WhatsApp Ban in India: ಭಾರತೀಯರಿಗೆ ಶಾಕ್: WhatsAppನಿಂದ ಏಕಾಏಕಿ 37 ಲಕ್ಷ ಖಾತೆಗಳು ಬ್ಯಾನ್!!
WhatsApp Ban in India: ಲಕ್ಷಾಂತರ ಭಾರತೀಯ ಖಾತೆಗಳನ್ನು ನಿಷೇಧಿಸಿದ ನಂತರ ಮಾತನಾಡಿರುವ, WhatsApp ವಕ್ತಾರರು, “WhatsApp ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಸಂದೇಶ ಸೇವೆಗಳ ದುರ್ಬಳಕೆಯನ್ನು ತಡೆಯುವಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಬಳಕೆದಾರರನ್ನು ಸುರಕ್ಷಿತವಾಗಿರಿಸಲು ನಾವು ಕೃತಕ ಬುದ್ಧಿಮತ್ತೆ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಡೇಟಾ ವಿಜ್ಞಾನಿಗಳಲ್ಲಿ ನಿರಂತರವಾಗಿ ಮಾತುಕತೆ ನಡೆಸುತ್ತೇವೆ.
WhatsApp Ban in India: ನವೆಂಬರ್‌ನಲ್ಲಿ ಲಕ್ಷಾಂತರ ಭಾರತೀಯ ಖಾತೆಗಳನ್ನು WhatsApp ನಿಷೇಧಿಸಿತ್ತು. ಮಾಹಿತಿ ತಂತ್ರಜ್ಞಾನ ನಿಯಮಗಳ ನಿಯಮ 4(1)(ಡಿ) ಅಡಿಯಲ್ಲಿ ಖಾತೆಗಳನ್ನು ನಿಷೇಧಿಸಲಾಗಿದೆ. ಇದೀಗ ಇತ್ತೀಚಿನ ವರದಿಯ ಪ್ರಕಾರ, ನವೆಂಬರ್ 1 ರಿಂದ ನವೆಂಬರ್ 30 ರ ನಡುವೆ 37 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ನಿಷೇಧಿಸಲಾಗಿದೆ. ಮತ್ತು ಅಕ್ಟೋಬರ್‌ನಲ್ಲಿ WhatsApp 3.5 ಮಿಲಿಯನ್ ಖಾತೆಗಳನ್ನು ನಿಷೇಧಿಸಿತು. ಕಾರಣ ಏನು ಎಂದು ತಿಳಿಯೋಣ.
ಇದನ್ನೂ ಓದಿ: Arecanut today price: ರಾಜ್ಯದಲ್ಲಿ ಇಂದಿನ ಅಡಿಕೆ ಮಾರುಕಟ್ಟೆಯ ಧಾರಣೆ ಹೇಗಿದೆ ತಿಳಿಯಿರಿ
ಲಕ್ಷಾಂತರ ಭಾರತೀಯ ಖಾತೆಗಳನ್ನು ನಿಷೇಧಿಸಿದ ನಂತರ ಮಾತನಾಡಿರುವ, WhatsApp ವಕ್ತಾರರು, “WhatsApp ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಸಂದೇಶ ಸೇವೆಗಳ ದುರ್ಬಳಕೆಯನ್ನು ತಡೆಯುವಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಬಳಕೆದಾರರನ್ನು ಸುರಕ್ಷಿತವಾಗಿರಿಸಲು ನಾವು ಕೃತಕ ಬುದ್ಧಿಮತ್ತೆ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಡೇಟಾ ವಿಜ್ಞಾನಿಗಳಲ್ಲಿ ನಿರಂತರವಾಗಿ ಮಾತುಕತೆ ನಡೆಸುತ್ತೇವೆ. ಮೊದಲ ಹಂತದಲ್ಲಿಯೇ ಹಾನಿಕಾರಕ ಚಟುವಟಿಕೆಯನ್ನು ನಿಲ್ಲಿಸುವುದು ನಮ್ಮ ಆದ್ಯತೆ. ಏಕೆಂದರೆ ಚಟುವಟಿಕೆಯ ನಂತರ ಹಿಡಿಯುವುದರಲ್ಲಿ ಯಾವುದೇ ಅರ್ಥವಿಲ್ಲ” ಎಂದು ಸ್ಪಷ್ಟವಾಗಿ ಹೇಳಿದೆ.
WhatsApp ಖಾತೆಯನ್ನು ಏಕೆ ನಿಷೇಧಿಸಲಾಗಿದೆ?
"ತಂಡವು ಪ್ರಕರಣಗಳನ್ನು ಮೌಲ್ಯಮಾಪನ ಮಾಡುತ್ತದೆ ಮತ್ತು ಖಾತೆಗಳನ್ನು ನಿಷೇಧಿಸುತ್ತದೆ" ಎಂದು ಕಂಪನಿಯು ಹೇಳಿದೆ. ಖಾತೆಗಳನ್ನು ಏಕೆ ನಿಷೇಧಿಸಲಾಗಿದೆ? ಎಂಬ ಪ್ರಶ್ನೆಗಳಿಗೆ ಉತ್ತರಿಸಿದ ಕಂಪನಿ, ನೀತಿಗಳು ಮತ್ತು ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಖಾತೆಗಳನ್ನು ಕಂಪನಿಯು ನಿಷೇಧಿಸುತ್ತದೆ ಎಂದು ಹೇಳಿದೆ. ಉದಾಹರಣೆಗೆ, ನಕಲಿ ಸುದ್ದಿಗಳನ್ನು ಹರಡಿದವರನ್ನು ಮುಖ್ಯವಾಗಿ ನಿಷೇಧಿಸಲಾಗಿದೆ.
ಇದನ್ನೂ ಓದಿ: Apple iPhone: 20 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಿ ಐಫೋನ್
ದೇಶದಲ್ಲಿ 400 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ನವೆಂಬರ್‌ನಲ್ಲಿ ದೇಶದಲ್ಲಿ 946 ದೂರು ವರದಿಗಳನ್ನು ಸ್ವೀಕರಿಸಿದೆ ಮತ್ತು 74 'ಕ್ರಮ'ಗಳನ್ನು ದಾಖಲಿಸಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.