ಬೆಂಗಳೂರು : Airtel Cheapest Plans with Amazon Prime: ಸಿನಿಮಾ ಮಂದಿರಗಳಲ್ಲಿ ಸಿನಿಮಾ ನೋಡುವುದು ಎಷ್ಟು ಖುಷಿ ಕೊಡುತ್ತದೆಯೋ,  ಓಟಿಟಿ ಯಲ್ಲಿ ಬರುವ ಶೋ ಗಲನೂ ವೀಕ್ಷಿಸುವುದು ಕೂಡಾ ಅಷ್ಟೇ ಮಜಾ ಎನಿಸುತ್ತದೆ.   ಆದರೆ OTT ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುವ  ಶೋಗಳು ಮತ್ತು ಚಲನಚಿತ್ರಗಳನ್ನು ವೀಕ್ಷಿಸಬೇಕಾದರೆ ಅದರ ಚಂದಾದಾರಿಕೆ ತೆಗೆದುಕೊಳ್ಳಬೇಕಾಗುತ್ತದೆ. ಈ ಚಂದಾದಾರಿಕೆ ತುಸು ದುಬಾರಿಯೇ ಸರಿ. ಟೆಲಿಕಾಂ ಕಂಪನಿಗಳ ರೀಚಾರ್ಜ್ ಪ್ಲಾನ್ ಗಳ ಮೂಲಕವೂ  ಈ OTT ಅಪ್ಲಿಕೇಶನ್‌ಗಳಿಗೆ ಆಕ್ಸೆಸ್ ಪಡೆಯಬಹುದು.  ಹೌದು ಇಂದು ನಾವು ಕಡಿಮೆ ಬೆಲೆಯಲ್ಲಿ ಡೇಟಾ ಮತ್ತು OTT ಪ್ರಯೋಜನಗಳನ್ನು ನೀಡುತ್ತಿರುವ ಏರ್‌ಟೆಲ್‌ನ ರೀಚಾರ್ಜ್ ಪ್ಲಾನ್ ಬಗ್ಗೆ ಮಾಹಿತಿ ನೀಡಲಿದ್ದೇವೆ. 


COMMERCIAL BREAK
SCROLL TO CONTINUE READING

ಏರ್‌ಟೆಲ್ ನ 108 ರೂಪಾಯಿಗಳ ಪ್ಲಾನ್ ನಲ್ಲಿ  ವೀಕ್ಷಿಸಬಹುದು Amazon Prime Video  :
ಏರ್‌ಟೆಲ್‌ನ 108 ರೂ.ಗಳ ಡೇಟಾ ರೀಚಾರ್ಜ್ ಪ್ಲಾನ್ ಆಡ್-ಆನ್ ಪ್ಲಾನ್ ಆಗಿದೆ.  ಈ ಪ್ಲಾನ್ ತನ್ನದೇ ಆದ ವ್ಯಾಲಿಡಿಟಿ ಹೊಂದಿಲ್ಲ. ಇದು ನಿಮ್ಮ ಅಸ್ತಿತ್ವದಲ್ಲಿರುವ ಪ್ಲಾನ್‌ ಎಲ್ಲಿಯವರೆಗೆ ವ್ಯಾಲಿಡಿಟಿ ಹೊಂದಿರುತ್ತದೆಯೋ ಅಲ್ಲಿವರೆಗೆ ಈ ಪ್ಲಾನ್ ಕೂಡಾ ವ್ಯಾಲಿಡಿಟಿ ಹೊಂದಿರುತ್ತದೆ.  ಇದರಲ್ಲಿ ನಿಮಗೆ ಒಟ್ಟು 6GB ಡೇಟಾವನ್ನು ನೀಡಲಾಗುತ್ತಿದೆ.


ಇದನ್ನೂ ಓದಿ : 16 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ಬ್ಯಾನ್ ಮಾಡಿದ WhatsApp!


ಅಲ್ಲದೆ, ಈ ಯೋಜನೆಯಲ್ಲಿ, 30 ದಿನಗಳವರೆಗೆ Amazon Prime ವೀಡಿಯೊದ ಮೊಬೈಲ್ ಆವೃತ್ತಿಗೆ ಚಂದಾದಾರಿಕೆ ಸಿಗಲಿದೆ. ಇದು ಮಾತ್ರವಲ್ಲದೆ, ಈ ಆಡ್-ಆನ್ ರೀಚಾರ್ಜ್ ಯೋಜನೆಯು ಹಲೋ ಟ್ಯೂನ್ಸ್ ಮತ್ತು ವಿಂಕ್ ಮ್ಯೂಸಿಕ್‌ಗೆ ಉಚಿತ ಆಕ್ಸೆಸ್ ಸಿಗುತ್ತದೆ. 


ಏರ್‌ಟೆಲ್ ರೂ 148 ಯೋಜನೆ  :
108 ರೂ.  ಯೋಜನೆಯನ್ನು ಹೊರತುಪಡಿಸಿ, ಏರ್‌ಟೆಲ್ ಒಟಿಟಿ ಪ್ರಯೋಜನಗಳನ್ನು ಒಳಗೊಂಡಿರುವ ಅಗ್ಗದ ಪ್ಲಾನ್ ಇದೆ. ಈ ಪ್ಲಾನ್‌ನ ಬೆಲೆ 148 ರೂ. ಆಗಿದೆ.  108 ರೂ. ಪ್ಲಾನ್ ಗೆ ಹೋಲಿಸಿದರೆ ಇದರಲ್ಲಿ 15GB ಡೇಟಾವನ್ನು ನೀಡಲಾಗುತ್ತಿದೆ. ಮಾತ್ರವಲ್ಲ ಈ ಯೋಜನೆಯು ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ಯಾಕ್‌ಗೆ ಉಚಿತ ಅಕ್ಸೆಸ್ ನೀಡುತ್ತದೆ.  ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ಯಾಕ್‌ನಲ್ಲಿ, ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಚಾನಲ್‌ಗಳಲ್ಲಿ ಒಂದಕ್ಕೆ 30 ದಿನಗಳವರೆಗೆ ಚಂದಾದಾರಿಕೆ ಸಿಗಲಿದೆ. 


ಇದನ್ನೂ ಓದಿ : Whatsapp Alert : Whatsapp ಬಳಕೆದಾರರೇ ಎಚ್ಚರ..! ವ್ಯಾಟ್ಸ್ ಆಪ್ ಕರೆ ಮೂಲಕ ಮಾಡಲಾಗುತ್ತದೆ ವಂಚನೆ


ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ Hoichoi, ErosNow ಮತ್ತು ManoramaMax ಅನ್ನು ಸಹ ಪಡೆಯಬಹುದು. ಈ ಯೋಜನೆಯ ಸಿಂಧುತ್ವವು ಗ್ರಾಹಕರ ಮೂಲ ಯೋಜನೆಯ ಮಾನ್ಯತೆಗೆ ಸಮಾನವಾಗಿರುತ್ತದೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.