ನವದೆಹಲಿ: ಅದು ಆನ್ಲೈನ್ ಕ್ಲಾಸ್ ಆಗಿರಲಿ ಅಥವಾ ಕಚೇರಿಗೆ ಸಂಬಂಧಿಸಿದ ಕೆಲಸಗಳಾಗಿರಲಿ ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ಫೋನ್ ಗಳಂತೆ ಲ್ಯಾಪ್‌ಟಾಪ್ ಕೂಡ ಅತ್ಯಗತ್ಯ. ಆದರೆ, ಅದರ ಬೆಲೆ ಹೆಚ್ಚಳದಿಂದಾಗಿ ಪ್ರತಿಯೊಬ್ಬರಿಗೂ ಲ್ಯಾಪ್‌ಟಾಪ್ ಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಆದ್ರೆ, ಇನ್ನು ಮುಂದೆ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಇನ್ನೊಂದು ವಾರದಲ್ಲಿ ಅದ್ಭುತ ವೈಶಿಷ್ಟ್ಯಗಳೊಂದಿಗೆ 20 ಸಾವಿರಕ್ಕಿಂತ ಕಡಿಮೆ ಬೆಲೆಯ ಲ್ಯಾಪ್‌ಟಾಪ್ ಮಾರುಕಟ್ಟೆಗೆ ಲಗ್ಗೆ ಇಡಲಿದೆ.


COMMERCIAL BREAK
SCROLL TO CONTINUE READING

ಹೌದು, ವಿದ್ಯಾರ್ಥಿಗಳು ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಪ್ರೈಮ್‌ಬುಕ್ 4G ಲ್ಯಾಪ್‌ಟಾಪ್ ಮಾರ್ಚ್ 11 ರಂದು ಭಾರತದಲ್ಲಿ ಬಿಡುಗಡೆಆಗಲು ಸಜ್ಜಾಗಿದೆ. ಪ್ರೈಮ್‌ಬುಕ್ 4G ಎಂಬುದು ಆಂಡ್ರಾಯ್ಡ್ ಲ್ಯಾಪ್‌ಟಾಪ್ ಆಗಿದ್ದು, ಇದು ಜನಪ್ರಿಯ ರಿಯಾಲಿಟಿ ಶೋ ಶಾರ್ಕ್ ಟ್ಯಾಂಕ್ ಇಂಡಿಯಾದಲ್ಲಿ ಕಾಣಿಸಿಕೊಂಡಿದೆ. ವಿದ್ಯಾರ್ಥಿಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ ಈ ಲ್ಯಾಪ್‌ಟಾಪ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ಪ್ರತ್ಯೇಕವಾಗಿ ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗುತ್ತಿದೆ. 


ಇದನ್ನೂ ಓದಿ- ಏರ್‌ಟೆಲ್-ಜಿಯೋಗೆ ಟಕ್ಕರ್ ನೀಡಿ ಅದ್ಭುತ ಪ್ಲಾನ್ ಬಿಡುಗಡೆ ಮಾಡಿದ ವೊಡಾಫೋನ್ ಐಡಿಯಾ


ಪ್ರೈಮ್‌ಬುಕ್ 4G ಬೆಲೆ:
ಪ್ರೈಮ್‌ಬುಕ್ 4G ಬೆಲೆ ಮೂಲತಃ 16,990 ರೂ. ಆದಾಗ್ಯೂ, ಪರಿಚಯಾತ್ಮಕ ಕೊಡುಗೆಯಾಗಿ, ಬಳಕೆದಾರರು ಈ ಸಾಧನವನ್ನು ಫ್ಲಿಪ್‌ಕಾರ್ಟ್‌ನಲ್ಲಿ 14,990 ರೂಪಾಯಿಗಳ ರಿಯಾಯಿತಿ ದರದಲ್ಲಿ ಖರೀದಿಸಲು ಸಾಧ್ಯವಾಗುತ್ತದೆ. ಫ್ಲಿಪ್‌ಕಾರ್ಟ್‌ನಲ್ಲಿಯೂ ಸಹ ನೋ ಕಾಸ್ಟ್ ಇಎಂಐ ಸೌಲಭ್ಯದೊಂದಿಗೆ ಲಭ್ಯವಾಗಲಿದೆ.


ಪ್ರೈಮ್‌ಬುಕ್ 4G ವೈಶಿಷ್ಟ್ಯಗಳು:
ಪ್ರೈಮ್‌ಬುಕ್ 4G ತುಂಬಾ ಹಗುರವಾಗಿದ್ದು ನೀವು ನಿಮ್ಮ ಸ್ಮಾರ್ಟ್ಫೋನ್ ನಂತೆಯೇ ಎಲ್ಲಿ ಬೇಕಾದರೂ ಸುಲಭವಾಗಿ ಕೊಂಡೊಯ್ಯಬಹುದಾಗಿದೆ. ಫೋನ್ ಮತ್ತು ಟ್ಯಾಬ್ಲೆಟ್‌ಗಳ ಬೆಲೆಯಲ್ಲಿ ಲ್ಯಾಪ್‌ಟಾಪ್‌ಗಳು ಲಭ್ಯವಿದ್ದು, ಇದು ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾಗಿದೆ. ಪ್ರೈಮ್‌ಬುಕ್ 4G ಮೀಡಿಯಾ ಟೆಕ್ MT8788 ಪ್ರೊಸೆಸರ್‌ನಿಂದ ಚಾಲಿತವಾಗಿದೆ ಮತ್ತು 64GB ಸಂಗ್ರಹಣೆಯೊಂದಿಗೆ ಬರುತ್ತದೆ (200GB ವರೆಗೆ ವಿಸ್ತರಿಸಬಹುದು).


ಇದನ್ನೂ ಓದಿ- ಹೋಳಿಯಲ್ಲಿ ಕಡಿಮೆ ಬೆಲೆಯಲ್ಲಿ ಐಫೋನ್ ಖರೀದಿಸಲು ಸುವರ್ಣಾವಕಾಶ


ಪ್ರೈಮ್‌ಬುಕ್ 4ಜಿ ವಿಶೇಷಣಗಳು:
>> ಇದು ಆಂಡ್ರಾಯ್ಡ್ 11 ಆಧಾರಿತ ಬ್ರ್ಯಾಂಡ್‌ನ ಸ್ವಂತ ಆಪರೇಟಿಂಗ್ ಸಿಸ್ಟಮ್ ಆಗಿದೆ. 
>> ಪ್ರೈಮ್‌ಬುಕ್ 4G ವೈರ್‌ಲೆಸ್ ಸಿಮ್ ಕಾರ್ಡ್‌ನೊಂದಿಗೆ ಬರುತ್ತದೆ. ಅಂದರೆ, ಇದನ್ನು ಇಂಟರ್ನೆಟ್‌ಗೆ ಸುಲಭವಾಗಿ ಸಂಪರ್ಕಿಸಬಹುದು. 
>> ಇದು ಪ್ರೈಮ್‌ಓಎಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
>> ಇದು 200 ಕ್ಕೂ ಹೆಚ್ಚು ಶೈಕ್ಷಣಿಕ ಅಪ್ಲಿಕೇಶನ್‌ಗಳನ್ನು ಹೊಂದಿದೆ.
>> ಇದರಲ್ಲಿ 10 ಸಾವಿರಕ್ಕೂ ಹೆಚ್ಚು ಆಂಡ್ರಾಯ್ಡ್ ಆಪ್ ಗಳು ಲಭ್ಯವಿದ್ದು ಹಲವು ವಿಂಡೋಗಳನ್ನು ಏಕಕಾಲದಲ್ಲಿ ತೆರೆಯಬಹುದು ಎಂದು ಕಂಪನಿ ಹೇಳಿಕೊಂಡಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.