ. ಚಹಲ್ ಈ ವರ್ಷ ಕೇವಲ ಎರಡು ಏಕದಿನ ಪಂದ್ಯಗಳಲ್ಲಿ ಆಡುವ ಅವಕಾಶ ಪಡೆಯುವ ಮೂಲಕ ಕೇವಲ 3 ವಿಕೆಟ್‌ ಗಳಿಸಿದ್ದರು. 


ಏಷ್ಯಾಕಪ್‌ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ಶ್ರೇಯಸ್ ಅಯ್ಯರ್, ಸೂರ್ಯ ಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಬುಮ್ರಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಪ್ರಸಾದ್ ಕೃಷ್ಣ. ಬ್ಯಾಕಪ್ ಆಟಗಾರ: ಸಂಜು ಸ್ಯಾಮ್ಸನ್ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.