ವಿದ್ಯುತ್ ಬಿಲ್ ಉಳಿಸುವ ಸುಲಭ ಮಾರ್ಗಗಳು ಇವು ! ಇಂದೇ ಟ್ರೈ ಮಾಡಿ
ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಬಹುದು. 5 ಬದಲಾವಣೆಗಳನ್ನು ಮಾಡುವ ಮೂಲಕ ನೀವು ಬಹಳಷ್ಟು ಹಣವನ್ನು ಹೇಗೆ ಉಳಿಸಬಹುದು ಎನ್ನುವ ಮಾಹಿತಿ ಇಲ್ಲಿದೆ ಓದಿ
ಬೆಂಗಳೂರು : ವಿದ್ಯುತ್ ಬಿಲ್ ಮನೆಯ ಬಜೆಟ್‌ನ ಪ್ರಮುಖ ಭಾಗವಾಗಿದೆ. ಚಳಿಗಾಲದಲ್ಲಿ, ಗೀಸರ್‌ಗಳು, ಹೀಟರ್‌ಗಳು ಮತ್ತು ಇತರ ಹಲವು ವಸ್ತುಗಳ ಅತಿಯಾದ ಚಾಲನೆಯಿಂದ, ವಿದ್ಯುತ್ ಬಿಲ್ ತುಂಬಾ ಹೆಚ್ಚಾಗುತ್ತದೆ. ಆದರೆ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ನೀವು ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಬಹುದು. 5 ಬದಲಾವಣೆಗಳನ್ನು ಮಾಡುವ ಮೂಲಕ ನೀವು ಬಹಳಷ್ಟು ಹಣವನ್ನು ಹೇಗೆ ಉಳಿಸಬಹುದು ಎನ್ನುವ ಮಾಹಿತಿ ಇಲ್ಲಿದೆ ಓದಿ :
ಸ್ಟ್ಯಾಂಡ್‌ಬೈ ಮೋಡ್‌ನಲ್ಲಿ ಬಿಡಬೇಡಿ :
ಆಗಾಗ್ಗೆ ನಾವು ರಿಮೋಟ್ ಬಳಸಿ ನಮ್ಮ ಗೃಹೋಪಯೋಗಿ ಉಪಕರಣಗಳನ್ನು ಸ್ವಿಚ್ ಆಫ್ ಮಾಡುತ್ತೇವೆ. ಆದರೆ, ಆ ಉಪಕರಣ ವಿದ್ಯುತ್ ಅನ್ನು ಬಳಸುತ್ತದೆ ಎನ್ನುವ ಅರಿವು ನಿಮಗಿದೆಯೇ? ನೀವು ಉಪಕರಣವನ್ನು ರಿಮೋಟ್ ಮೂಲಕ ಆಫ್ ಮಾಡಿದಾಗ, ಅದು ಸ್ಟ್ಯಾಂಡ್‌ಬೈ ಮೋಡ್‌ಗೆ ಹೋಗುತ್ತದೆ. ಆದರೆ ಕರೆಂಟ್ ಬಳಸುವುದನ್ನು ಮುಂದುವರಿಸುತ್ತದೆ. ಆದ್ದರಿಂದ, ನೀವು ಉಪಕರಣವನ್ನು ಬಳಸದಿದ್ದಾಗ, ಅದನ್ನು ಸಂಪೂರ್ಣವಾಗಿ ಆಫ್ ಮಾಡಿ.
ಇದನ್ನೂ ಓದಿ : ಫೋನ್ ನಲ್ಲಿ ಪದೇ ಪದೇ ಬರುವ ಜಾಹೀರಾತುಗಳಿಂದ ತಲೆ ಚಿಟ್ಟು ಹಿಡಿದಿದೆಯಾ? ಈ ಸಣ್ಣ ಸೇಟ್ಟಿಂಗ್ ಮಾಡ್ಕೊಳ್ಳಿ ಸಾಕು!
ಹೆಚ್ಚಿನ ಸ್ಟಾರ್ ರೇಟಿಂಗ್ ಹೊಂದಿರುವ ಉತ್ಪನ್ನಗಳನ್ನು ಖರೀದಿಸಿ :
ಎಲೆಕ್ಟ್ರಾನಿಕ್ ಉತ್ಪನ್ನಗಳ ಸ್ಟಾರ್ ರೇಟಿಂಗ್ ಅವುಗಳ ಶಕ್ತಿಯ ದಕ್ಷತೆಯನ್ನು ಪ್ರತಿಬಿಂಬಿಸುತ್ತದೆ. ಹೆಚ್ಚಿನ ಸ್ಟಾರ್ ರೇಟಿಂಗ್, ಹೆಚ್ಚಿನ ಶಕ್ತಿಯ ದಕ್ಷತೆ ಮತ್ತು ಕಡಿಮೆ ವಿದ್ಯುತ್ ಬಳಕೆ ಎನ್ನುವುದನ್ನು ಸೂಚಿಸುತ್ತದೆ. ಆದ್ದರಿಂದ, ಗೃಹೋಪಯೋಗಿ ಉಪಕರಣಗಳನ್ನು ಖರೀದಿಸುವಾಗ, 3 ಅಥವಾ 5 ಸ್ಟಾರ್ ರೇಟಿಂಗ್ ಹೊಂದಿರುವ ಉತ್ಪನ್ನಗಳಿಗೆ ಆದ್ಯತೆ ನೀಡಿ.
ತಾಪಮಾನವನ್ನು ಹೊಂದಿಸಿ :
ಏರ್ ಕಂಡಿಷನರ್ ಅನ್ನು 24 ಡಿಗ್ರಿಗಳಂತಹ ಸರಿಯಾದ ತಾಪಮಾನದಲ್ಲಿ ಇಡುವುದು ಒಂದು ಪ್ರಮುಖ ಮುನ್ನೆಚ್ಚರಿಕೆಯಾಗಿದೆ. ಇದರೊಂದಿಗೆ ಕೊನೆ ತಂಪಾಗಿರುತ್ತದೆ ಮಾತ್ರವಲ್ಲ ವಿದ್ಯುತ್ ಉಳಿತಾಯ ಕೂಡಾ ಸಾಧ್ಯವಾಗುತ್ತದೆ. ಗೀಸರ್‌ನ ತಾಪಮಾನವನ್ನು 40 ರಿಂದ 45 ಡಿಗ್ರಿಗಳವರೆಗೆ ಹೊಂದಿಸಬಹುದು,
ಲೈಟ್, ಫ್ಯಾನ್ ಆಫ್ ಮಾಡಿ :
ನೀವು ಕೊಠಡಿಯಿಂದ ಹೊರಬಂದಾಗ, ಆ ಕೋಣೆಯ ದೀಪಗಳು ಮತ್ತು ಫ್ಯಾನ್‌ಗಳನ್ನು ಸ್ವಿಚ್ ಆಫ್ ಮಾಡಲು ಮರೆಯಬೇಡಿ. ಹೆಚ್ಚಿನ ಜನರು ಈ ಬಗ್ಗೆ ಗಮನ ಹರಿಸುವುದಿಲ್ಲ ಮತ್ತು ಕೊಠಡಿಯಿಂದ ಹೊರಡುವಾಗ ಅನೇಕ ಉಪಕರಣಗಳನ್ನು ಹಾಗೆಯೇ ಆನ್ ನಲ್ಲಿ ಬಿಡುತ್ತಾರೆ. ಇದರಿಂದ ವಿದ್ಯುತ್ ಬಳಕೆ ಹೆಚ್ಚುತ್ತದೆ ಮತ್ತು ವಿದ್ಯುತ್ ಬಿಲ್ ಕೂಡಾ ಹೆಚ್ಚಾಗುತ್ತದೆ.
ಇದನ್ನೂ ಓದಿ : ಕೇವಲ 329 ರೂ.ಗಳಿಗೆ 1000ಜಿಬಿ ಡೇಟಾ ನೀಡುತ್ತೇ ಈ ಟೆಲಿಕಾಂ ಕಂಪನಿ!
ಎಲ್ಇಡಿ ಬಲ್ಬ್ ಬಳಕೆ :
ಮನೆಗಳಲ್ಲಿ ಅಳವಡಿಸಲಾದ ಹಳೆಯ ಬಲ್ಬ್‌ಗಳು ಹೆಚ್ಚಿನ ವಿದ್ಯುತ್ ಅನ್ನು ಬಳಸುತ್ತವೆ. ಈ ಬಲ್ಬ್‌ಗಳನ್ನು ಎಲ್‌ಇಡಿ ಬಲ್ಬ್‌ಗಳೊಂದಿಗೆ ಬದಲಾಯಿಸುವುದರಿಂದ ವಿದ್ಯುತ್ ಬಳಕೆಯನ್ನು ಗಣನೀಯವಾಗಿ ಕಡಿಮೆ ಮಾಡಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ