Swiggy Revealed Most Ordered Food Item during IPL : ಐಪಿಎಲ್ 2023 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅಬ್ಬರದ ಜಯ ಸಾಧಿಸಿದೆ. ಎಂಎಸ್ ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ ಐದನೇ ಬಾರಿಗೆ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿದೆ. ಇದೀಗ ಜನಪ್ರಿಯ ಆನ್‌ಲೈನ್ ಆಹಾರ ವಿತರಣಾ ಅಪ್ಲಿಕೇಶನ್ ಸ್ವಿಗ್ಗಿ ಹೊಸ ವರದಿಯನ್ನು ಬಿಡುಗಡೆ ಮಾಡಿದೆ. ಸ್ವಿಗಿ ಮಾಡಿದ ವರದಿಯಲ್ಲಿ ಐಪಿಎಲ್ ಸಮಯದಲ್ಲಿ ಜನರು ಯಾವ ಆಹಾರವನ್ನು ಹೆಚ್ಚು ಆರ್ಡರ್ ಮಾಡಿದ್ದಾರೆ ಎನ್ನುವ ಮಾಹಿತಿಯನ್ನು ಬಹಿರಂಗಪಡಿಸಿದೆ. ಈ ಕ್ರಿಕೆಟ್ ಋತುವಿನಲ್ಲಿ ಅತಿ ಹೆಚ್ಚು ಆರ್ಡರ್ ಆದ ಆಹಾರವೆಂದರೆ ಅದು ಬಿರಿಯಾನಿ ಎಂದು ಹೇಳಿದೆ ಸ್ವಿಗಿ. ಈ ಮೂಲಕ ಆರ್ಡರ್ ವಿಷಯದಲ್ಲಿ ಬಿರಿಯಾನಿ ಟ್ರೋಫಿ ಗೆದ್ದಿದೆ.   ಕಂಪನಿಯು ಐಪಿಎಲ್ ಫೈನಲ್‌ನ ದಿನವಾದ ಮೇ 29ರಂದು ಪೋಸ್ಟ್ ಮಾಡಿದೆ. 


COMMERCIAL BREAK
SCROLL TO CONTINUE READING

ಅತ್ಯಧಿಕ ಆರ್ಡರ್‌ ಪಡೆದ ಬಿರಿಯಾನಿ :  
ಕಂಪನಿ 212 ಬಿಪಿಎಂ (ಪ್ರತಿ ನಿಮಿಷಕ್ಕೆ ಆರ್ಡರ್ ಆಗುವ ಬಿರಿಯಾನಿ) ಅಂದರೆ 12 ಮಿಲಿಯನ್‌ಗಿಂತಲೂ ಹೆಚ್ಚು ಬಿರಿಯಾನಿ ಆರ್ಡರ್‌ಗಳನ್ನು ಸ್ವೀಕರಿಸಿದೆ ಎಂದು ಟ್ವೀಟ್ ಮಾಡುವ ಮೂಲಕ ಸ್ವಿಗ್ಗಿ ಹೇಳಿದೆ. ಟ್ವೀಟ್‌ನ ಕೊನೆಯಲ್ಲಿ ಟ್ರೋಫಿ ಎಮೋಜಿಯನ್ನು ಕೂಡಾ ಕಂಪನಿ ಹಾಕಿದೆ. 'ಈ ಋತುವಿನಲ್ಲಿ ಹೆಚ್ಚು ಆರ್ಡರ್ ಪಡೆದ ಆಹಾರವಾಗಿ ಬಿರಿಯಾನಿ ಟ್ರೋಫಿಯನ್ನು ಗೆದ್ದಿದೆ' ಎಂದು ಸ್ವಿಗಿ ಘೋಷಿಸಿದೆ. 


ಇದನ್ನೂ ಓದಿ : ಒಂದೇ ಸ್ಕೂಲ್’ನಲ್ಲಿ ಓದಿದ್ರು ಸ್ಟಾರ್ ಕ್ರಿಕೆಟಿಗರ ಪತ್ನಿಯರು: ಒಬ್ರು ನಟಿ… ಮತ್ತೊಬ್ರು ನಿರ್ಮಾಪಕಿ: ಯಾರೆಂದು ಗೆಸ್ ಮಾಡಿ…


ಚೆನ್ನೈನಲ್ಲಿ ಮಾರಾಟವಾದ ಮೊಸರು-ಸಕ್ಕರೆ : 
ಹೊಸ ಟ್ವೀಟ್‌ನಲ್ಲಿ, ಮಾರಾಟವಾದ ಜಿಲೇಬಿ ಮತ್ತು ಫಫ್ಡಾಗಳ ಸಂಖ್ಯೆಯನ್ನು ಸಹಾ ಉಲ್ಲೇಖಿಸಲಾಗಿದೆ. ಚೆನ್ನೈ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಿಂದ 3,641 ಯುನಿಟ್ ಮೊಸರು ಮತ್ತು 720 ಯುನಿಟ್ ಸಕ್ಕರೆಯನ್ನು ಆರ್ಡರ್ ಮಾಡಲಾಗಿದೆ ಎಂದು ಕಂಪನಿ ಹೇಳಿದೆ. 


ಕಂಪನಿಯ ಹೂಡಿಕೆ ಎಷ್ಟು ಎನ್ನುವುದು ತನ್ನ ಹಿಂದೆಯೇ ಇದೆ ಎಂದು , ಸ್ವಿಗ್ಗಿ ಮುಖ್ಯ ಕಾರ್ಯನಿರ್ವಾಹಕ ಮತ್ತು ಸಂಸ್ಥಾಪಕ ಶ್ರೀಹರ್ಷ ಮೆಜೆಟಿಬ್ಲಾಗ್ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಕಂಪನಿಯು ದಿನಸಿ ವಿತರಣಾ ಸೇವೆ ಇನ್‌ಸ್ಟಾಮಾರ್ಟ್‌ನಲ್ಲಿ 'ನಿರಂತರ' ಹೂಡಿಕೆಗಳನ್ನು ಮಾಡುತ್ತಿದೆ.  ಇದು ಜೊಮಾಟೊ ಒಡೆತನದ ಬ್ಲಿಂಕಿಟ್ ಮತ್ತು ಸ್ಟಾರ್ಟ್-ಅಪ್ ಝೆಪ್ಟೋ ಜೊತೆ ಸ್ಪರ್ಧಿಸುತ್ತಿದೆ.  


ಇದನ್ನೂ ಓದಿ : ಬರೋಬ್ಬರಿ 12 ಕೋಟಿಗೂ ಅಧಿಕ ವೀಕ್ಷಕರಿಂದ Tata IPL​-2023 ಫೈನಲ್​ ಪಂದ್ಯ ವೀಕ್ಷಣೆ..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ