Team India Cricket News: ಭಾರತದ ವೇಗದ ಬೌಲರ್ ಇಶಾಂತ್ ಶರ್ಮಾ ಆಘಾತಕಾರಿ ಹೇಳಿಕೆಯೊಂದನ್ನು ನೀಡುವ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ತಲ್ಲಣ ಮೂಡಿಸಿದ್ದಾರೆ. ಡ್ಯಾಶಿಂಗ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಭಾರತದ ದಂತಕಥೆ ವೇಗದ ಬೌಲರ್ ಜಹೀರ್ ಖಾನ್ ಅವರ ವೃತ್ತಿಜೀವನವನ್ನು ಕೊನೆಗೊಳಿಸಿದರು ಎಂದು ಇಶಾಂತ್ ಶರ್ಮಾ ಹೇಳಿದ್ದಾರೆ. ಜಹೀರ್ ಖಾನ್ 2014 ರಲ್ಲಿ ನ್ಯೂಜಿಲೆಂಡ್ ವಿರುದ್ಧ ವೆಲ್ಲಿಂಗ್ಟನ್‌ನಲ್ಲಿ ಭಾರತಕ್ಕಾಗಿ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನು ಆಡಿದ್ದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: IND vs PAK: ಭಾರತ-ಪಾಕ್ ವಿಶ್ವಕಪ್ ಪಂದ್ಯದ ದಿನಾಂಕ ಬದಲಾವಣೆ! ಈ ದಿನದಂದು ನಡೆಯಲಿದೆ ಐತಿಹಾಸಿಕ ಮ್ಯಾಚ್


ನ್ಯೂಜಿಲೆಂಡ್ ವಿರುದ್ಧದ ಆ ಟೆಸ್ಟ್ ಪಂದ್ಯದಲ್ಲಿ, ಫೀಲ್ಡಿಂಗ್ ಸಮಯದಲ್ಲಿ ಜಹೀರ್ ಖಾನ್ ಅವರ ಎಸೆತದಲ್ಲಿ ಅಪಾಯಕಾರಿ ಕಿವೀಸ್ ಬ್ಯಾಟ್ಸ್‌ಮನ್ ಬ್ರೆಂಡನ್ ಮೆಕಲಮ್ ಅವರ ಕ್ಯಾಚ್ ಅನ್ನು ವಿರಾಟ್ ಕೊಹ್ಲಿ ಕೈಬಿಟ್ಟರು. ಬ್ರೆಂಡನ್ ಮೆಕಲಮ್ ನಂತರ ಭಾರತದ ವಿರುದ್ಧದ ಪಂದ್ಯವನ್ನು ಡ್ರಾ ಮಾಡಲು 302 ರನ್‌ಗಳ ಐತಿಹಾಸಿಕ ಇನ್ನಿಂಗ್ಸ್ ಆಡಿದ್ರು.


JioCinema ಪ್ಯಾನೆಲ್ ಡಿಸ್ಕಶನ್ ಸಮಯದಲ್ಲಿ ಇಶಾಂತ್ ಶರ್ಮಾ ಈ ಹೇಳಿಕೆಯನ್ನು ನೀಡಿದ್ದಾರೆ. “ನಾವು ನ್ಯೂಜಿಲೆಂಡ್‌ನಲ್ಲಿ ಆಡುತ್ತಿದ್ದೆವು. ವಿರಾಟ್ ಕೊಹ್ಲಿ ಕ್ಯಾಚ್ ಅನ್ನು ಕೈಬಿಟ್ಟ ಬಳಿಕ ಬ್ರೆಂಡನ್ ಮೆಕಲಮ್ 300 ರನ್ ಗಳಿಸಿದ್ದರು. ಅದು ಊಟದ ಸಮಯದಲ್ಲಿ ನನಗೆ ನೆನಪಿದೆ. ವಿರಾಟ್ ಕೊಹ್ಲಿ ಜಹೀರ್ ಖಾನ್ ಅವರ ಬಳಿ ಕ್ಷಮಿಸಿ ಎಂದರು. ಅದಕ್ಕೆ ಜಹೀರ್ ಖಾನ್, 'ಚಿಂತೆ ಇಲ್ಲ, ನಾವು ಅವನನ್ನು ಔಟ್ ಮಾಡುತ್ತೇವೆ' ಎಂದು ಹೇಳಿದರು. ಚಹಾದ ಸಮಯದಲ್ಲಿ, ವಿರಾಟ್ ಕೊಹ್ಲಿ ಮತ್ತೊಮ್ಮೆ ಜಹೀರ್ ಖಾನ್‌ಗೆ ಕ್ಷಮಿಸಿ ಎಂದು ಹೇಳಿದರು. ಅದಕ್ಕೆ ಖಾನ್, ‘ಚಿಂತಿಸಬೇಡಿ’ ಎಂದು ಹೇಳಿದರು. ಮೂರನೇ ದಿನ, ಟೀ ಸಮಯದಲ್ಲಿ ಜಹೀರ್ ಖಾನ್ ಬಳಿ ವಿರಾಟ್ ಕೊಹ್ಲಿ ಕ್ಷಮೆಯಾಚಿಸಿದಾಗ, 'ನೀವು ನನ್ನ ವೃತ್ತಿಜೀವನವನ್ನು ಮುಗಿಸಿದ್ದೀರಿ' ಎಂದು ಜಹೀರ್ ಬೇಸರದಿಂದ ಹೇಳಿದರು” ಎಂಬ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದರು.


ಇದನ್ನೂ ಓದಿ: ಕೊಹ್ಲಿ-ರೋಹಿತ್ ಜೊತೆ ಮೈದಾನದಲ್ಲಿಯೇ ಜಗಳವಾಡಿದ್ದ ಈ ಇಬ್ಬರು ಕ್ರಿಕೆಟಿಗರು ಇಂದು ನಿವೃತ್ತಿ ಘೋಷಣೆ!


ಈ ಟೆಸ್ಟ್ ಪಂದ್ಯದಲ್ಲಿ, ಭಾರತೀಯ ಬೌಲರ್‌ ಗಳು ನ್ಯೂಜಿಲೆಂಡ್‌ ನಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 192 ರನ್‌ಗಳಿಗೆ ಪೇರಿಸಿದರು, ನಂತರ ಭಾರತವು ಎರಡನೇ ಇನ್ನಿಂಗ್ಸ್‌ ನಲ್ಲಿ 438 ರನ್‌ಗಳನ್ನು ಹಾಕಿತು. ನ್ಯೂಜಿಲೆಂಡ್‌ ನ ಎರಡನೇ ಇನ್ನಿಂಗ್ಸ್‌ನಲ್ಲೂ, ಭಾರತೀಯ ಬೌಲರ್‌ಗಳು 94 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿದ್ದರು, ಆದರೆ ಬ್ರೆಂಡನ್ ಮೆಕಲಮ್ ಕ್ಯಾಚ್ ಅನ್ನು ವಿರಾಟ್ ಕೊಹ್ಲಿ ಕೇವಲ 9 ರನ್‌ ಗಳ ಕಲೆಹಾಕಿದ್ದ ಸಂದರ್ಭದಲ್ಲಿ ಬಿಟ್ಟರು, ನಂತರ ಬ್ಯಾಟ್ಸ್‌ಮನ್ 302 ರನ್‌ ಗಳ ಐತಿಹಾಸಿಕ ಇನ್ನಿಂಗ್ಸ್‌ನಲ್ಲಿ ಭಾರತದ ವಿರುದ್ಧದ ಪಂದ್ಯವನ್ನು ಡ್ರಾ ಮಾಡಿದರು. ವೆಲ್ಲಿಂಗ್ಟನ್‌ ನಲ್ಲಿ ನ್ಯೂಜಿಲೆಂಡ್ 680/8 ರನ್ ಗಳಿಸಿ ಎರಡನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ