ಮುಖೇಶ್ ಅಂಬಾನಿಗೆ ಭಾರಿ ಆಘಾತ...!..ಕೇವಲ 30 ದಿನಗಳಲ್ಲಿ 79 ಲಕ್ಷ ಗ್ರಾಹಕರನ್ನು ಕಳೆದುಕೊಂಡ ಜಿಯೋ ..!
ಇನ್ನೂ ದೂರಸಂಪರ್ಕ ಇಲಾಖೆ ಹಂಚಿಕೊಂಡ ಮಾಹಿತಿಯ ಪ್ರಕಾರ ಜುಲೈನಲ್ಲಿ ಖಾಸಗಿ ಟೆಲಿಕಾಂ ಪೂರೈಕೆದಾರರಾದ ಜಿಯೋ, ವಡಾಫೋನ್-ಐಡಿಯಾ ಮತ್ತು ಏರ್ ಟೆಲ್ ನಿಂದ 15 ಲಕ್ಷ ಗ್ರಾಹಕರು ಬಿಎಸ್ಎನ್ಎಲ್ ನತ್ತ ಮುಖಮಾಡಿದ್ದಾರೆ.
ಮುಂಬೈ: ಇತ್ತೀಚಿಗೆ ಖಾಸಗಿ ಟೆಲಿಕಾಂ ಕಂಪನಿಗಳು ಮೊಬೈಲ್ ಸುಂಕವನ್ನು ಹೆಚ್ಚಿಸಿದ ಬೆನ್ನಲ್ಲೇ ಲಕ್ಷಾಂತರ ಗ್ರಾಹಕರು ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ನತ್ತ ಮುಖ ಮಾಡಿದ್ದರಿಂದಾಗಿ ಕೇವಲ ಈ ವರ್ಷದ ಒಂದೇ ತಿಂಗಳಲ್ಲಿ ಮುಖೇಶ್ ಅಂಬಾನಿ ಮಾಲಿಕತ್ವದ ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋ 79 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ.
ಇತ್ತೀಚಿಗೆ ಭಾರತೀಯ ದೂರವಾಣಿ ನಿಯಂತ್ರಕ ಪ್ರಾಧಿಕಾರ (ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ) ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಖಾಸಗಿ ಟೆಲಿಕಾಂ ಸಂಸ್ಥೆಗಳು 2024 ರ ಸೆಪ್ಟೆಂಬರ್ ತಿಂಗಳಲ್ಲಿ 1 ಕೋಟಿ ಗ್ರಾಹಕರನ್ನು ಕಳೆದುಕೊಂಡಿದ್ದಾರೆ,ಇದರಲ್ಲಿ ಮುಖೇಶ್ ಅಂಬಾನಿ ನೇತೃತ್ವದ ಜಿಯೋ ಕೇವಲ ಒಂದೇ ತಿಂಗಳಲ್ಲಿ 79 ಲಕ್ಷ ಗ್ರಾಹಕರನ್ನು ಕಳೆದುಕೊಂಡರೆ ಸುನಿಲ್ ಮಿತ್ತಲ್ ನೇತೃತ್ವದ ಭಾರ್ತಿ ಏರ್‌ಟೆಲ್ 14 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ. ಮತ್ತೊಂದೆಡೆಗೆ ವೊಡಾಫೋನ್-ಐಡಿಯಾ 15 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ.ಈಗ ದಾಖಲೆಯ ಪ್ರಮಾಣದಲ್ಲಿ ಪುನ್ಚೇತನ ಕಂಡಿರುವ ಬಿಎಸ್ಎನ್ಎಲ್ 2024 ರ ಜುಲೈ-ಅಕ್ಟೋಬರ್ ಅವಧಿಯಲ್ಲಿ 55 ಲಕ್ಷ ನೂತನ ಗ್ರಾಹಕರನ್ನು ಪಡೆದುಕೊಂಡಿದೆ.
ಇನ್ನೂ ದೂರಸಂಪರ್ಕ ಇಲಾಖೆ ಹಂಚಿಕೊಂಡ ಮಾಹಿತಿಯ ಪ್ರಕಾರ ಜುಲೈನಲ್ಲಿ ಖಾಸಗಿ ಟೆಲಿಕಾಂ ಪೂರೈಕೆದಾರರಾದ ಜಿಯೋ, ವಡಾಫೋನ್-ಐಡಿಯಾ ಮತ್ತು ಏರ್ ಟೆಲ್ ನಿಂದ 15 ಲಕ್ಷ ಗ್ರಾಹಕರು ಬಿಎಸ್ಎನ್ಎಲ್ ನತ್ತ ಮುಖಮಾಡಿದ್ದಾರೆ. ಆಗಸ್ಟ್ ನಲ್ಲಿ ಈ ಸಂಖ್ಯೆ 21 ಲಕ್ಷಕ್ಕೆ ಏರಿಕೆಯಾಗಿದೆ.ಇನ್ನೂ ಸೆಪ್ಟೆಂಬರ್ ಮತ್ತು ಅಕ್ಟೋಬರ್ 2024 ರಲ್ಲಿ, ಸುಮಾರು 11 ಲಕ್ಷ ಮತ್ತು 7 ಲಕ್ಷ ಗ್ರಾಹಕರು ಕ್ರಮವಾಗಿ ಬಿಎಸ್ಎನ್ಎಲ್ ಗೆ ವಲಸೆ ಹೋಗಿದ್ದಾರೆ ಎಂದು ಡೇಟಾ ಬಹಿರಂಗಪಡಿಸಿದೆ.
ಖಾಸಗಿ ಟೆಲಿಕಾಂ ಸಂಸ್ಥೆಗಳು 2024 ರ ಜೂನ್ ತಿಂಗಳಲ್ಲಿ ಮೊಬೈಲ್ ದರವನ್ನು ಹೆಚ್ಚಿಸುವ ಮೊದಲು ಬಹುತೇಕರು ಬಿಎಸ್ಎನ್ಎಲ್ ನಿಂದ ಖಾಸಗಿ ಕಂಪನಿಗಳಿಗೆ ವಲಸೆಹೋಗುತ್ತಿದ್ದರು ಎನ್ನಲಾಗಿದೆ.ಆದರೆ ಯಾವಾಗ ಖಾಸಗಿ ಕಂಪನಿಗಳು ಮೊಬೈಲ್ ಸುಂಕವನ್ನು ಹೆಚ್ಚಿಸಿದವೋ ಆಗ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ನಿಂದ ಗ್ರಾಹಕರು ವಲಸೆ ಹೋಗುವ ಪ್ರಮಾಣ ಕಡಿಮೆಯಾಗಿದೆ.
ಇದನ್ನೂ ಓದಿ- ಇದು ವಿಶ್ವ ವಿನಾಶದ ಮೊದಲ ಸೂಚನೆ..! ಮರುಭೂಮಿಯಲ್ಲಿ 35 ಮೈಲಿ ಉದ್ದದ ಬಿರುಕು.. ವಿಜ್ಞಾನಿಗಳಿಂದ ಬಯಲಾಯ್ತು ಸತ್ಯ
ದೂರಸಂಪರ್ಕ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಇತ್ತೀಚಿಗೆ ಬಿಎಸ್ಎನ್ಎಲ್ ಕಳೆದ ಎರಡು ತಿಂಗಳಲ್ಲಿ 65 ಲಕ್ಷ ಹೊಸ ಗ್ರಾಹಕರನ್ನು ಸೇರಿಸಿಕೊಳ್ಳುವ ಮೂಲಕ ನೂತನ ದಾಖಲೆ ನಿರ್ಮಿಸಿದೆ.ಇನ್ನೂ ಸ್ಪರ್ಧಾತ್ಮಕ ದರದ ಮೂಲಕ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಂಸ್ಥೆಯು ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಮತ್ತು ಸುನಿಲ್ ಮಿತ್ತಲ್ ಮಾಲಿಕತ್ವದ ಏರ್‌ಟೆಲ್‌ಗೆ ಕಠಿಣ ಸವಾಲನ್ನು ಒಡ್ಡುತ್ತಿದೆ.
ಈಗ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಬಿಎಸ್ಎನ್ಎಲ್ ನ ಈ ಹೊಸ ಮೈಲಿಗಲ್ಲಿಗೆ ಮೆಚ್ಚುಗೆ ಸೂಚಿಸಿದ್ದಾರೆ.
ಇನ್ನೊಂದೆಡೆಗೆ ಸುಂಕ ಏರಿಕೆ ವಿಚಾರವಾಗಿ ಮಾತನಾಡಿದ ಬಿಎಸ್ಎನ್ಎಲ್ ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ರಾಬರ್ಟ್ ರವಿ 'ಮುಂಬರುವ ದಿನಗಳಲ್ಲಿ ಬಿಎಸ್ಎನ್ಎಲ್ ಮೊಬೈಲ್ ಸುಂಕ ಹೆಚ್ಚಿಸುವ ಯಾವುದೇ ಉದ್ದೇಶವನ್ನು ಹೊಂದಿಲ್ಲ' ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.