Airtel Cheapest Recharge Plan: 150 ರೂ.ಗಳಿಗೂ ಕಮ್ಮಿ ಬೆಲೆಯ ಮೂರು ಜಬರ್ದಸ್ತ್ ಮಾಸಿಕ ಪ್ಲಾನ್ ಬಿಡುಗಡೆಗೊಳಿಸಿದ ಏರ್ಟೆಲ್
Airtel Cheapest Recharge Plan: ರೂ.296 ಹಾಗೂ ರೂ.319 ರ ಪ್ಲಾನ್ ಗಳ ಬಳಿಕ ಇದೀಗ ಏರ್ಟೆಲ್ ಅಗ್ಗದ ಬೆಲೆಯಲ್ಲಿ ಮೂರು ಹೊಚ್ಚ ಹೊಸ ಮಾಸಿಕ ಪ್ಲಾನ್ ಗಳನ್ನು ಬಿಡುಗಡೆಗೊಳಿಸಿದೆ. ಈ ಮೂರೂ ಪ್ಲಾನ್ ಗಳ ಬೆಲೆ ರೂ.150ಕ್ಕಿಂತಲೂ ಕಡಿಮೆಯಾಗಿದ್ದು, ಮೂರು ಪ್ಲಾನ್ ಒಂದು ತಿಂಗಳ ಮಾನ್ಯತೆಯನ್ನು ಹೊಂದಿವೆ.
Airtel Cheapest Recharge Plan: ಏರ್ಟೆಲ್ ತನ್ನ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ಪೋರ್ಟ್‌ಫೋಲಿಯೊನಲ್ಲಿ ಮೂರು ಹೊಸ ಮಾಸಿಕ ರೀಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ. ವಿಶೇಷವೆಂದರೆ ಈ ಎಲ್ಲಾ ರೀಚಾರ್ಜ್ ಯೋಜನೆಗಳ ಬೆಲೆ 150 ರೂ.ಗಿಂತ ಕಡಿಮೆಯಾಗಿದೆ. ಈ ಮೊದಲೂ ಕೂಡ ಏರ್‌ಟೆಲ್ ತನ್ನ ಬಳಕೆದಾರರಿಗೆ ಮಾಸಿಕ ರೀಚಾರ್ಜ ಯೋಜನೆಗಳನ್ನು ಬಿಡುಗಡೆ ಮಾಡಿತ್ತು, ಅವುಗಳ ಬೆಲೆ ಕ್ರಮೇಣ 296 ರೂ. ಮತ್ತು 319 ರೂ. ಆಗಿದೆ. ಹೊಸ ಅಗ್ಗದ ಮಾಸಿಕ ರೀಚಾರ್ಜ್ ಯೋಜನೆಯ ಬೆಲೆ ಮತ್ತು ಪ್ರಯೋಜನಗಳನ್ನು ತಿಳಿದುಕೊಳ್ಳೋಣ ಬನ್ನಿ
ಏರ್ಟೆಲ್ ಹೊಸ ಮಾಸಿಕ ಯೋಜನೆ
ಈ ಹೊಸ ಯೋಜನೆಗಳಲ್ಲಿ ಅತ್ಯಂತ ಅಗ್ಗದ ರೀಚಾರ್ಜ್ ಯೋಜನೆ ಎಂದರೆ ಅದು 109 ರೂ.ಯೋಜನೆ. ಈ ರೀಚಾರ್ಜ್ ಯೋಜನೆಯಲ್ಲಿ, ಬಳಕೆದಾರರಿಗೆ 30 ದಿನಗಳ ಮಾನ್ಯತೆಯೊಂದಿಗೆ ಹಲವು ಪ್ರಯೋಜನಗಳನ್ನು ನೀಡಲಾಗುತ್ತದೆ. ಈ ಪ್ರಯೋಜನಗಳು ರೂ 99 ಟಾಕ್-ಟೈಮ್ ಹಾಗೂ 200MB ಡೇಟಾವನ್ನು ಒಳಗೊಂಡಿವೆ. ಇದಲ್ಲದೆ, ಸ್ಥಳೀಯ, ಎಸ್‌ಟಿಡಿ ಮತ್ತು ಲ್ಯಾಂಡ್‌ಲೈನ್ ಕರೆಗಳಿಗೆ ಬಳಕೆದಾರರಿಗೆ ಸೆಕೆಂಡಿಗೆ 2.5 ಪೈಸೆ ಚಾರ್ಜ್ ವಿಧಿಸಲಾಗುತ್ತಿದೆ. ಎಸ್‌ಎಂಎಸ್ ಕುರಿತು ಹೇಳುವುದಾದರೆ, 1 ಎಸ್‌ಎಂಎಸ್‌ಗೆ ರೂ 1 ಮತ್ತು ಎಸ್‌ಟಿಡಿ ಸಂದೇಶಕ್ಕೆ ರೂ 1.5 ಶುಲ್ಕ ವಿಧಿಸಲಾಗುತ್ತಿದೆ.
ಏರ್‌ಟೆಲ್‌ನ ಹೊಸ ಯೋಜನೆಗಳ ಪಟ್ಟಿಯಲ್ಲಿ ಮುಂದಿನ ಪ್ಲಾನ್ 111 ರೂ.ಗಳದ್ದಾಗಿದೆ, ಇದರಲ್ಲಿ ಬಳಕೆದಾರರಿಗೆ 1 ತಿಂಗಳ ಮಾನ್ಯತೆ ಸಿಗುತ್ತಿದೆ. ಪ್ರಯೋಜನಗಳ ಕುರಿತು ಹೇಳುವುದಾದರೆ, ಈ ಯೋಜನೆಯಲ್ಲಿ ರೂ 99 ಟಾಕ್-ಟೈಮ್ ಮತ್ತು 200MB ಡೇಟಾ ಒಳಗೊಂಡಿದೆ. ಇದಲ್ಲದೆ, ಸ್ಥಳೀಯ, ಎಸ್‌ಟಿಡಿ ಮತ್ತು ಲ್ಯಾಂಡ್‌ಲೈನ್ ಕರೆಗಳಿಗೆ ಬಳಕೆದಾರರಿಗೆ ಸೆಕೆಂಡಿಗೆ 2.5 ಪೈಸೆ ವಿಧಿಸಲಾಗುತ್ತಿದೆ. ಸ್ಥಳೀಯ ಎಸ್‌ಎಂಎಸ್‌ಗೆ ರೂ 1 ಮತ್ತು ಎಸ್‌ಟಿಡಿ ಸಂದೇಶಗಳಿಗೆ ರೂ 1.5 ಶುಲ್ಕ ವಿಧಿಸಲಾಗುತ್ತದೆ.
ಇದನ್ನೂ ಓದಿ-ಟೈಪ್ ಮಾಡದೆಯೇ ಯಾರಿಗಾದರೂ Whatsapp ಸಂದೇಶ ಕಳುಹಿಸಲು ಈ ಟಿಪ್ಸ್ ಅನುಸರಿಸಿ
ಈ ಪಟ್ಟಿಯಲ್ಲಿನ ಕೊನೆಯ ಯೋಜನೆಗೆ 131 ರೂ.ಗಳ ಯೋಜನೆಯಾಗಿದೆ. ಈ ಪ್ಯಾಕ್ 1 ತಿಂಗಳ ಮಾನ್ಯತೆಯೊಂದಿಗೆ ಬರುತ್ತದೆ. ಆದರೆ, ಇದರ ಪ್ರಯೋಜನಗಳು ಸ್ವಲ್ಪ ವಿಭಿನ್ನವಾಗಿವೆ. ಈ ಯೋಜನೆಯನ್ನು ಸಕ್ರಿಯಗೊಳಿಸಿದಾಗ, ಬಳಕೆದಾರರಿಗೆ ಸ್ಥಳೀಯ ಮತ್ತು STD ಕರೆಗಳಿಗೆ ಪ್ರತಿ ಸೆಕೆಂಡಿಗೆ 2.5 ಪೈಸೆ ವಿಧಿಸಲಾಗುತ್ತದೆ, ಆದರೆ ರಾಷ್ಟ್ರೀಯ ವೀಡಿಯೊ ಕರೆ ದರವು ಪ್ರತಿ ಸೆಕೆಂಡಿಗೆ 5 ಪೈಸೆಯಾಗಿರುತ್ತದೆ. ಈ ಯೋಜನೆಯಲ್ಲಿ ಇಂಟರ್ನೆಟ್ ಬಳಕೆಗೆ ಪ್ರತಿ MB ಗೆ 50 ಪೈಸೆ ವಿಧಿಸಲಾಗುತ್ತದೆ. ಸ್ಥಳೀಯ ಎಸ್‌ಎಂಎಸ್‌ಗೆ ರೂ 1 ಮತ್ತು ಎಸ್‌ಟಿಡಿ ಸಂದೇಶಗಳಿಗೆ ರೂ 1.5 ಶುಲ್ಕ ವಿಧಿಸಲಾಗುತ್ತಿದೆ.
ಇದನ್ನೂ ಓದಿ-Paytm ಬಳಕೆದಾರರೇ ಎಚ್ಚರ.! Cash Back ಆಸೆಗಾಗಿ ಬಿಲ್ ಪಾವತಿಸಿದರೆ ಖಾತೆಯೇ ಖಾಲಿಯಾಗಲಿದೆ ..!
ಏರ್‌ಟೆಲ್‌ನ ರೂ 296 ಮತ್ತು ರೂ 319 ನ ಮಾಸಿಕ ಯೋಜನೆಗಳು
ಮತ್ತೊಂದೆಡೆ, ಏರ್‌ಟೆಲ್‌ನ ಮಾಸಿಕ ರೀಚಾರ್ಜ್ ಯೋಜನೆಯ 296 ರೂಗಳ ಪ್ರಯೋಜನಗಳ ಕುರಿತು ಹೇಳುವುದಾದರೆ, ಈ ಯೋಜನೆಯು ಅನಿಯಮಿತ ಕರೆ, 100 ದೈನಂದಿನ SMS ಮತ್ತು ಒಟ್ಟು 25GB ಡೇಟಾವನ್ನು ನೀಡುತ್ತದೆ. ರೂ 319 ಪ್ಯಾಕ್‌ನಲ್ಲಿ ಬಳಕೆದಾರರು 100 ದೈನಂದಿನ SMS, ಅನಿಯಮಿತ ಕರೆ ಮತ್ತು 2GB ದೈನಂದಿನ ಡೇಟಾವನ್ನು ಪಡೆಯುತ್ತಾರೆ. ಈ ಎರಡೂ ಪ್ಯಾಕ್‌ಗಳೊಂದಿಗೆ, ಬಳಕೆದಾರರು ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿಯ 30-ದಿನಗಳ ಉಚಿತ ಚಂದಾದಾರಿಕೆ ಸಹ ಪಡೆಯುತ್ತಾರೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.