ಈ ನಂಬರ್ ಗೆ ಡಯಲ್ ಮಾಡಿದರೆ ಸಾಕು Jio, Airtel ನೆಟ್ ವರ್ಕ್ ನಿಂದ ಸಿಗುವುದು ಮುಕ್ತಿ !ಆಕ್ಟಿವೇಟ್ ಆಗುವುದು BSNL 4G SIM
How to activate BSNL 4G SIM:ಗ್ರಾಹಕರನ್ನು ತನ್ನತ್ತ ಸೆಳೆಯಲು BSNL 4G ಮತ್ತು 5G ಸಿಮ್ ಕಾರ್ಡ್‌ಗಳನ್ನು ನೀಡಲು ಪ್ರಾರಂಭಿಸಿದೆ.ಈಗ ಬಹಳ ಸುಲಭವಾಗಿ bsnl ಸಿಮ್ ಅನ್ನು ಆಕ್ಟಿವ್ ಮಾಡಿಕೊಳ್ಳಬಹುದು.
How to activate BSNL 4G SIM : ದೇಶದ ದೊಡ್ಡ ಟೆಲಿಕಾಂ ಕಂಪನಿಗಳು, Airtel, Jio ಮತ್ತು Vi ರೀಚಾರ್ಜ್ ಪ್ಲಾನ್ ಗಳ ಬೆಲೆ ಹೆಚ್ಚಿಸುವ ಮೂಲಕ ಗ್ರಾಹಕರ ಮೇಲೆ ಸರಾಸರಿ 15% ಹೆಚ್ಚುವರಿ ಹೊರೆಯನ್ನು ವಿಧಿಸಿವೆ. ಈ ಹೆಚ್ಚಳದಿಂದಾಗಿ, ಗ್ರಾಹಕರು ಈಗ ಅಗ್ಗದ ಆಯ್ಕೆಗಳತ್ತ ಮುಖ ಮಾಡುತ್ತಿದ್ದಾರೆ. ಈ ಮಧ್ಯೆ, BSNL ತನ್ನ 4G ಸೇವೆಗಳನ್ನು ವೇಗವಾಗಿ ವಿಸ್ತರಿಸಿದೆ. ಶೀಘ್ರದಲ್ಲೇ 5G ಸೇವೆಗಳನ್ನು ಪ್ರಾರಂಭಿಸಲಿದೆ.ಗ್ರಾಹಕರನ್ನು ತನ್ನತ್ತ ಸೆಳೆಯಲು ಕಂಪನಿಯು 4G ಮತ್ತು 5G ಸಿಮ್ ಕಾರ್ಡ್‌ಗಳನ್ನು ನೀಡಲು ಪ್ರಾರಂಭಿಸಿದೆ.
ಗ್ರಾಹಕರಿಗೆ ಅನುಕೂಲವಾಗುವಂತೆ ಸಿಮ್ ಪಡೆಯಲು BSNL ಹಲವು ಆಯ್ಕೆಗಳನ್ನು ನೀಡಿದೆ.BSNL ಸಿಮ್ ಕಾರ್ಡ್ ಗಳನ್ನು ಮಾರುಕಟ್ಟೆಯಿಂದ ಖರೀದಿಸಬಹುದು. ಬಿಎಸ್‌ಎನ್‌ಎಲ್ ಕಚೇರಿಯಿಂದ ಪಡೆಯಬಹುದು, ಅಥವಾ ಮನೆಗೆ ಆರ್ಡರ್ ಮಾಡಬಹುದು.ಜನ ಇದೀಗ BSNLನಟ್ಟ ಹೆಚ್ಚು ಒಲವು ತೋರುತ್ತಿದ್ದಾರೆ.ಆಗಸ್ಟ್ ವರದಿಯ ಪ್ರಕಾರ, ಜಿಯೋ ಚಂದಾದಾರರು ಕಡಿಮೆಯಾಗಿದ್ದು, BSNL ಚಂದಾದಾರರು ಹೆಚ್ಚಾಗುತ್ತಿದ್ದಾರೆ. ಇದೀಗ ರಾಜ್ಯದ ಒಟ್ಟು BSNL ಗ್ರಾಹಕರು 40 ಲಕ್ಷಕ್ಕೆ ತಲುಪಿದ್ದಾರೆ. ಹೊಸ BSNL ಗ್ರಾಹಕರು ತಮ್ಮ ಸಿಮ್ ಬಹಳ ಸುಲಭವಾಗಿ ಆಕ್ಟಿವ್ ಮಾಡಬಹುದು.
ಹೊಸ BSNL ಸಿಮ್ ಕಾರ್ಡ್ ಅನ್ನು ಆಕ್ಟಿವ್ ಮಾಡುವುದು ಹೇಗೆ ? :
ಹಂತ 1: ಮೊದಲು ಮೊಬೈಲ್ ಫೋನ್‌ನಲ್ಲಿ BSNL ಸಿಮ್ ಕಾರ್ಡ್ ಅನ್ನು ಹಾಕಿ.
ಹಂತ 2: ಫೋನ್ ಅನ್ನು ರೀಸ್ಟಾರ್ಟ್ ಮಾಡಿ.
ಹಂತ 3: ನಿಮ್ಮ ಫೋನ್ ನೆಟ್‌ವರ್ಕ್ ಸಿಗ್ನಲ್ ಪಡೆಯುವವರೆಗೆ ಸ್ವಲ್ಪ ಸಮಯ ಕಾಯಿರಿ.
ಹಂತ 4: ನಿಮ್ಮ ಫೋನ್‌ನ ಫೋನ್ ಅಪ್ಲಿಕೇಶನ್ ತೆರೆಯಿರಿ.
ಹಂತ 5: 1507 ಸಂಖ್ಯೆಗೆ ಕರೆ ಮಾಡಿ.
ಹಂತ 6: ಕರೆ ಸಮಯದಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕೇಳಲಾಗುತ್ತದೆ.
ಹಂತ 7: ಟೆಲಿ-ಪರಿಶೀಲನೆಗಾಗಿ ನೀಡಲಾದ ಸೂಚನೆಗಳನ್ನು ಅನುಸರಿಸಿ.
ಹಂತ 8: ಕೆಲವು ಇಂಟರ್ನೆಟ್ ಸೆಟ್ಟಿಂಗ್‌ಗಳನ್ನು ನೀಡಲಾಗುತ್ತದೆ. ಅದನ್ನು ಸೇವ್ ಮಾಡಿ.
ಹಂತ 9: ಈಗ ನಿಮ್ಮ BSNL ಸಿಮ್ ಆಕ್ಟಿವ್ ಆಗುತ್ತದೆ.
ಹಂತ 10: ಈಗ ಸಿಮ್ ಕಾರ್ಡ್‌ನಿಂದ ಕರೆಗಳನ್ನು ಮಾಡಬಹುದು ಮತ್ತು ಇಂಟರ್ನೆಟ್ ಬಳಸಬಹುದು.
ಇದನ್ನೂ ಓದಿ : ಬೆಂಗಳೂರಿನಲ್ಲಿ ಎಲ್ಲೇ ಸುತ್ತಾಡಿದ್ರೂ ಕೇವಲ 1 ರೂ.ಗೆ ಸಿಗುತ್ತೆ ಆಟೋ ರೈಡ್, ಈ ಆಫರ್ ಏನ್ ಗೊತ್ತಾ?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.