ಬೆಂಗಳೂರು : ಬೇಸಿಗೆ ಸಮೀಪಿಸುತ್ತಿದ್ದಂತೆಯೇ ಎಸಿ ಬೆಲೆ ಗಣನೀಯವಾಗಿ ಹೆಚ್ಚಾಗುತ್ತದೆ. ಈ ಕಾರಣಕ್ಕಾಗಿ ಬಹಳಷ್ಟು ಮಂದಿ ಎಸಿ ಬದಲಿಗೆ ಕೂಲರ್ ಆಯ್ಕೆ ಮಾಡುತ್ತಾರೆ.  ಆದರೆ, ಇದೀಗ ಕೂಲರ್ ಗಿಂತ ಅಗ್ಗದ ಬೆಲೆಯ ಎಸಿ ಮಾರುಕಟ್ಟೆಗೆ ಕಾಲಿಟ್ಟಿದೆ. ಇದರ ಬೆಲೆ ಮಾತ್ರ ಕಡಿಮೆಯಾಗಿದ್ದರೂ ಇದು ನೀಡುವ ತಂಪು ಆಹ್ಲಾದಕರ. ಈ ಎಸಿ ಆನ್‌ಲೈನ್ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿದೆ.  ಗ್ರಾಹಕರು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಈ ಎಸಿಯನ್ನು ಖರೀದಿಸುತ್ತಿದ್ದಾರೆ.   


COMMERCIAL BREAK
SCROLL TO CONTINUE READING

ಪೋರ್ಟಬಲ್ ಮಿನಿ ಎಸಿ ಬೆಲೆ  : 
ಅನೇಕ ಕಂಪನಿಗಳು ಫ್ಲಿಪ್‌ಕಾರ್ಟ್‌ನಲ್ಲಿ ತಮ್ಮ ಮಿನಿ ಏರ್ ಕಂಡಿಷನರ್‌ಗಳನ್ನು ಪರಿಚಯಿಸಿವೆ.  ಈ ಮಿನಿ ಎಸಿಗಳು 2 ಸಾವಿರ ರೂಪಾಯಿ ಒಳಗೆ ಲಭ್ಯವಿದೆ. ಅಂದಹಾಗೆ, ಈ ಪೋರ್ಟಬಲ್ ಎಸಿ ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಾಗಲಿದೆ. ಆದರೆ, ಆನ್‌ಲೈನ್ ಮಾರುಕಟ್ಟೆಯಲ್ಲಿ ಇದನ್ನು ಇನ್ನೂ ಕಡಿಮೆ ಬೆಲೆಗೆ ಖರೀದಿಸಬಹುದು.  ಹೌದು ಫ್ಲಿಪ್‌ಕಾರ್ಟ್‌ನಲ್ಲಿ ಈ ಮಿನಿ ಪೋರ್ಟಬಲ್ ಎಸಿಯನ್ನು 1500 ರೂಪಾಯಿಗಳಿಗೆ  ಖರೀದಿಸಬಹುದು. 


ಇದನ್ನೂ ಓದಿ : OMG! ಮುಂದಿನ 12 ವರ್ಷಗಳಲ್ಲಿ ಮನುಷ್ಯ ತನ್ನ ಯೋಚನೆ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಕಳೆದುಕೊಳ್ಳುತ್ತಾನಂತೆ!


ಹೊರಗೆ ಕೂಡಾ ಇದನ್ನು ಬಳಸಬಹುದು :
ಎಸಿಯನ್ನು ಕೊಠಡಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ. ಇದು ತುಂಬಾ ಹಗುರವಾಗಿದ್ದು, ಒಂದು ಕಡೆಯಿಂದ ಮತ್ತೊಂದೆಡೆಗೆ ಸಾಗಿಸುವುದು ಕೂಡಾ ಸುಲಭ. ಇದನ್ನು ಕೋಣೆಯಲ್ಲಿ ಎಲ್ಲಿ ಬೇಕಾದರೂ ಅಳವಡಿಸಬಹುದು. ವಿಶೇಷವೆಂದರೆ ಇದು ವಿದ್ಯುತ್‌ನಿಂದ ಚಲಿಸುವುದಿಲ್ಲ. ಇದರಲ್ಲಿ USB ಕನೆಕ್ಟರ್ ಅನ್ನು ನೀಡಲಾಗಿದೆ. ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್‌ಗೆ ಇದನ್ನು ಬಹಳ ಸುಲಭವಾಗಿ  ಕನೆಕ್ಟ್ ಮಾಡಬಹುದು.  ಅಂದರೆ, ಮನೆಯ ಹೊರತಾಗಿ, ಇದನ್ನು ಕಚೇರಿಯಲ್ಲಿ ಅಥವಾ ಹೊರಗೆ ಎಲ್ಲಿ ಬೇಕಾದರೂ ಬಳಸಬಹುದು. 


ಇದು ಕೋಣೆಯ ಬಿಸಿ ಉಷ್ಣತೆಯನ್ನು ಶೀಘ್ರದಲ್ಲೇ ಸಾಮಾನ್ಯಗೊಳಿಸುತ್ತದೆ. ಇದು ಕೋಣೆಯನ್ನು ಶೀಘ್ರ ಕೂಲಿಂಗ್ ಮಾಡುತ್ತದೆ ಎಂದೇ ಹೇಳಲಾಗುತ್ತದೆ. ಮಾರುಕಟ್ಟೆಯಿಂದ ಇದನ್ನೂ ಖರೀದಿಸುವುದು ಇಷ್ಟವಿಲ್ಲ ಎಂದಿದ್ದರೆ ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್ ಅಥವಾ ಅಮೆಜಾನ್‌ನಿಂದ ಸುಲಭವಾಗಿ ಖರೀದಿಸಬಹುದಾಗಿದೆ. 


ಇದನ್ನೂ ಓದಿ : Jio ಕಂಪನಿಯ ಅತ್ಯಂತ ಅಗ್ಗದ ಪ್ಲಾನ್ ಇದು, ನೆಟ್ಫ್ಲಿಕ್ಸ್-ಪ್ರೈಮ್ ವಿಡಿಯೋ ಸೇರಿದಂತೆ ಅನಿಯಮಿತ ಕರೆ ಮತ್ತು 200ಜಿಬಿ ಡೇಟಾ!


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ