Free Netflix Amazon Prime : ಬಹುತೇಕ  ಮಂದಿ  ನೆಟ್‌ಫ್ಲಿಕ್ಸ್ ಅಥವಾ ಅಮೆಜಾನ್ ಪ್ರೈಮ್‌ ಚಂದಾದಾರಿಕೆ ಹೊಂದಿರುತ್ತಾರೆ.  ಈ ಪ್ಲಾಟ್ಫಾರ್ಮ್ ಗಳಲ್ಲಿ ಇತ್ತೀಚಿನ ಚಲನಚಿತ್ರಗಳು, ಟಿವಿ ಶೋಗಳು ಮತ್ತು  ವೆಬ್ ಸಿರೀಸ್ ಗಳನ್ನು ವೀಕ್ಷಿಸುವುದು ಸಾಧ್ಯವಾಗುತ್ತದೆ. ಈ ಪ್ಲಾಟ್‌ಫಾರ್ಮ್‌ಗಳಲ್ಲಿ ಯಾವುದೇ ಭಾಷೆಯ ಇತಿ ಮಿತಿ ಇರುವುದಿಲ್ಲ.  ಅಂದರೆ ಯಾವುದೇ ಭಾಷೆಯ ಚಲನಚಿತ್ರಗಳನ್ನು ಇಲ್ಲಿ ವೀಕ್ಷಿಸಬಹುದು. ಆದರೆ ಈ ಚಂದಾದಾರಿಕೆಯನ್ನು ಖರೀದಿಸುವುದು ಕೆಲವೊಮ್ಮೆ  ದುಬಾರಿಯಾಗಿ ಪರಿಣಮಿಸಬಹುದು. ಆದರೆ ಈಗ  ಎರಡೂ ಪ್ರಮುಖ OTT ಪ್ಲಾಟ್‌ಫಾರ್ಮ್‌ಗಳ ಚಂದಾದಾರಿಕೆಯನ್ನು ಹಲವು ವರ್ಷಗಳವರೆಗೆ  ಉಚಿತವಾಗಿ  ಪಡೆಯಬಹುದು. 


COMMERCIAL BREAK
SCROLL TO CONTINUE READING

ಎಲ್ಲಾ ಟಾಪ್ OTT ಪ್ಲಾಟ್‌ಫಾರ್ಮ್‌ಗಳು ಲಭ್ಯ : 
ವಾಸ್ತವವಾಗಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಪಿಕಾಶೋ ಹೆಸರಿನ ಅಪ್ಲಿಕೇಶನ್ ಇದೆ. ಈ ಅಪ್ಲಿಕೇಶನ್‌ನಲ್ಲಿ ನೀವು ಉಚಿತವಾಗಿ ಚಲನಚಿತ್ರಗಳನ್ನು ವೀಕ್ಷಿಸುವ ಅವಕಾಶವಿದೆ. ನೆಟ್‌ಫ್ಲಿಕ್ಸ್ ಮಾತ್ರವಲ್ಲದೆ ಅಮೆಜಾನ್ ಪ್ರೈಮ್ ಸೇರಿದಂತೆ ಎಲ್ಲಾ ಟಾಪ್ OTT ಪ್ಲಾಟ್‌ಫಾರ್ಮ್‌ಗಳು, ಎಲ್ಲಾ ಚಲನಚಿತ್ರಗಳು ಈ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯ. ಆದರೆ ಈ ಪ್ಲಾಟ್‌ಫಾರ್ಮ್‌ನಲ್ಲಿ ಚಲನಚಿತ್ರಗಳನ್ನು ವೀಕ್ಷಿಸಲು, ದೀರ್ಘ ಜಾಹೀರಾತುಗಳನ್ನು ಹಲವು ಬಾರಿ ವೀಕ್ಷಿಸಬೇಕಾಗುತ್ತದೆ. 


ಇದನ್ನೂ ಓದಿ : ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡರೆ ಪೊಲೀಸರು ನಿಮ್ಮ ವಾಹನ ತಡೆಯುವುದೇ ಇಲ್ಲ .!


 ಈ ವಿಚಾರಗಳನ್ನು ತಿಳಿದುಕೊಳ್ಳುವುದು ಕೂಡಾ ಮುಖ್ಯ : 
ನೀವು ಈ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುತ್ತಿದ್ದರೆ ಬಹಳ ಜಾಗರೂಕರಾಗಿರಬೇಕು. ಏಕೆಂದರೆ ಈ ಅಪ್ಲಿಕೇಶನ್‌ಗಳನ್ನು ನಂಬುವುದು ಸ್ವಲ್ಪ ಕಷ್ಟವಾಗಿರುವುದರಿಂದ ಈ ಅಪ್ಲಿಕೇಶನ್‌ಗಳ ಬಗ್ಗೆ ಜಾಗರೂಕರಾಗಿರುವಂತೆ ಬಳಕೆದಾರರಿಗೆ ಸೂಚನೆ ನೀಡಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಖಾತೆ ವಿವರಗಳು ಇರುವ ಸ್ಮಾರ್ಟ್‌ಫೋನ್‌ನಲ್ಲಿ ಈ ಅಪ್ಲಿಕೇಶನ್ ಅನ್ನು ರನ್ ಮಾಡಬೇಕಾಗಿಲ್ಲ. ಹೀಗೆ ಮಾಡುವುದರಿಂದ  ನಿಮ್ಮನ್ನು ನೀವು ಸುರಕ್ಷಿತವಾಗಿರಿಸಿಕೊಳ್ಳಬಹುದು.


ಇದನ್ನೂ ಓದಿ : ಕಡಿಮೆ ಬೆಲೆಯ ಬ್ರಾಡ್‌ಬ್ಯಾಂಡ್ ಯೋಜನೆ ಪರಿಚಯಿಸಿದ ಬಿಎಸ್ಎನ್ಎಲ್


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.