Airtel Surveillance Solutions Business: ಇನ್ಮುಂದೆ ಏರ್‌ಟೆಲ್ ನಮ್ಮ ಮನೆ ರಕ್ಷಣೆ ಮಾಡಲಿದೆ. ಹೌದು, ಕಂಪನಿಯು ಹೊಸ ವ್ಯವಹಾರಕ್ಕೆ ಕಾಲಿಡುತ್ತಿದೆ. ಏರ್‌ಟೆಲ್ ಹೊಸ ಉಪ-ಬ್ರಾಂಡ್ ಅನ್ನು ಪ್ರಾರಂಭಿಸುವ ಮೂಲಕ ಮನೆಯ ಕಣ್ಗಾವಲು ಪರಿಹಾರಗಳ ವ್ಯವಹಾರವನ್ನು (Airtel New Service) ಪ್ರವೇಶಿಸಲು ಸಿದ್ಧವಾಗಿದೆ. ಮೂಲಗಳ ಪ್ರಕಾರ, ಕಂಪನಿಯು ದೆಹಲಿ-ಎನ್‌ಸಿಆರ್‌ನಲ್ಲಿ ಎಕ್ಸ್-ಸೇಫ್ ಬ್ರಾಂಡ್‌ನ ಅಡಿಯಲ್ಲಿ ಸ್ಮಾರ್ಟ್ ಮನೆಗಳಿಗಾಗಿ ಹೊಸ ಕಣ್ಗಾವಲು ಸೇವೆಯ ಪ್ರಾಯೋಗಿಕ ಪರೀಕ್ಷೆ ಪ್ರಾರಂಭಿಸಿದೆ. ಪೈಲಟ್ ಆಗಿ, ಪ್ರಸ್ತುತ ರಾಜಧಾನಿಯಲ್ಲಿ ಕೆಲವೇ ಏರ್‌ಟೆಲ್ (Airtel) ಎಕ್ಸ್‌ಸ್ಟ್ರೀಮ್ ಫೈಬರ್ ಬ್ರಾಡ್‌ಬ್ಯಾಂಡ್ ಗ್ರಾಹಕರಿಗೆ ಮಾತ್ರ ಈ ಸೌಲಭ್ಯ ಒದಗಿಸಲಾಗಿದೆ. ತಿಂಗಳಿಗೆ 99 ರೂಪಾಯಿ ಪಾವತಿಸಿ ಗ್ರಾಹಕರು ಈ ಸೇವೆಯನ್ನು ಪಡೆಯಬಹುದು. ಗ್ರಾಹಕರು ರೂ 999 ರ ವಾರ್ಷಿಕ ಚಂದಾದಾರಿಕೆಯ ಆಯ್ಕೆಯನ್ನು ಸಹ ಪರಿಗಣಿಸಬಹುದು.


COMMERCIAL BREAK
SCROLL TO CONTINUE READING

ಇದನ್ನೂ ಓದಿ-ಎಲೆಕ್ಟ್ರಿಕ್ ವಾಹನಗಳ ಅನುಕೂಲತೆಗಳು ನಿಮಗೆ ಗೊತ್ತಾ ?


ಜಬರ್ದಸ್ತ್ ಕ್ಯಾಮರಾಗಳನ್ನು ತರುತ್ತಿದೆ ಕಂಪನಿ (Airtel Update)
X-ಸೇಫ್ ಸೊಲ್ಯೂಷನ್ಸ್  H.265 ಕಂಪ್ರೆಷನ್, 360-ಡಿಗ್ರಿ ವೀಕ್ಷಣೆ, ಕಲರ್ ನೈಟ್ ವಿಶನ್, IP67 ರೇಟಿಂಗ್, ಪ್ರೈವೆಸಿ  ಶಟರ್ ಮತ್ತು ಹ್ಯೂಮನ್ ಡಿಟೆಕ್ಟನ್ ನಂತಹ ಸುಧಾರಿತ ವೈಶಿಷ್ಟ್ಯಗಳೊಂದಿಗೆ ಒಳಾಂಗಣ ಮತ್ತು ಹೊರಾಂಗಣ ಭದ್ರತಾ HD ಕ್ಯಾಮೆರಾಗಳನ್ನು ಬಿಡುಗಡೆ ಮಾಡಲಿದೆ. ಇದಕ್ಕೂ ಹೆಚ್ಚುವರಿಯಾಗಿ, ಈ ಸೇವೆಯು FTTH ಬ್ರಾಡ್‌ಬ್ಯಾಂಡ್ ಸಂಪರ್ಕ ಮತ್ತು ಟೆಲ್ಕೊ ದರ್ಜೆಯ ಕ್ಲೌಡ್ ಸಂಗ್ರಹಣೆಯನ್ನು ಒಳಗೊಂಡಿದೆ. ಇದು ಏರ್‌ಟೆಲ್‌ನಿಂದ ಈ ರೀತಿಯ ಚಂದಾದಾರಿಕೆ ಆಧಾರಿತ ಕಣ್ಗಾವಲು ಪರಿಹಾರವಾಗಿದೆ, ಇದು ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ನಿಂದ ಯಾವುದೇ ಸಮಯದಲ್ಲಿ ಒಳಾಂಗಣ ಮತ್ತು ಹೊರಾಂಗಣ ಎರಡರ ಕಣ್ಗಾವಲು ಮಾಡಲು ಅನುವು ಮಾಡಿಕೊಡಲಿದೆ. 


ಇದನ್ನೂ ಓದಿ-Reliance Jio: ಜಿಯೋದ ಈ ಅಗ್ಗದ ಯೋಜನೆಯಲ್ಲಿ ನಿತ್ಯ 3GB ಡೇಟಾ, ಡಿಸ್ನಿ + ಹಾಟ್‌ಸ್ಟಾರ್ ಜೊತೆಗೆ ಸಿಗುತ್ತೆ ಇನ್ನೂ ಹಲವು ಲಾಭ


ಕ್ಲೌಡ್ ಸ್ಟೋರೇಜ್ ನಲ್ಲಿ ಸಂಗ್ರಹಣೆಯಾಗಲಿದೆ ಫೂಟೇಜ್
ಮೂಲಗಳು ನೀಡಿರುವ ಮಾಹಿತಿ ಪ್ರಕಾರಸ್ಮಾರ್ಟ್ ಕ್ಯಾಮೆರಾಗಳಿಗಾಗಿ ಗ್ರಾಹಕರು ಒಂದು-ಬಾರಿ ವೆಚ್ಚವನ್ನು ಭರಿಸಬೇಕಾಗುತ್ತದೆ. ಮಾಸಿಕ ಅಥವಾ ವಾರ್ಷಿಕ ಚಂದಾದಾರಿಕೆಗಳು ಕಂಪನಿಯ ಕ್ಲೌಡ್ ಸ್ಟೋರೇಜ್ ಸೇವೆಗೆ ಪ್ರವೇಶವನ್ನು ಒಳಗೊಂಡಿರುತ್ತದೆ, ಅಲ್ಲಿ ವೀಡಿಯೊಗಳನ್ನು ಸಂಗ್ರಹಿಸಲಾಗುತ್ತದೆ. ಗ್ರಾಹಕರು ಆಯ್ಕೆ ಮಾಡಲು ಕಂಪನಿಯು ಪ್ರಸ್ತುತ ಮೂರು ಕ್ಯಾಮೆರಾ ಆಯ್ಕೆಗಳನ್ನು ನೀಡುತ್ತಿದೆ ಎಂದು ಮೂಲಗಳು ಬಹಿರಂಗಪಡಿಸಿವೆ. ಸ್ಮಾರ್ಟ್ ಹೋಮ್ ಗ್ಯಾಜೆಟ್‌ಗಳು ನಿಧಾನವಾಗಿ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವ ಕಂಡುಕೊಳ್ಳುತ್ತಿವೆ ಮತ್ತು ಜನಪ್ರಿಯ ಸೇವಾ ಪೂರೈಕೆದಾರರ ಈ ರೀತಿಯ ಪರಿಹಾರಗಳಿಂದ ಈ ಸೆಗ್ಮೆಂಟ್ ನಲ್ಲಿ ಸಾಕಷ್ಟು ಪ್ರೋತ್ಸಾಹನ ಸಿಗುವ ನಿರೀಕ್ಷೆ ಇದೆ.


ಇದನ್ನೂ ಓದಿ-Jio ಗ್ರಾಹಕರಿಗೆ ಹೊಸ ರಿಚಾರ್ಜ್ ಪ್ಲಾನ್ : ಪ್ರತಿದಿನ 2GB ಡೇಟಾ ಜೊತೆಗೆ Disney+Hotstar ಉಚಿತ! 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.