Top 3 Upcoming Electric SUV : ಕಾರು ಉತ್ಪಾದನಾ ಕಂಪನಿಗಳು ಈಗ ಎಲೆಕ್ಟ್ರಿಕ್ ಕಾರುಗಳತ್ತ ಗಮನ ಹರಿಸಲು ಪ್ರಾರಂಭಿಸಿವೆ.   ಎಲೆಕ್ಟ್ರಿಕ್ ಕಾರುಗಳ ಬೇಡಿಕೆ ಕ್ರಮೇಣ ಹೆಚ್ಚುತ್ತಿದೆ. ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಪ್ರೋತ್ಸಾಹಿಸಲು ಸರ್ಕಾರ ಕೂಡಾ ವಿವಿಧ ಕ್ರಮಗಳನ್ನು  ಕೈಗೊಳ್ಳುತ್ತಿದೆ. ಇದರ ಪರಿಣಾಮದಿಂದಾಗಿ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ದೊಡ್ಡ ಮಟ್ಟದಲ್ಲಿ ಹೆಚ್ಚುತ್ತಿದೆ.   ಮುಂಬರುವ ವರ್ಷದಲ್ಲಿ ಅಂದರೆ 2024ರಲ್ಲಿ ಹಲವು ಎಲೆಕ್ಟ್ರಿಕ್ ಕಾರುಗಳು ಬಿಡುಗಡೆಯಾಗಲಿವೆ. 


COMMERCIAL BREAK
SCROLL TO CONTINUE READING

ಮಹೀಂದ್ರ XUV.e8 : 
ಮಹೀಂದ್ರಾ ತನ್ನ ಮೊದಲ ಬೋರ್ನ್ ಎಲೆಕ್ಟ್ರಿಕ್ SUV ಅನ್ನು ಡಿಸೆಂಬರ್ 2024 ರ ವೇಳೆಗೆ ಬಿಡುಗಡೆ ಮಾಡುವುದಾಗಿ ಹೇಳಿದೆ. ಇದು XUV.e8 ಪರಿಕಲ್ಪನೆಯನ್ನು ಆಧರಿಸಿದೆ. ಇದನ್ನು ಹೊಸ ಬೋರ್ನ್ ಎಲೆಕ್ಟ್ರಿಕ್ INGLO ಸ್ಕೇಟ್‌ಬೋರ್ಡ್ ಆರ್ಕಿಟೆಕ್ಚರ್‌ನಲ್ಲಿ ನಿರ್ಮಿಸಲಾಗುತ್ತಿದೆ. ಇದು ವಿವಿಧ ಪವರ್‌ಟ್ರೇನ್‌ಗಳು, ವೀಲ್‌ಬೇಸ್‌ಗಳು, ಟ್ರ್ಯಾಕ್ ಆಯಾಮಗಳು ಮತ್ತು AWD ಮತ್ತು RWD ಲೇಔಟ್‌ಗಳನ್ನು ಬೆಂಬಲಿಸುತ್ತದೆ. 


ಇದನ್ನೂ ಓದಿ : ಏಪ್ರಿಲ್ ವೇಳೆಗೆ ಬಿಎಂಟಿಸಿಗೆ ಸೇರ್ಪಡೆಗೊಳ್ಳಲಿವೆ 1400 ಹೊಸ ಎಲೆಕ್ಟ್ರಿಕ್ ಬಸ್ ಗಳು


ಎಲೆಕ್ಟ್ರಿಕ್ SUV ಟು -ಸೆಲ್ ಆರ್ಕಿಟೆಕ್ಚರ್‌ಗಳ ಆಧಾರದ  ಬ್ಲೇಡ್ ಮತ್ತು ಪ್ರಿಸ್ಮಾಟಿಕ್ ಬೇಸ್ಡ್ ದೊಡ್ಡ ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. - SUV ಅನ್ನು RWD ಮತ್ತು AWD ಸಿಸ್ಟಮ್ ಅನ್ನು ಇದು ಹೊಂದಿರುತ್ತದೆ.  ಇದರ ಪವರ್‌ಟ್ರೇನ್ 230bhp ನಿಂದ 350bhp ವ್ಯಾಪ್ತಿಯಲ್ಲಿ ಪವರ್ ಔಟ್‌ಪುಟ್ ನೀಡಬಲ್ಲದು.


ಟಾಟಾ ಪಂಚ್ ಇವಿ :
ಟಾಟಾ ಮೋಟಾರ್ಸ್ ಮುಂದಿನ ವರ್ಷ (2024) ದೇಶದಲ್ಲಿ 3 ಹೊಸ ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಬಿಡುಗಡೆ ಮಾಡಲಿದೆ. ಅದರಲ್ಲಿ ಮೊದಲನೆಯದು ಟಾಟಾ ಪಂಚ್ ಇವಿ. ಟಾಟಾ ಪಂಚ್ EVಯನ್ನು 2024 ರ ಮೊದಲ ತ್ರೈಮಾಸಿಕದಲ್ಲಿ ಪರಿಚಯಿಸಲಾಗುವುದು. ಹೊಸ ಮಾದರಿಯು GEN 2 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಇದು ಮೂಲತಃ ALFA ಮಾಡ್ಯುಲರ್ ಪ್ಲಾಟ್‌ಫಾರ್ಮ್‌ನ ಪರಿಷ್ಕೃತ ಆವೃತ್ತಿಯಾಗಿದೆ. ಇದು ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟರ್ ಅನ್ನು Tig ಮತ್ತು Tigor EV ಯೊಂದಿಗೆ ಹಂಚಿಕೊಳ್ಳಬಹುದು.


ಇದನ್ನೂ ಓದಿ : Year Ender 2023: ಈ ವರ್ಷದ ಟಾಪ್ 5 ವೆಲ್‌ನೆಸ್ ಆ್ಯಪ್‌ಗಳು


ಮಾರುತಿ ಸುಜುಕಿ ಇವಿಎಕ್ಸ್ : 
ಮಾರುತಿ ಸುಜುಕಿ eVX ಎಲೆಕ್ಟ್ರಿಕ್ SUVಯ ಪ್ರೊಡಕ್ಷನ್ ಆವೃತ್ತಿಯನ್ನು 2024 ರ ಕೊನೆಯಲ್ಲಿ ದೇಶದಲ್ಲಿ ಬಿಡುಗಡೆ ಮಾಡಲಿದೆ. ಗುಜರಾತ್‌ನಲ್ಲಿರುವ ಸುಜುಕಿಯ ಉತ್ಪಾದನಾ ಘಟಕದಲ್ಲಿ ಎಸ್‌ಯುವಿಯನ್ನು ಸ್ಥಳೀಯವಾಗಿ ತಯಾರಿಸಲಾಗುವುದು. ಇದನ್ನು ಭಾರತದಲ್ಲಿ ಮಾರಾಟ ಮಾಡುವುದರೊಂದಿಗೆ, ಯುರೋಪ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುವುದು. 


ಎಲೆಕ್ಟ್ರಿಕ್ SUV ಎಲ್ಲಾ ಹೊಸ ಸ್ಕೇಟ್‌ಬೋರ್ಡ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಒಂದು ಬಾರಿ ಪೂರ್ಣ ಚಾರ್ಜ್ ಮಾಡಿದರೆ ಸುಮಾರು 500 ಕಿ.ಮೀ ವರೆಗಿನ ರೇಂಜ್ ನೀಡುತ್ತದೆ. ಇದು 60kWh ಬ್ಯಾಟರಿ ಪ್ಯಾಕ್ ಅನ್ನು ಪಡೆಯುವ ನಿರೀಕ್ಷೆಯಿದೆ. ಇದು ಮಹೀಂದ್ರಾ XUV400, MG ZS EV ಮತ್ತು ಮುಂಬರುವ ಹ್ಯುಂಡೈ ಕ್ರೆಟಾ EVಯೊಂದಿಗೆ ಸ್ಪರ್ಧಿಸಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.