ಏರ್‌ಟೆಲ್ ಕೈಗೆಟುಕುವ ಬೆಲೆಯ ಪ್ಲಾನ್, 6 ತಿಂಗಳು ರಿಚಾರ್ಜ್ ಮಾಡೋದೆ ಬೇಡ!
Airtel Affordable Plan: ಜುಲೈ ಮೊದಲ ವಾರದಲ್ಲಿ ಏರ್‌ಟೆಲ್, ಜಿಯೋ, ವೊಡಾಫೋನ್ ಐಡಿಯಾ ಕಂಪನಿಗಳು ರಿಚಾರ್ಜ್ ದರ ಏರಿಕೆ ಮಾಡಿದ್ದರು.
Airtel Affordable Plan: ಏರ್‌ಟೆಲ್, ಜಿಯೋ, ವೊಡಾಫೋನ್ ಐಡಿಯಾ ರಿಚಾರ್ಜ್ ಬೆಲೆಯನ್ನು ಘೋಷಿಸಿದ್ದ ಬೆನ್ನಲ್ಲೇ ಗ್ರಾಹಕರು ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್- ಬಿಎಸ್‌ಎನ್‌ಎಲ್ ನತ್ತ ಮುಖ ಮಾದ ತೊಡಗಿದ್ದರು. ಇದರ ಬೆನ್ನಲ್ಲೇ ಎಚ್ಚೆತ್ತಿರುವ ರಿಲಯನ್ಸ್ ಜಿಯೋ, ಏರ್‌ಟೆಲ್ ಗ್ರಾಹಕರಿಗಾಗಿ ಹೊಸ ಹೊಸ ಆಕರ್ಷಕ ಯೋಜನೆಗಳನ್ನು ಬಿಡುಗಡೆ ಮಾಡುತ್ತಿವೆ. ಇದೀಗ ಈ ಸಾಲಿನಲ್ಲಿ ಏರ್‌ಟೆಲ್ ಕಡಿಮೆ ದರದಲ್ಲಿ ದೀರ್ಘಾವಧಿಯ ಯೋಜನೆಯನ್ನು ಬಿಡುಗಡೆ ಮಾಡಿದೆ.
ಕೈಗೆಟುಕುವ ಬೆಲೆಯ ರಿಚಾರ್ಜ್ ಯೋಜನೆ (Affordable recharge plan):
ವಿಶೇಷವೆಂದರೆ ಏರ್‌ಟೆಲ್ ಬಿಡುಗಡೆ ಮಾಡಿರುವ ಈ ಕೈಗೆಟುಕುವ ಬೆಲೆಯ ರಿಚಾರ್ಜ್ ಯೋಜನೆಯನ್ನು ಒಮ್ಮೆ ರಿಚಾರ್ಜ್ ಮಾಡಿದರೆ ಆರು ತಿಂಗಳವರೆಗೆ ರಿಚಾರ್ಜ್ ಗೊಡವೆಯೇ ಇರುವುದಿಲ್ಲ. ಯಾವುದೀ ಯೋಜನೆ, ಇದರ ಬೆಲೆ ಎಷ್ಟು? ಈ ರಿಚಾರ್ಜ್ ಯೋಜನೆಯ ಪ್ರಯೋಜನಗಳೇನು ಎಂದು ತಿಳಿಯೋಣ...
ಇದನ್ನೂ ಓದಿ- ಗೂಗಲ್‌ನಲ್ಲಿ ಅಪ್ಪಿತಪ್ಪಿಯೂ ಈ 'ಐದು' ವಿಷಯಗಳನ್ನು ಸರ್ಚ್ ಮಾಡಲೇಬೇಡಿ! ಇಲ್ಲವೇ ಜೈಲೂಟ ಫಿಕ್ಸ್!
ಏರ್‌ಟೆಲ್ 180 ದಿನಗಳ ರಿಚಾರ್ಜ್ ಯೋಜನೆ (Airtel 180 days recharge plan):
ಏರ್‌ಟೆಲ್ ಇತ್ತೀಚೆಗೆ 999 ರೂ.ನಲ್ಲಿ 180 ದಿನಗಳ ದೀರ್ಘಾವಧಿಯ ರಿಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದೆ. ಗ್ರಾಹಕರು ಈ ಪ್ಲಾನ್ ಅನ್ನು ಒಮ್ಮೆ ಆಕ್ಟಿವ್ ಮಾಡಿದರೆ ಆರು ತಿಂಗಳವರೆಗೆ ರಿಚಾರ್ಜ್ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆಯೇ ಇರುವುದಿಲ್ಲ.
ಏರ್‌ಟೆಲ್ ದೀರ್ಘಾವಧಿ ಯೋಜನೆ ಪ್ರಯೋಜನಗಳು (Airtel Long Term Plan Benefits):
ಏರ್‌ಟೆಲ್ ನ 999ರೂ. ರಿಚಾರ್ಜ್ ಯೋಜನೆಯಲ್ಲಿ ಗ್ರಾಹಕರಿಗೆ ಅನಿಯಮಿತ ಕರೆಗಳು, ಉಚಿತ ಎಸ್ಎಮ್‌ಎಸ್ ಜೊತೆಗೆ ಅನ್‌ಲಿಮಿಟೆಡ್ ಡೇಟಾಬ್ಯಾಕ್ ಸೌಲಭ್ಯವನ್ನೂ ಸಹ ನೀಡಲಾಗುತ್ತದೆ.
ಇದನ್ನೂ ಓದಿ- ಬಂದ್ ಆಗುತ್ತಾ ಅನ್ಲಿಮಿಟೆಡ್ ಕಾಲ್, ಡೇಟಾ ಪ್ಲಾನ್ಸ್: ಜಿಯೋ, ಏರ್‌ಟೆಲ್, ವಿಐ ಗ್ರಾಹಕರಿಗೆ ಹೆಚ್ಚಾಯ್ತು ಟೆನ್ಷನ್
ಏರ್‌ಟೆಲ್ ತಿಂಗಳ ಯೋಜನೆ:
ಒಂದೊಮ್ಮೆ ನೀವು ಈ ದೀರ್ಘಾವಧಿಯ ಯೋಜನೆಯನ್ನು ಪಡೆಯಲು ಸಾಧ್ಯವಾಗದಿದ್ದರೆ ಏರ್‌ಟೆಲ್ 155 ರೂ. ರಿಚಾರ್ಜ್ ಯೋಜನೆಯನ್ನು ಕೂಡ ಪರಿಚಯಿಸಿದೆ. 28 ದಿನಗಳ ಮಾನ್ಯತೆಯೊಂದಿಗೆ ಬರುವ ಈ ಯೋಜನೆಯಲ್ಲಿ ಗ್ರಾಕರಿಗೆ ಅನಿಯಮಿತ ಕರೆ ಜೊತೆಗೆ ನಿತ್ಯ 100 ಎಸ್‌ಎಮ್‌ಎಸ್ ಸೀಮಿತ ಡೇಟಾ ಸೌಲಭ್ಯವನ್ನು ಒದಗಿಸಲಾಗುತ್ತದೆ.
ಏರ್‌ಟೆಲ್ ರಿಚಾರ್ಜ್ ಸಂಬಂಧಿತ ಹೆಚ್ಚಿನ ಮಾಹಿತಿಗಾಗಿ ನೀವು ಏರ್‌ಟೆಲ್ ಥ್ಯಾಂಕ್ಸ್ ಆಪ್‌ಗೆ ಭೇಟಿ ನೀಡಿ ಪರಿಶೀಲಿಸಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.