ಬೆಂಗಳೂರು : AKAI ಭಾರತದಲ್ಲಿ ತನ್ನ WebOS ಸ್ಮಾರ್ಟ್ ಟಿವಿಯನ್ನು ಬಿಡುಗಡೆ ಮಾಡಿದೆ. ಹೊಸ ಟಿವಿಗಳನ್ನು  (32 -ಇಂಚು, 43-ಇಂಚು, 50-ಇಂಚು ಮತ್ತು 55-ಇಂಚು ನಾಲ್ಕು ಸೈಜ್ ನಲ್ಲಿ ಬಿಡುಗಡೆ ಮಾಡಿದೆ.  ಹೊಸ AKAI HD 4K ರೆಸಲ್ಯೂಶನ್ ಅನ್ನು ಹೊಂದಿದೆ. ಟಿವಿಗಳು webOS ಆರ್ಕಿಟೆಕ್ಚರ್‌ನಲ್ಲಿ ಮ್ಯಾಜಿಕ್ ರಿಮೋಟ್ ಮತ್ತು ThinQAI ತಂತ್ರಜ್ಞಾನದ ಮೂಲಕ ಸರಳೀಕೃತ ಕಾರ್ಯಾಚರಣೆಯೊಂದಿಗೆ ಕಾರ್ಯನಿರ್ವಹಿಸುತ್ತವೆ. ಅಮೆಜಾನ್ ಫೈರ್ ಟಿವಿ ಎಡಿಶನ್ ಸ್ಮಾರ್ಟ್ ಟಿವಿ ಬಿಡುಗಡೆಯಾದ ನಂತರ ಭಾರತದಲ್ಲಿ ಹೊಸ AKAI ಸ್ಮಾರ್ಟ್ ಟಿವಿಯನ್ನು ಬಿಡುಗಡೆ ಮಾಡಲಾಗಿದೆ. 


COMMERCIAL BREAK
SCROLL TO CONTINUE READING

Akai WebOS ಸ್ಮಾರ್ಟ್ ಟಿವಿ ವಿನ್ಯಾಸ :
WebOS ಸಿಸ್ಟಮ್ ನೇರವಾದ ಬಳಕೆದಾರ ಇಂಟರ್ಫೇಸ್ನೊಂದಿಗೆ ವಿವಿಧ ವೀಕ್ಷಣೆ ಆಯ್ಕೆಗಳನ್ನು ಹೊಂದಿದೆ. ಆಗಾಗ ಬಳಸುವ ಅಪ್ಲಿಕೇಶನ್‌ಗಳು ಮತ್ತು  ಹಿಸ್ಟರಿ ಆಧಾರಿತ ವಿಷಯ ಹುಡುಕಾಟ ಕಾರ್ಯಗಳಿಗೆ ತ್ವರಿತ  ಅಕ್ಸೆಸ್ ಒದಗಿಸುತ್ತದೆ. ಅಮೆಜಾನ್‌ನ ಅಲೆಕ್ಸಾ ವಾಯ್ಸ್ ಫಂಕ್ಷನಾಲಿಟಿ ಹೊಂದಿರುವ ಮ್ಯಾಜಿಕ್ ರಿಮೋಟ್ ಸ್ಮಾರ್ಟ್ ಟಿವಿಯನ್ನು ನಿರ್ವಹಿಸುವುದನ್ನು ಸುಲಭಗೊಳಿಸುತ್ತದೆ. ರಿಮೋಟ್ ನಯವಾದ ಮತ್ತು ಆರಾಮದಾಯಕ ಸ್ಕ್ರೋಲಿಂಗ್, ಹಾಟ್‌ಕೀಗಳು ಮತ್ತು ಶಾರ್ಟ್‌ಕಟ್ ಬಟನ್‌ಗಳಿಗಾಗಿ ಕ್ಲಿಕ್  ವ್ಹೀಲ್ ಅನ್ನು ಹೊಂದಿದೆ.


ಇದನ್ನೂ ಓದಿ : 200MP ಕ್ಯಾಮೆರಾದೊಂದಿಗೆ ಶೀಘ್ರದಲ್ಲೇ ಬಿಡುಗಡೆ ಆಗಲಿದೆ ರೆಡ್‌ಮಿಯ ಹೊಸ ಸ್ಮಾರ್ಟ್‌ಫೋನ್


Akai WebOS ಸ್ಮಾರ್ಟ್ ಟಿವಿ ವಿಶೇಷಣಗಳು :
Akai WebOS ಸ್ಮಾರ್ಟ್ ಟಿವಿಗಳು  ಬೇಜೆಲ್ ಲೆಸ್ ಡಿಸೈನ್ ನೊಂದಿಗೆ ಬರುತ್ತದೆ.  ಆದರೆ ವೀಕ್ಷಣೆಗೆ ಪ್ರೀಮಿಯಂ ಅನುಭವವನ್ನು ನೀಡುತ್ತವೆ.  ಇದರ  ಇತರ ವೈಶಿಷ್ಟ್ಯಗಳೆಂದರೆ HDR 10, HLG, Dolby Audio, ಟು-ವೇ ಬ್ಲೂಟೂತ್ 5.0 ಮತ್ತು Wi-Fi ಬೆಂಬಲ. ಹೊಸ ತಂಡವು MEMC, 6K ಅಪ್‌ಸ್ಕೇಲಿಂಗ್, ಸ್ಕ್ರೀನ್ ಮಿರರಿಂಗ್, ALM ಮತ್ತು ಪ್ರೀಮಿಯಂ ಸ್ಟ್ರೀಮಿಂಗ್ ಗೆ ಅಕ್ಸೆಸ್ ನೀಡುತ್ತದೆ.  Akai WebOS ಸ್ಮಾರ್ಟ್ ಟಿವಿಯ RAM/ROM ಕಾನ್ಫಿಗರೇಶನ್ 1.5GB/8GB ಆಗಿದೆ. ಟಿವಿಯಲ್ಲಿ Netflix, Apple TV, Sony Liv ಮತ್ತು ಹೆಚ್ಚಿನದನ್ನು ಆನಂದಿಸಬಹುದು.


ಭಾರತದಲ್ಲಿ Akai WebOS ಸ್ಮಾರ್ಟ್ ಟಿವಿ ಬೆಲೆ :
ಶ್ರೇಣಿಯಲ್ಲಿನ ಉನ್ನತ ಮಾದರಿ, AKAI 55-ಇಂಚಿನ webOS 4K TVಯ ಬೆಲೆ 39,990  ರೂಪಾಯಿ. ಹೊಸ ಶ್ರೇಣಿಯ ಸ್ಮಾರ್ಟ್ ಟಿವಿಗಳಿಗೆ ಭಾರತದಲ್ಲಿ ಉತ್ತಮ ಮಾರುಕಟ್ಟೆಯನ್ನು ಕಂಪನಿ ನಿರೀಕ್ಷಿಸುತ್ತಿದೆ. 


ಇದನ್ನೂ ಓದಿ : ನಿಮ್ಮ ವಾಟ್ಸಾಪ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆಯೇ? ಈ ರೀತಿ ತಿಳಿಯಿರಿ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.