ಎಚ್ಚರ! ಕಂಪ್ಯೂಟರ್ ಕೀಬೋರ್ಡ್ ಸದ್ದು ಕೇಳಿ ಪಾಸ್ವರ್ಡ್ ಪತ್ತೆಹಚ್ಚಿದ ಹ್ಯಾಕರ್! ಹೇಗೆ ಸಾಧ್ಯ ಅಂತೀರಾ?
Digital Fraud: ಕಳ್ಳತನಕ್ಕೆ ಹ್ಯಾಕರ್‌ಗಳು ದಿನನಿತ್ಯ ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಒಂದು ಹಗರಣವನ್ನು ಕೀಬೋರ್ಡ್ ಟೈಪಿಂಗ್ ಸ್ಕ್ಯಾಮ್‌ಗೆ ಲಿಂಕ್ ಮಾಡಲಾಗಿದೆ. ಈ ಹಗರಣ ಎಷ್ಟು ಅಪಾಯಕಾರಿ ಎಂಬುದು ತಿಳಿದುಕೊಳ್ಳೋಣ ಬನ್ನಿ (Technology News In Kannada),
ಬೆಂಗಳೂರು: ಹ್ಯಾಕರ್‌ಗಳ ದಾಳಿಯನ್ನು ತಪ್ಪಿಸಲು ನೀವೂ ಕೂಡ ಹಲವಾರು ಕ್ರಮಗಳನ್ನು ತೆಗೆದುಕೊಂಡಿರಬಹುದು. ಇದಕ್ಕಾಗಿ ಫೋನ್‌ನಲ್ಲಿನ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಬಲವಾಗಿರಿಸಿರಬೇಕು. ಬ್ಯಾಂಕಿಂಗ್ ವಿವರಗಳನ್ನು ಮರೆಮಾಚಿರಬಹುದು. ನೀವು ಗೌಪ್ಯತೆಯ ಎಲ್ಲಾ ಹಂತಗಳನ್ನು ಅನ್ವಯಿಸಿರಬಹುದು (Technology News In Kannada). ಆದರೆ ಅಷ್ಟಾಗಿಯೂ ಕೂಡ ನಿಮ್ಮ ಫೋನ್ ಅನ್ನು ಪ್ರವೇಶಿಸಲು ಹ್ಯಾಕರ್‌ಗಳು ಯಶಸ್ವಿಯಾಗುತ್ತಿದ್ದಾರೆ. ಕಳ್ಳತನಕ್ಕೆ ಹ್ಯಾಕರ್‌ಗಳು ಖಂಡಿತವಾಗಿಯೂ ಹೊಸ ಮಾರ್ಗವನ್ನು ಕಂಡುಕೊಂಡಿರಬಹುದು. ಇತ್ತೀಚೆಗೆ ಅಂತಹುದೇ ಒಂದು ಹಗರಣವನ್ನು ಕೀಬೋರ್ಡ್ ಟೈಪಿಂಗ್ ಸ್ಕ್ಯಾಮ್‌ಗೆ ಲಿಂಕ್ ಮಾಡಲಾಗಿದೆ. ನೀವು ಟೈಪ್ ಮಾಡುವಾಗ ಬರುವ ಸದ್ದನ್ನು ಗುರಿಯಾಗಿಸಿ ಸ್ಕ್ಯಾಮರ್‌ಗಳು ಸಿಸ್ಟಮ್ ಅನ್ನು ಹ್ಯಾಕ್ ಮಾಡುತ್ತಿದ್ದಾರೆ. ಈ ಹಗರಣ ಎಷ್ಟು ಅಪಾಯಕಾರಿ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಸಿಸ್ಟಮ್/ಲ್ಯಾಪ್‌ಟಾಪ್‌ನಲ್ಲಿ ಸಂಗ್ರಹಿಸಿಟ್ಟ ತಮ್ಮ ವೈಯಕ್ತಿಕ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಲು ಪ್ರತಿಯೊಬ್ಬರೂ ಬಯಸುವುದಿಲ್ಲ. ಇದೇ ಕಾರಣದಿಂದ ಜನರು ತಮ್ಮ ಸಿಸ್ಟಮ್ / ಲ್ಯಾಪ್ಟಾಪ್ನಲ್ಲಿ ಪಾಸ್ವರ್ಡ್ ಅನ್ನು ಇರಿಸುತ್ತಾರೆ. ಆದರೆ ಧ್ವನಿಯ ಬಗ್ಗೆ ಏನು? ವಿಶೇಷ ತಂತ್ರಜ್ಞಾನವನ್ನು ಬಳಸಿಕೊಂಡು ಕೀಬೋರ್ಡ್‌ನ ಧ್ವನಿಯೊಂದಿಗೆ ಹ್ಯಾಕರ್‌ಗಳು ನಿಮ್ಮ ಪಾಸ್‌ವರ್ಡ್ ಅನ್ನು ಭೇದಿಸಬಹುದು ಎಂದು ZDnet ವರದಿ ಬಹಿರಂಗಪಡಿಸಿದೆ.
ಹ್ಯಾಕ್ ಮಾಡಲು ಕಂಡುಕೊಂಡ ಆ ಹೊಸ ಮಾರ್ಗ ಯಾವುದು?
ಸಿಸ್ಟಮ್, ಫೋನ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ನಾವು ಪಾಸ್‌ವರ್ಡ್ ಅನ್ನು ಟೈಪ್ ಮಾಡಿದಾಗ, ನಮ್ಮ ಪಾಸ್‌ವರ್ಡ್ ಅನ್ನು ಯಾರೂ ನೋಡುತ್ತಿಲ್ಲವಲ್ಲ ಎಂಬ ಆತಂಕದ ಹಿನ್ನೆಲೆ ನಾವು ಅತ್ತಿತ್ತ ನೋಡುತ್ತೇವೆ. ಇದರಿಂದ ನಾವು ಪಾಸ್‌ವರ್ಡ್ ಅನ್ನು ಮರೆಮಾಡಿದ್ದೇವೆ ಎಂದು ನಮಗನಿಸುತ್ತದೆ, ಆದರೆ, ನೀವು ಪಾಸ್‌ವರ್ಡ್ ಆಲಿಸುವ ಅಂಶದ ಮೇಲೆ ಎಂದಾದರೂ ಗಮನ ಹಾರಿಸಿದ್ದೀರಾ? ಇಲ್ಲವಲ್ಲ. ಹಾಗಾದರೆ ಕೇಳಿ, ಈ ಹ್ಯಾಕಿಂಗ್ ವಿಧಾನವನ್ನು ಅಕೌಸ್ಟಿಕ್ ಸೈಡ್-ಚಾನೆಲ್ ಅಟ್ಯಾಕ್ ಎಂದು ಕರೆಯಲಾಗುತ್ತದೆ. ಅಂತೆಯೇ, ಈ ಪಾಸ್‌ವರ್ಡ್ ಹ್ಯಾಕಿಂಗ್‌ನಲ್ಲಿ, ನಿಮ್ಮ ಕೀಬೋರ್ಡ್‌ನಿಂದ ಹೊರಬರುವ ಧ್ವನಿಯ ಮೇಲೆ ಹ್ಯಾಕರ್ ಗಳು ತಮ್ಮ ಗಮನ ಕೇಂದ್ರೀಕರಿಸುತ್ತಾರೆ.
ಒಬ್ಬರು ಧ್ವನಿಯನ್ನು ಹೇಗೆ ವಿಶ್ಲೇಷಿಸುತ್ತಾರೆ
ಧ್ವನಿಯನ್ನು ವಿಶ್ಲೇಷಿಸುವ ಮೂಲಕ ಹ್ಯಾಕರ್‌ಗಳು ನಿಮ್ಮ ಸಿಸ್ಟಮ್‌ನ ಪಾಸ್‌ವರ್ಡ್ ಅನ್ನು ಭೇದಿಸುತ್ತಾರೆ. ಇದಕ್ಕಾಗಿ, ಅವರು ಸುಧಾರಿತ ಸಾಧನವನ್ನು ಬಳಸುತ್ತಾರೆ, ಇದು ನೀವು ಟೈಪ್ ಮಾಡಿದ ಅಕ್ಷರಗಳು ಮತ್ತು ಸಂಖ್ಯೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ವಂಚಕರು ಆರಂಭಿಸಿರುವ ಈ ವಂಚನೆ ಎಷ್ಟು ಅಪಾಯಕಾರಿ ಎಂಬುದನ್ನು ತಜ್ಞರ ತಂಡ ಪ್ರಯೋಗಿಸಿದ್ದಾರೆ. ಈ ಪ್ರಯೋಗಕ್ಕೆ ಅವರು MacBook Pro 16 Inch ಅನ್ನು ಬಳಸಿದ್ದಾರೆ, ಇದು ಅತ್ಯಂತ ಪ್ರಬಲ ಲ್ಯಾಪ್‌ಟಾಪ್ ಆಗಿದೆ. ಇದರೊಂದಿಗೆ, ಅವರು ಐಫೋನ್ 13 ಮಿನಿಯನ್ನು ಮ್ಯಾಕ್‌ನಿಂದ ಸ್ವಲ್ಪ ದೂರದಲ್ಲಿ ಮೃದುವಾದ ಬಟ್ಟೆಯ ಮೇಲೆ ಇರಿಸಿದ್ದರು, ಅದು ಧ್ವನಿಯನ್ನು ಸೆರೆಹಿಡಿಯಬಹುದು.
ಇದಲ್ಲದೆ, ಅವರು ಲ್ಯಾಪ್ಟಾಪ್ನಲ್ಲಿ ರೆಕಾರ್ಡಿಂಗ್ ಕಾರ್ಯವನ್ನು ಆನ್ ಮಾಡಿದ್ದಾರೆ. ಇದರ ನಂತರ, AI ಆಧಾರಿತ ಸ್ಮಾರ್ಟ್ ಕಂಪ್ಯೂಟರ್ ಪ್ರೋಗ್ರಾಂ ಅನ್ನು ಕಲಿಸಲು ಈ ಎಲ್ಲಾ ಡೇಟಾವನ್ನು ಬಳಸಲಾಗಿದೆ, ಅದರ ಕೆಲಸವು ಟೈಪಿಂಗ್ ಧ್ವನಿಯನ್ನು ಗಮನಿಸುವುದ್ದಾಗಿತ್ತು.
ಇದನ್ನೂ ಓದಿ-ಹೆಚ್ಚುವರಿ ವಿದ್ಯುತ್ ಯೂನಿಟ್ ಗಳ ಬಳಕೆಯ ಕಾರಣದಿಂದ ಗೃಹ ಜ್ಯೋತಿ ಯೋಜನೆಯಿಂದ ವಂಚಿತರಾಗಿದ್ದೀರಾ? ಇಲ್ಲಿವೆ ಟಿಪ್ಸ್!
ಈ ವಿಧಾನವು 95% ಕಾರ್ಯನಿರ್ವಹಿಸುತ್ತದೆ
ತರಬೇತಿ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ ನಂತರ, AI ಪ್ರೋಗ್ರಾಂ ಅನ್ನು ಪರೀಕ್ಷಿಸಲಾಗಿದೆ. ನೀವು ಒತ್ತಿದ ಪ್ರತಿ ಬಟನ್‌ನ ಧ್ವನಿಯ ಮೂಲಕ AI ನೀವು ಏನನ್ನು ಒತ್ತಿರುವಿರಿ ಎಂಬುದನ್ನೂ ಪತ್ತೆಹಚ್ಚಿದ್ದು, ಈ ವಿಧಾನವು ಶೇ.95ರಷ್ಟು ಪರಿಪೂರ್ಣವಾಗಿದೆ ಎಂದು ವರದಿಯಲ್ಲಿ ಬಹಿರಂಗವಾಗಿದೆ.
ಇದನ್ನೂ ಓದಿ-ಹತ್ತು ವರ್ಷಗಳ ವಾರಂಟಿ ಹೊಂದಿರುವ ಹೊಸ ಅಗ್ಗದ ಬೈಕ್ ಬಿಡುಗಡೆ ಮಾಡಿದ ಹೋಂಡಾ
ಬಚಾವಾಗುವುದು ಹೇಗೆ?
ನೀವು ಸುಲಭವಾಗಿ ವಂಚಕರನ್ನು ಮೋಸಗೊಳಿಸಬಹುದು. ಇದಕ್ಕಾಗಿ ನಿಮ್ಮ ಟೈಪಿಂಗ್ ನಲ್ಲಿ ಸ್ವಲ್ಪ ಬದಲಾವಣೆ ತರಬೇಕು. ಅಲ್ಲದೆ, ನೀವು ಶಿಫ್ಟ್ ಬಳಸಿ ಟೈಪಿಂಗ್ ಮಾಡಬಹುದು. ಇದು ರಕ್ಷಣೆಯ ಹೆಚ್ಚುವರಿ ಪದರವನ್ನು ನೀಡುತ್ತದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.