5G network in India : ಆಗಸ್ಟ್ 15 ರಂದು ರಿಲಯನ್ಸ್ ಜಿಯೋ ತನ್ನ 5G ಸೇವೆಗಳನ್ನು ಪ್ರಾರಂಭಿಸುವ ಸಾಧ್ಯತೆ ಹೆಚ್ಚಾಗಿದೆ. ಆಗಸ್ಟ್ 15 ರಂದು ಭಾರತವು `ಆಜಾದಿ ಕಾ ಅಮೃತ್ ಮಹೋತ್ಸವ'ವನ್ನು ಆಚರಿಸುತ್ತಿದೆ. ಟೆಲಿಕಾಂ ದೈತ್ಯ ಪ್ಯಾನ್-ಇಂಡಿಯಾ 5G  ಅನ್ನು ಆರಂಭಿಸಲು ಯೋಜಿಸುತ್ತಿದೆ ಎಂದು IANS ನ ವರದಿ ಮಾಡಿದೆ. ಕಳೆದ ವಾರ ಟೆಲಿಕಾಂ ಇಲಾಖೆ (DoT) 5G ಸ್ಪೆಕ್ಟ್ರಮ್ ಹರಾಜಿನಲ್ಲಿ ರಿಲಯನ್ಸ್ ಜಿಯೋ 700MHz, 800MHz, 1800MHz, 3300MHz ಮತ್ತು 26GHz ಬ್ಯಾಂಡ್‌ಗಳಲ್ಲಿ 5G ಸ್ಪೆಕ್ಟ್ರಮ್ ಅನ್ನು ಸ್ವಾಧೀನಪಡಿಸಿಕೊಂಡಿದೆ. ಅಲ್ಲದೇ ಭಾರ್ತಿ ಏರ್​ಟೆಲ್ (Bharti Airtel) ಸಹ ಮೊದಲ 5G ಗುತ್ತಿಗೆಯನ್ನು ಎರಿಕ್​ಸನ್ (Ericsson) ಕಂಪನಿಗೆ ನೀಡಿದ್ದು, ಇದೇ ತಿಂಗಳು ಅಂದರೆ ಆಗಸ್ಟ್ 2022 ರಲ್ಲಿ ಸೇವೆಗಳನ್ನು ಒದಗಿಸಲಾಗುವುದು ಎಂದಿದೆ. ಏರ್​ಟೆಲ್​ನೊಂದಿಗೆ 25 ವರ್ಷಗಳಿಗೂ ಹೆಚ್ಚು ಕಾಲದ ವ್ಯಾಪಾರ ಸಂಬಂಧ ಹೊಂದಿರುವ ಎರಿಕ್​ಸನ್ ಭಾರತದಾದ್ಯಂತ ಕನೆಕ್ಟಿವಿಟಿ ಸೇವೆಯನ್ನು ನೀಡುತ್ತಿದೆ. ಜುಲೈ 26ರಂದು ಅಂತ್ಯಗೊಂಡ 5ಜಿ ತರಂಗಾಂತರ ಹರಾಜಿನ ನಂತರ ಏರ್​ಟೆಲ್‌ಗೆ ಎರಿಕ್​ಸನ್​ಗೆ ಹೊಸ ಗುತ್ತಿಗೆಯನ್ನು ಕೊಡಲಾಗಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: 


5G ಸಂಪರ್ಕಕ್ಕಾಗಿ ಭಾರತೀಯರ ಸುದೀರ್ಘ ಕಾಯುವಿಕೆ ಅಂತ್ಯಗೊಳ್ಳುವ ಸಮಯ ಬಂದಿದೆ. ಭಾರತದ ಪ್ರಮುಖ ಟೆಲಿಕಾಂ ಆಪರೇಟರ್‌ಗಳಾಗಿರುವ ಭಾರ್ತಿ ಏರ್‌ಟೆಲ್‌ ಹಾಗೂ ರಿಲಯನ್ಸ್‌ ಜಿಯೋ ಸೆಲ್ಯುಲಾರ್‌ ತಂತ್ರಜ್ಞಾನಕ್ಕಾಗಿ ಅಧಿಕೃತ ಟೈಮ್‌ ಲೈನ್‌ ಅನ್ನು ಘೋಷಿಸಿದೆ. ಈ ಬಗ್ಗೆ ಏರ್‌ಟೆಲ್‌ ಹೊಸ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಈ ತಿಂಗಳಾಂತ್ಯದೊಳಗೆ ದೇಶದಲ್ಲಿ ತನ್ನ 5G ಸೇವೆಗಳನ್ನು ಹೊರತರುವುದಾಗಿ ದೃಢಪಡಿಸಿದೆ. ಇನ್ನೊಂದೆಡೆ ರಿಲಯನ್ಸ್‌ ಜಿಯೋ ಸಹ ಆಗಸ್ಟ್‌ 15 ರಂದು ದೇಶಾದ್ಯಂತ 5ಜಿ ಸೇವೆ ಆರಂಭಿಸುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ. ವರದಿಗಳ ಪ್ರಕಾರ, ಭಾರತ ಇದೇ ವೇಳೆ ಆಜಾದಿ ಕಾ ಅಮೃತ ಮಹೋತ್ಸವ ಆಚರಣೆ ಮಾಡುತ್ತಿದ್ದು, ಭಾರತದಲ್ಲಿ ತನ್ನ 5ಜಿ ಸೇವೆ ಆರಂಭಿಸಲು ಇದ್ದಕ್ಕಿಂತ ಉತ್ತಮ ದಿನವಿಲ್ಲ ಎಂದು ಜಿಯೋ ನಿರ್ಧಾರ ಮಾಡಿದೆ. 


ಜಿಯೋ ಕಡಿಮೆ-ಬ್ಯಾಂಡ್, ಮಿಡ್-ಬ್ಯಾಂಡ್ ಮತ್ತು ಎಂಎಂವೇವ್ ಸ್ಪೆಕ್ಟ್ರಮ್‌ನ ವಿಶಿಷ್ಟ ಸಂಯೋಜನೆಯನ್ನು ಪಡೆದುಕೊಂಡಿದೆ. ಇದು ಕಂಪನಿಯ ಡೀಪ್ ಫೈಬರ್ ನೆಟ್‌ವರ್ಕ್ ಮತ್ತು ಸ್ಥಳೀಯ ತಂತ್ರಜ್ಞಾನದ ವೇದಿಕೆಗಳೊಂದಿಗೆ ಸೇರಿಕೊಂಡು, ಎಲ್ಲೆಡೆ 5G ಒದಗಿಸಲು ಸಾಧ್ಯವಾಗಿಸುತ್ತದೆ. ಕಂಪನಿಯ ಪ್ರಕಾರ, ಈ ಸ್ಪೆಕ್ಟ್ರಮ್ ಅನ್ನು ಬಳಸುವ ಹಕ್ಕನ್ನು ಸ್ವಾಧೀನಪಡಿಸಿಕೊಳ್ಳುವುದರಿಂದ ವಿಶ್ವದ ಅತ್ಯಾಧುನಿಕ 5G ನೆಟ್‌ವರ್ಕ್ ಅನ್ನು ನಿರ್ಮಿಸಲು ಜಿಯೋಗೆ ಸಾಧ್ಯವಾಗುತ್ತದೆ ಮತ್ತು ವೈರ್‌ಲೆಸ್ ಬ್ರಾಡ್‌ಬ್ಯಾಂಡ್ ಸಂಪರ್ಕದಲ್ಲಿ ಭಾರತದ ಜಾಗತಿಕ ನಾಯಕತ್ವವನ್ನು ಇನ್ನಷ್ಟು ಬಲಪಡಿಸುತ್ತದೆ. Jio ನ 5G ನೆಟ್‌ವರ್ಕ್ ಮುಂದಿನ ಪೀಳಿಗೆಯ ಡಿಜಿಟಲ್ ಪರಿಹಾರಗಳನ್ನು ಸಕ್ರಿಯಗೊಳಿಸುತ್ತದೆ ಅದು US$ 5+ ಟ್ರಿಲಿಯನ್ ಆರ್ಥಿಕತೆಯತ್ತ ಭಾರತದ AI-ಚಾಲಿತ ಹೆಜ್ಜೆಯನ್ನು ವೇಗಗೊಳಿಸುತ್ತದೆ.


ಇದನ್ನೂ ಓದಿ: 


ಆಗಸ್ಟ್‌ನಲ್ಲಿ ಏರ್‌ಟೆಲ್‌ 5G ಸೇವೆಗಳನ್ನು ಪ್ರಾರಂಭಿಸುತ್ತದೆ ಎಂದು ಘೋಷಿಸಿದೆ. ನಮ್ಮ ನೆಟ್‌ವರ್ಕ್ ಒಪ್ಪಂದಗಳನ್ನು ಅಂತಿಮಗೊಳಿಸಿದೆ. ನಮ್ಮ ಗ್ರಾಹಕರಿಗೆ 5G ಸಂಪರ್ಕದ ಸಂಪೂರ್ಣ ಪ್ರಯೋಜನಗಳನ್ನು ತಲುಪಿಸಲು ವಿಶ್ವಾದ್ಯಂತ ಅತ್ಯುತ್ತಮ ತಂತ್ರಜ್ಞಾನ ಪಾಲುದಾರರೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಏರ್‌ಟೆಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನೊಂದೆಡೆ ಟೆಲಿಕಾಂ ಇಲಾಖೆ  5G ಸ್ಪೆಕ್ಟ್ರಮ್ ಹರಾಜಿನಲ್ಲಿ ರಿಲಯನ್ಸ್ ಜಿಯೋ ಸ್ವಾಧೀನ ಪಡಿಸಿಕೊಂಡ 700MHz, 800MHz, 1800MHz, 3300MHz ಮತ್ತು 26GHz ಬ್ಯಾಂಡ್‌ಗಳು 5G ನೆಟ್‌ವರ್ಕ್ ಬಳಕೆದಾರರು ಸ್ವೀಕರಿಸುವ ವೇಗ ಮತ್ತು ಗುಣಮಟ್ಟಕ್ಕೆ ಅಗತ್ಯವಾಗಿವೆ. 20 ವರ್ಷಗಳ ಅವಧಿಗೆ ತಂತ್ರಜ್ಞಾನದ  ತರಂಗಾಂತರವನ್ನು ಬಳಸುವ ಹಕ್ಕನ್ನು ಪಡೆಯುವ ಒಟ್ಟು ವೆಚ್ಚ 88,078 ಕೋಟಿ ರೂ. ಆಗಿದೆ. ಸ್ಪೆಕ್ಟ್ರಮ್ ಹರಾಜಿನ ನಿಯಮಗಳ ಪ್ರಕಾರ, ಸ್ಪೆಕ್ಟ್ರಮ್ ಪಾವತಿಗಳನ್ನು 20 ಸಮೀಕರಿಸಿದ ವಾರ್ಷಿಕ ಕಂತುಗಳಲ್ಲಿ ನೀಡಬೇಕು ಮತ್ತು ಬಡ್ಡಿಯನ್ನು ವಾರ್ಷಿಕವಾಗಿ 7.2% ಎಂದು ತಿಳಿದುಬಂದಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.