Airtel 1GB Free Data Offer - ಸಾಮಾನ್ಯವಾಗಿ ಇತರ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಹೋಲಿಸಿದರೆ ಏರ್‌ಟೆಲ್ ಕಂಪನಿಯು ದುಬಾರಿ ರೀಚಾರ್ಜ್ ಯೋಜನೆಗಳನ್ನು ಜಾರಿಗೆ ತರುತ್ತದೆ. ಆದರೂ ಕೂಡ ಉತ್ತಮ ಸಂಪರ್ಕದಿಂದಾಗಿ, ಹೆಚ್ಚಿನ ಸಂಖ್ಯೆಯ ಜನರು ಇಂದಿಗೂ ಕೂಡ ಏರ್‌ಟೆಲ್  ಬಳಸುತ್ತಾರೆ. ತನ್ನ ಇಂತಹ ಬಳಕೆದಾರರನ್ನು ಮೆಚ್ಚಿಸಲು, ಕಂಪನಿಯು 1GB ಡೇಟಾವನ್ನು ಕಾಂಪ್ಲಿಮೆಂಟರಿ ರೂಪದಲ್ಲಿ ನೀಡಲು ತೀರ್ಮಾನಿಸಿದೆ. ಆದರೆ, ಈ ಆಫರ್ ಮೂರು ದಿನಗಳವರೆಗೆ ಮಾತ್ರ ಲಭ್ಯವಿರುತ್ತದೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.


COMMERCIAL BREAK
SCROLL TO CONTINUE READING

ಓನ್ಲಿಟೆಕ್‌ನ ಇತ್ತೀಚಿನ ವರದಿಯ ಪ್ರಕಾರ, ಏರ್‌ಟೆಲ್ 1GB ಡೇಟಾವನ್ನು ಪೂರಕವಾಗಿ ನೀಡುತ್ತಿದೆ. ಆದರೆ, ವಿಶೇಷ ಯೋಜನೆಯಡಿಯಲ್ಲಿ ಮಾತ್ರ ಈ ಉಚಿತ ಡೇಟಾವನ್ನು ಬಳಕೆದಾರರಿಗೆ ನೀಡಲಾಗುತ್ತಿದೆ. ವರದಿಯ ಪ್ರಕಾರ, ಏರ್‌ಟೆಲ್ ಕಂಪನಿಯು ತನ್ನ ಆಯ್ದ ಬಳಕೆದಾರರಿಗೆ 1 GB ಹೈ-ಸ್ಪೀಡ್ ಡೇಟಾವನ್ನು ಉಚಿತವಾಗಿ ನೀಡುವುದಾಗಿ ಸಂದೇಶ ಕಳುಹಿಸಿ ಮಾಹಿತಿಯನ್ನು ನೀಡುತ್ತಿದೆ. ನಿಮಗೂ ಕೂಡ ನಿಮ್ಮ ಏರ್ಟೆಲ್ ಸಂಖ್ಯೆಗೆ ಈ ಸಂದೇಶ ಬಂದಿದ್ದಾರೆ, ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್‌ಗೆ ಭೇಟಿ ನೀಡುವ ಮೂಲಕ ನೀವು ಈ ಕೊಡುಗೆಯನ್ನು ಕ್ಲೈಮ್ ಮಾಡಬಹುದು. ಇದಕ್ಕಾಗಿ ನೀವು ಏರ್‌ಟೆಲ್ ಥ್ಯಾಂಕ್ಸ್ ಆ್ಯಪ್‌ನಲ್ಲಿನ 'ಕೂಪನ್ಸ್' ವಿಭಾಗಕ್ಕೆ ಹೋಗಿ ಉಚಿತ ಡೇಟಾವನ್ನು ಕ್ಲೈಮ್ ಮಾಡಬೇಕು. 


ಈ ಕೊಡುಗೆ ಜೂನ್ 1 ರವರೆಗೆ ಮಾತ್ರ
ಇದರ ಹೊರತಾಗಿ, ನಾವು ಹೇಳಿದಂತೆ, ಈ ಕೊಡುಗೆಯನ್ನು ಕೇವಲ 3 ದಿನಗಳವರೆಗೆ ಲೈವ್ ಇರಲಿದೆ. ಇದರರ್ಥ ಕಂಪನಿಯು ಈ ಉಚಿತ ಡೇಟಾವನ್ನು ಕೇವಲ 3 ದಿನಗಳವರೆಗೆ ನೀಡುತ್ತಿದೆ, ಇದರ ಕೊನೆಯ ದಿನ ನಾಳೆ ಅಂದರೆ ಜೂನ್ 1, 2022 ಆಗಿರಲಿದೆ.


ಇದನ್ನೂ ಓದಿ-How To Block Spam Calls: ಈ ರೀತಿ ಮಾಡಿದರೆ Spam Calls ಕಾಟ ಕ್ಷಣ ಮಾತ್ರದಲ್ಲಿ ತಪ್ಪುತ್ತದೆ


ವರದಿಯ ಪ್ರಕಾರ, ಕಡಿಮೆ ಬೆಲೆಯ 99 ಸ್ಮಾರ್ಟ್ ಪ್ಲಾನ್‌ನೊಂದಿಗೂ ಕೂಡ ಈ ಉಚಿತ ಡೇಟಾವನ್ನು ನೀಡಲಾಗುತ್ತಿದೆ. ನೀವು ರೂ 99 ರ ರೀಚಾರ್ಜ್ ಯೋಜನೆಯನ್ನು ಸಕ್ರೀಯಗೊಳಿಸಿ, ಮೆಸೇಜ್ ವಿಭಾಗಕ್ಕೆ ಭೇಟಿ ನೀಡಿ, ಸಂದೇಶದ ಕುರಿತು ಖಚಿತಪಡಿಸಿಕೊಳ್ಳಿ. ಒಂದು ವೇಳೆ ನಿಮಗೆ ಈ ಸಂದೇಶ ಬಂದಿದ್ದರೆ, ತಕ್ಷಣವೇ ಅದನ್ನು ಕ್ಲೈಮ್ ಮಾಡಿ.


ಇದನ್ನೂ ಓದಿ-Facebook Messenger Scam 2022: 'ಈ ವಿಡಿಯೋದಲ್ಲಿ ನೀವಿದ್ದೀರಾ?' ಈ ಪ್ರಶ್ನೆಗೆ ಉತ್ತರ ನಿಮ್ಮನ್ನು ಬೀದಿಗೆ ತರಬಹುದು, ಎಚ್ಚರ!


3 ಹೊಸ ಬ್ರಾಡ್ ಬ್ಯಾಂಡ್ ಯೋಜನೆಗಳ ಬಿಡುಗಡೆ
ಇತ್ತೀಚೆಗಷ್ಟೇ ಏರ್‌ಟೆಲ್ ಕಂಪನಿಯು ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್ ಅಡಿಯಲ್ಲಿ 3 ಹೊಸ ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಅವುಗಳ ಬೆಲೆ ರೂ 699, ರೂ 1099 ಮತ್ತು ರೂ 1599 ಆಗಿದೆ. ಈ ಎಲ್ಲಾ ಯೋಜನೆಗಳು 17 OTT ಪ್ಲಾಟ್‌ಫಾರ್ಮ್ ಚಂದಾದಾರಿಕೆಗಳೊಂದಿಗೆ ಬರುತ್ತವೆ. ಇವುಗಳಲ್ಲಿ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು ಡಿಸ್ನಿ + ಹಾಟ್‌ಸ್ಟಾರ್ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಇತ್ಯಾದಿಗಳು ಶಾಮೀಲಾಗಿವೆ. ಈ ಯೋಜನೆಗಳಲ್ಲಿ, ಡೇಟಾವು ಕ್ರಮವಾಗಿ 40Mbps, 200Mbps ಮತ್ತು 300Mbps ವೇಗದಲ್ಲಿರಲಿದೆ.


ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.