ಇಷ್ಟೊಂದು ಕಡಿಮೆ ಬೆಲೆಯಲ್ಲಿ ಸಿಗುತ್ತಿದೆ 55 ಇಂಚಿನ ಸ್ಮಾರ್ಟ್ ಟಿವಿ ! ಇಂದೇ ಖರೀದಿಸಿ ತನ್ನಿ !
ಹಬ್ಬದ ಋತುವಿನ ಸಮಯದಲ್ಲಿ ಫ್ಲಿಪ್‌ಕಾರ್ಟ್‌ನೊಂದಿಗೆ ವಿಶೇಷ ಪಾಲುದಾರಿಕೆಯ ಮೂಲಕ ಕಂಪನಿಯು ಭಾರತದಲ್ಲಿ ಎರಡು ಹೊಸ ಟೆಲಿವಿಷನ್‌ಗಳನ್ನು ಪರಿಚಯಿಸಿದೆ.
ಬೆಂಗಳೂರು : ಸ್ಮಾರ್ಟ್ ಟಿವಿಯ ಕ್ರೇಜ್ ದಿನೇ ದಿನೇ ಹೆಚ್ಚಾಗುತ್ತಿದೆ. ದೊಡ್ಡ ಡಿಸ್ಪ್ಲೇ ಇರುವ ಸ್ಮಾರ್ಟ್ ಟಿವಿಗಳ ಮಾರಾಟ ಗಣನೀಯವಾಗಿ ಹೆಚ್ಚಿದೆ. ಇನ್ನೇನು ಹಬದ ಸೀಸನ್ ಸಮೀಪಿಸುತ್ತಿದೆ. ಬಿಗ್ ಬಿಲಿಯನ್ ಡೇಸ್ ಸೇಲ್ ಕೂಡಾ ಶುರುವಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ, Blaupunkt ಟಿವಿಯ ಎರಡು ಹೊಸ ಮಾದರಿಗಳನ್ನು ಬಿಡುಗಡೆ ಮಾಡಿದೆ. ಹಬ್ಬದ ಋತುವಿನ ಸಮಯದಲ್ಲಿ ಫ್ಲಿಪ್‌ಕಾರ್ಟ್‌ನೊಂದಿಗೆ ವಿಶೇಷ ಪಾಲುದಾರಿಕೆಯ ಮೂಲಕ ಕಂಪನಿಯು ಭಾರತದಲ್ಲಿ ಎರಡು ಹೊಸ ಟೆಲಿವಿಷನ್‌ಗಳನ್ನು ಪರಿಚಯಿಸಿದೆ. 43-ಇಂಚಿನ QLED ಟಿವಿ ಮತ್ತು 55-ಇಂಚಿನ 4K Google TVಯನ್ನು ಕಂಪನಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
Blaupunkt 43-inch QLED TV :
Blaupunkt 43-ಇಂಚಿನ QLED ಟಿವಿ ಉತ್ತಮ ಡಿಸ್ಪ್ಲೇ ಮತ್ತು ಸೌಂಡ್ ಸಿಸ್ಟಮ್ ಅನ್ನು ಹೊಂದಿದೆ. ಇದು 1.1 ಬಿಲಿಯನ್ ಬಣ್ಣಗಳನ್ನು ಪ್ರದರ್ಶಿಸುತ್ತದೆ. HDR10+ ಮತ್ತು ಡಾಲ್ಬಿ ವಿಷನ್
ಅನ್ನು ಸಪೋರ್ಟ್ ಮಾಡುತ್ತದೆ.
ಇದನ್ನೂ ಓದಿ : Flipkart Sale: ಹೊಸ ಸ್ಮಾರ್ಟ್‌ಫೋನ್ ಖರೀದಿಸುತ್ತೀರಾ? ಈ 5 ವಿಷಯ ನೆನಪಿಡಿ
Blaupunkt 43-ಇಂಚಿನ QLED ಟಿವಿಯನ್ನು ವಿವಿಧ ಸಾಧನಗಳಿಗೆ ಸುಲಭವಾಗಿ ಕನೆಕ್ಟ್ ಮಾಡಬಹುದು. ಟಿವಿಯನ್ನು ಬ್ಲೂಟೂತ್ 5.0 ಮತ್ತು ಡ್ಯುಯಲ್-ಬ್ಯಾಂಡ್ ವೈ-ಫೈ ಮೂಲಕ ಸುಲಭವಾಗಿ ಸಂಪರ್ಕಿಸಬಹುದು. ಇದು Google ಅಸಿಸ್ಟೆಂಟ್ ಸಂಚಾಲಿತ ರಿಮೋಟ್‌ನೊಂದಿಗೆ ಬರುತ್ತದೆ. ಇದರಿಂದ ವಾಯ್ಸ್ ಕಮಾಂಡ್ ನೊಂದಿಗೆ ಟಿವಿಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.
Blaupunkt 55-inch 4K Google TV :
Blaupunkt 55-ಇಂಚಿನ Google TV 1 ಬಿಲಿಯನ್ ಬಣ್ಣಗಳೊಂದಿಗೆ ಬೆಜೆಲ್-ಲೆಸ್ 4K HDR10+ ಡಿಸ್ಪ್ಲೇ, 60W ಸ್ಟಿರಿಯೊ ಬಾಕ್ಸ್ ಸ್ಪೀಕರ್ ಸಿಸ್ಟಮ್, DTS TruSurround ತಂತ್ರಜ್ಞಾನ, ಬ್ಲೂಟೂತ್ 5.0, ಡ್ಯುಯಲ್-ಬ್ಯಾಂಡ್ Wi-Fi, ಗೂಗಲ್ ಅಸಿಸ್ಟೆಂಟ್-ಚಾಲಿತ ರಿಮೋಟ್, ಮೂರು HDMI ಪೋರ್ಟ್, ಎರಡು USB ಪೋರ್ಟ್‌ಗಳು ಮತ್ತು DVB-C/DVB-T/T2 ನೊಂದಿಗೆ ಬರುತ್ತದೆ.
ಇದನ್ನೂ ಓದಿ : ಕರೆಂಟ್ ಹೋದ ನಾಲ್ಕು ಗಂಟೆಗಳವರೆಗೆ ಬೆಳಕು ನೀಡುತ್ತದೆ ಈ ಬಲ್ಬ್ ! ಮಾರುಕಟ್ಟೆಯಲ್ಲಿ ಇದಕ್ಕಿದೆ ಭಾರೀ ಬೇಡಿಕೆ
Blaupunkt 55-ಇಂಚಿನ Google TV Google TV ಯಿಂದ ನಡೆಸಲ್ಪಡುತ್ತದೆ. Play Store ಮೂಲಕ 10,000 ಅಪ್ಲಿಕೇಶನ್‌ಗಳು, ಇನ್ ಬಿಲ್ಟ್ Chromecast ಮತ್ತು AirPlay ಸಪೋರ್ಟ್ ಮತ್ತು 2GB RAM,16GB ROM ಮತ್ತು Mali-G52 GPU ಜೊತೆಗೆ MT9062 ಪ್ರೊಸೆಸರ್‌ನೊಂದಿಗೆ ಬರುತ್ತದೆ.
ಭಾರತದಲ್ಲಿ ಈ ಟಿವಿಯ ಬೆಲೆ :
Blaupunkt ಎರಡು ಹೊಸ ಟಿವಿಗಳನ್ನು ಬಿಡುಗಡೆ ಮಾಡಿದೆ. 43-ಇಂಚಿನ 4K QLED TV (43QD7050) ಮತ್ತು 55-ಇಂಚಿನ 4K Google TV (55CSGT7023).ಎರಡೂ ಟಿವಿಗಳ ಬೆಲೆ ಕ್ರಮವಾಗಿ 28,999 ಮತ್ತು 34,999 ರೂ. ಆಗಿದೆ. ಎರಡೂ ಟಿವಿಗಳು ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯವಿದೆ. ICICI, Kotak ಅಥವಾ Axis ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿದರೆ ಖರೀದಿದಾರರು 10% ತ್ವರಿತ ರಿಯಾಯಿತಿಯನ್ನು ಪಡೆಯಬಹುದು.
ಇದನ್ನೂ ಓದಿ : ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಬಜಾಜ್ ಪಲ್ಸರ್ N150: ಇಲ್ಲಿದೆ ಇದರ ಬೆಲೆ, ವೈಶಿಷ್ಟ್ಯ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.