Google Contacts: ಗೂಗಲ್ ಕಾಂಟ್ಯಾಕ್ಟ್ ಗೆ ಹೊಸ ವೈಶಿಷ್ಟ್ಯ, ಈಗ ಲಭ್ಯವಾಗಲಿದೆ ಈ ಸೌಲಭ್ಯ
Google Contacts: ಗೂಗಲ್ ತನ್ನ ಕಾಂಟ್ಯಾಕ್ಟ್ ಅಪ್ಲಿಕೇಶನ್ಗೆ ಹೊಸ ವೈಶಿಷ್ಟ್ಯವನ್ನು ಸೇರಿಸಿದ್ದು, ಇದರಲ್ಲಿ ಬಳಕೆದಾರರು ತಮ್ಮ ನೆಚ್ಚಿನ ಸಂಪರ್ಕಕ್ಕಾಗಿ ಪ್ರತ್ಯೇಕ ರಿಂಗ್‌ಟೋನ್ ಹೊಂದಿಸಲು ಸಾಧ್ಯವಾಗುತ್ತದೆ.
Google Contacts: ಗೂಗಲ್ ತನ್ನ ಜನಪ್ರಿಯ ಕಾಂಟ್ಯಾಕ್ಟ್ ಅಪ್ಲಿಕೇಶನ್‌ನಲ್ಲಿ ರಿಂಗ್‌ಟೋನ್ ಪ್ರಿಯರಿಗಾಗಿ ಹೊಸ ವೈಶಿಷ್ಟ್ಯವನ್ನು ಸೇರಿಸಿದೆ. ಈ ವೈಶಿಷ್ಟ್ಯವು ಬಳಕೆದಾರರಿಗೆ ಪ್ರತಿ ಸಂಪರ್ಕಕ್ಕೆ ವಿಭಿನ್ನ ರಿಂಗ್‌ಟೋನ್ ಅನ್ನು ಹೊಂದಿಸಲು ಸಹಕಾರಿ ಆಗಿದೆ. ವೈಯಕ್ತಿಕಗೊಳಿಸಿದ ರಿಂಗ್‌ಟೋನ್‌ಗಳನ್ನು ಹೊಂದಿಸಲು ಇಷ್ಟಪಡುವ ಬಳಕೆದಾರರಿಗೆ ಈ ವೈಶಿಷ್ಟ್ಯವು ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ.
ಪತ್ರಕರ್ತ ಮಿಶಾಲ್ ರೆಹಮಾನ್ ಎಂಬುವವರು ಗೂಗಲ್ ನ ಈ ಹೊಸ ವೈಶಿಷ್ಟ್ಯವನ್ನು ಗುರುತಿಸಿದ್ದು ಈ ಬಗ್ಗೆ ಎಕ್ಸ್ (ಟ್ವಿಟ್ಟರ್) ನಲ್ಲಿ ಸ್ಕ್ರೀನ್ ಶಾಟ್ ಸಮೇತ ಪೋಸ್ಟ್ ಮಾಡಿದ್ದಾರೆ.
ಗೂಗಲ್ ಕಾಂಟ್ಯಾಕ್ಟ್ ಅಪ್ಲಿಕೇಶನ್‌ನಲ್ಲಿ ಸಂಪರ್ಕ ರಿಂಗ್‌ಟೋನ್ ಟ್ಯಾಬ್ ಫಿಕ್ಸ್ ಮತ್ತು ಮ್ಯಾನೇಜ್ ಮೆನುವಿನಲ್ಲಿ ಈ ಹೊಸ ವೈಶಿಷ್ಟ್ಯ ಲಭ್ಯವಾಗಲಿದೆ. ಇದರಲ್ಲಿ ಬಳಕೆದಾರರಿಗೆ ವಿವಿಧ ರಿಂಗ್‌ಟೋನ್‌ಗಳು ಲಭ್ಯವಿದೆ. ಕಾಂಟ್ಯಾಕ್ಟ್ ರಿಂಗ್‌ಟೋನ್ ವೈಶಿಷ್ಟ್ಯವು ಬಳಕೆದಾರರಿಗೆ ಫೋನ್ ನೋಡದೆಯೂ ತಮಗೆ ಯಾರು ಕರೆ ಮಾಡುತ್ತಿದ್ದಾರೆ ಎಂದು ಗುರುತಿಸಲು ಸಹಾಯಕವಾಗಲಿದೆ.
ಇದನ್ನೂ ಓದಿ- WhatsApp: ವಾಟ್ಸಾಪ್‌ನ ಚಾಟ್ ಪಟ್ಟಿಯಲ್ಲಿ ಶೀಘ್ರವೇ ಲಭ್ಯವಾಗಲಿದೆ ಈ ಸೌಲಭ್ಯ
ಗೂಗಲ್ ಕಾಂಟ್ಯಾಕ್ಟ್ ರಿಂಗ್‌ಟೋನ್ ವೈಶಿಷ್ಟ್ಯದ ಮೂಲಕ ಬಳಕೆದಾರರು ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ಸಹೋದ್ಯೋಗಿಗಳು ಸೇರಿದಂತೆ ನಿಮ್ಮ ನೆಚ್ಚಿನ ಸಂಪರ್ಕಗಳಿಗೆ ವಿಭಿನ್ನ ರಿಂಗ್‌ಟೋನ್‌ಗಳನ್ನು ಹೊಂದಿಸಬಹುದು.
ಇದನ್ನೂ ಓದಿ- Online Fraud: ಮಕ್ಕಳಿಗೆ ಫೋನ್ ಕೊಡುವ ಮುನ್ನ ಎಚ್ಚರ, ಎಚ್ಚರ! ಖಾಲಿಯಾದೀತು ಖಾತೆ!
ಗೂಗಲ್ ಕಾಂಟ್ಯಾಕ್ಟ್ ಅಪ್ಲಿಕೇಶನ್‌ನಲ್ಲಿ ರಿಂಗ್‌ಟೋನ್ ಹೊಂದಿಸಲು ಈ ಕೆಳಗಿನ ಪ್ರಕ್ರಿಯೆಯನ್ನು ಅನುಸರಿಸಿ:
* ಮೊದಲಿಗೆ ನಿಮ್ಮ ಫೋನ್‌ನಲ್ಲಿ ಗೂಗಲ್ ಕಾಂಟ್ಯಾಕ್ಟ್ ಅಪ್ಲಿಕೇಶನ್ ಅನ್ನು ತೆರೆಯಿಉರಿ.
* ಇದರಲ್ಲಿ ಫಿಕ್ಸ್ ಮತ್ತು ಮ್ಯಾನೇಜ್ ಮೆನುಗೆ ಹೋಗಿ, ಕೆಳಗೆ ಸ್ಕ್ರಾಲ್ ಮಾಡಿ.
* ಇದರಲ್ಲಿ ನಿಮಗೆ 'ಸಂಪರ್ಕ ರಿಂಗ್‌ಟೋನ್‌ಗಳು' ಎಂಬ ಆಯ್ಕೆ ಲಭ್ಯವಿದೆ.
* ನಂತರ ಆಡ್ ಕಾಂಟ್ಯಾಕ್ಟ್ ರಿಂಗ್‌ಟೋನ್ ಬಟನ್ ಕ್ಲಿಕ್ ಮಾಡಿ.
* ನೀವು ಪ್ರತ್ಯೇಕ ಸಂಪರ್ಕವನ್ನು ಹೊಂದಿಸಲು ಬಯಸುವ ಸಂಪರ್ಕವನ್ನು ಆರಿಸಿ.
* ಗೂಗಲ್ ಪಟ್ಟಿಯಲ್ಲಿ ಲಭ್ಯವಿರುವ ರಿಂಗ್‌ಟೋನ್‌ಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿ, ನಂತರ ಸೆಟ್ ಬಟನ್ ಕ್ಲಿಕ್ ಮಾಡಿ.
* ಈ ರೀತಿಯಾಗಿ ನೀವು ನಿಮ್ಮ ನೆಚ್ಚಿನ ಸಂಪರ್ಕಕ್ಕೆ ವಿಭಿನ್ನ ರಿಂಗ್‌ಟೋನ್ ಹೊಂದಿಸಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.