ಬೆಂಗಳೂರು : ಅತ್ಯಂತ ದುಬಾರಿ ಸ್ಮಾರ್ಟ್‌ಫೋನ್‌ಗಳ ವಿಷಯಕ್ಕೆ ಬಂದರೆ, ಐಫೋನ್‌ನ ಹೆಸರನ್ನು ಮೊದಲು ಕೇಳಿಬರುತ್ತದೆ. ಪ್ರತಿ ವರ್ಷ ಆಪಲ್ ತನ್ನ ಹೊಸ ಐಫೋನ್ ಸರಣಿಯನ್ನು ಬಿಡುಗಡೆ ಮಾಡುತ್ತಿದೆ. ಈ ವರ್ಷದ ಸೆಪ್ಟೆಂಬರ್ 12 ರಂದು, ಕಂಪನಿಯು ಐಫೋನ್ 15 ಅನ್ನು ಬಿಡುಗಡೆ ಮಾಡಿತು. 10 ದಿನಗಳ ನಂತರ ಫೋನ್ ಮಾರಾಟಕ್ಕೆ ಬಂದು ಸಂಚಲನ ಮೂಡಿಸಿದೆ. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಆ್ಯಪಲ್ ಸ್ಟೋರ್‌ಗಳ ಮುಂದೆ ಜನರು ಉದ್ದನೆಯ ಸಾಲಿನಲ್ಲಿ ನಿಂತು ಖರೀದಿಸುತ್ತಿರುವ  ದೃಶ್ಯ ಕೂಡಾ  ಕಂಡುಬಂದಿತ್ತು.  


COMMERCIAL BREAK
SCROLL TO CONTINUE READING

ಐಫೋನ್ 15 ಮಾರಾಟ ಪ್ರಾರಂಭವಾಗಿದೆ. ವಿವಿಧ ಮಳಿಗೆಗಳು ಈ ಫೋನ್ ಮೇಲೆ ಗ್ರಾಹಕರಿಗೆ ಆಕರ್ಷಕ ರಿಯಾಯಿತಿಗಳನ್ನು ನೀಡುತ್ತಿವೆ. ಆದರೆ,  ಈಗ ಈ ಫೋನ್ ಅನ್ನು 35,000 ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು.  ಹೌದು,  ನಿಮ್ಮ ಹಳೆಯ ಐಫೋನ್ ಅನ್ನು ವಿನಿಮಯ ಮಾಡಿಕೊಂಡರೆ ಇದು ಸಾಧ್ಯವಾಗುತ್ತದೆ. ಅನೇಕ ಕಂಪನಿಗಳು ಹಳೆಯ ಐಫೋನ್‌ಗಳಿಗೆ ಉತ್ತಮ ಬೆಲೆಯನ್ನು ನೀಡುತ್ತಿವೆ. ಹೀಗೆ ಎಕ್ಸ್ಚೇಂಜ್ ಮಾಡಲಾದ ಫೋನಿನ ಬೆಲೆಯನ್ನು ನೀಡಿ ಹೊಸ ಐಫೋನ್ ಖರೀದಿಸಬಹುದು.


ಇದನ್ನೂ ಓದಿ : ಅತ್ಯಂತ ಅಗ್ಗದ 7 ಸೀಟರ್ ಕಾರುಗಳು ಇವು ! ನಿಮ್ಮ ಕನಸಿನ ಗಾಡಿಯೂ ಇದರಲ್ಲಿದೆ


iPhone 15 ಮೇಲೆ 12 ಸಾವಿರ ರಿಯಾಯಿತಿ : 
Amazon India ಪ್ರಸ್ತುತ iPhone 15ರ ಮೇಲೆ ಕೆಲವು ಆಕರ್ಷಕ ಕೊಡುಗೆಗಳನ್ನು ನೀಡುತ್ತಿದೆ. ಈ ಫೋನ್ ಖರೀದಿಗೆ ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಬಳಸಿದರೆ 5,000 ರೂಪಾಯಿ ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಇದರ ಜೊತೆಗೆ ಏರ್‌ಟೆಲ್ ಪೋಸ್ಟ್‌ಪೇಯ್ಡ್ ಸಂಪರ್ಕಕ್ಕೆ ಬದಲಾಯಿಸಿದರೆ ಹೆಚ್ಚುವರಿ 7,000 ರೂ.ಗಳ ರಿಯಾಯಿತಿ ಸಿಗಲಿದೆ. ಈ ಮೂಲಕ ಒಟ್ಟು 12,000 ರೂ.ಗಳನ್ನು ಉಳಿಸಬಹುದು.


iPhone 15 ಅನ್ನು ಖರೀದಿಸಲು ಯೋಜಿಸುತ್ತಿದ್ದರೆ, ನಿಮ್ಮ ಹಳೆಯ ಫೋನ್ ಅನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಬೆಲೆಯನ್ನು ಇನ್ನೂ ಕಡಿಮೆ ಮಾಡಬಹುದು. ಅನೇಕ ಕಂಪನಿಗಳು ಹಳೆಯ ಫೋನ್‌ಗಳಿಗೆ ಉತ್ತಮ ಬೆಲೆಯನ್ನು ನೀಡುತ್ತಿವೆ. 


ಇದನ್ನೂ ಓದಿ : ಪ್ರೀತಿಯಲ್ಲಿ ಏಕೆ ಕುಚ್ ಕುಚ್ ಹೋತಾ ಹೈ ಅನುಭವ ಉಂಟಾಗುತ್ತದೆ? ಈ ಲೇಖನ ಓದಿ ಗೊತ್ತಾಗುತ್ತೆ!


iPhone 15 ವಿಶೇಷಣಗಳು:
ಐಫೋನ್ 15 6.1-ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಗುಲಾಬಿ, ಹಳದಿ, ಹಸಿರು, ನೀಲಿ ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಿದೆ. ಇದರ ವಿನ್ಯಾಸವು ಐಫೋನ್ 14 ಮತ್ತು ಹಿಂದಿನ ಮಾದರಿಗಳನ್ನು ಹೋಲುತ್ತದೆ. ಆದರೆ ನಾಚ್ ಅನ್ನು ಡೈನಾಮಿಕ್ ಐಲ್ಯಾಂಡ್ ಗೆ ಅಪ್‌ಗ್ರೇಡ್ ಮಾಡಲಾಗಿದೆ. ಐಫೋನ್ 15 
48 ಮೆಗಾಪಿಕ್ಸೆಲ್  ಪ್ರೈಮರಿ  ಕ್ಯಾಮೆರಾವನ್ನು ಹೊಂದಿದೆ.


ಐಫೋನ್ 15 ಆಪಲ್‌ನ A16 ಬಯೋನಿಕ್ ಪ್ರೊಸೆಸರ್ ಅನ್ನು ಹೊಂದಿದೆ. ಇದು ಕಳೆದ ವರ್ಷದ A15 ಬಯೋನಿಕ್ ಚಿಪ್‌ಸೆಟ್‌ಗಿಂತ ಉತ್ತಮವಾಗಿದೆ. ಐಫೋನ್ 15 ಯುಎಸ್‌ಬಿ ಟೈಪ್ ಸಿ ಚಾರ್ಜಿಂಗ್ ಪೋರ್ಟ್ ಅನ್ನು ಹೊಂದಿದೆ. ಇದು ಬಹುನಿರೀಕ್ಷಿತ ಬದಲಾವಣೆಯಾಗಿದೆ. ಯಾಕೆಂದರೆ ಬೇರೆ ಡಿವೈಸ್ ಗಳೊಂದಿಗೆ ಅದೇ ಚಾರ್ಜಿಂಗ್ ಕೇಬಲ್ ಅನ್ನು ಬಳಸಲು ಸಾಧ್ಯವಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ