Amazon ಪ್ರೈಮ್ ಡೇ ಸೇಲ್ 2023: ಪ್ರೈಮ್ ಡೇ ಸೇಲ್ ಅನ್ನು ಇ-ಕಾಮರ್ಸ್ ವೆಬ್‌ಸೈಟ್ ಅಮೆಜಾನ್‌ನಲ್ಲಿ ಜುಲೈ 15 ಮತ್ತು 16 ರಂದು ಆಯೋಜಿಸಲಾಗುತ್ತಿದೆ. ಈ ಸೆಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು, ಗೃಹೋಪಯೋಗಿ ವಸ್ತುಗಳು, ಧರಿಸಬಹುದಾದ ವಸ್ತುಗಳು ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಉತ್ತಮ ಕೊಡುಗೆಗಳು ಲಭ್ಯವಿರುತ್ತವೆ. ಹಬ್ಬದ ಋತುವಿನ ಆರಂಭದ ಮೊದಲು ನಡೆಯಲಿರುವ ಈ ಸೆಲ್‌ನಲ್ಲಿ, ಕಂಪನಿಯು ಹೊಸದಾಗಿ ಬಿಡುಗಡೆಯಾದ ಸ್ಮಾರ್ಟ್‌ಫೋನ್‌ಗಳು ಮತ್ತು ಕಳೆದ ವರ್ಷ ಬಂದ OnePlus ನ ಸಾಧನಗಳ ಮೇಲೆ ಅದ್ಭುತ ಕೋಡುಗಗಳನ್ನು ನೀಡಲಿದೆ ಎನ್ನಲಾಗಿದೆ. ಪ್ರಸ್ತುತ ಕಂಪನಿ (Tech News In Kannada) ಈ ಕುರಿತಾದ ಯಾವುದೇ ಡೀಲ್‌ಗಳನ್ನು ಬಹಿರಂಗಪಡಿಸಿಲ್ಲ, ಆದರೆ ಪ್ರತಿ ಬಾರಿಯಂತೆ ಕಂಪನಿಯು OnePlus ಫೋನ್‌ಗಳಲ್ಲಿ ಸಾವಿರಾರು ರೂಪಾಯಿಗಳ ಬ್ಯಾಂಕ್ ಕೊಡುಗೆ, ಕೂಪನ್ ರಿಯಾಯಿತಿ, ನೋ-ಕಾಸ್ಟ್ EMI ನಂತಹ ಪ್ರಯೋಜನಗಳನ್ನು ನೀಡಬಹುದು ಎನ್ನಲಾಗುತ್ತಿದೆ.


COMMERCIAL BREAK
SCROLL TO CONTINUE READING

ಒನ್ ಪ್ಲಸ್  10R 5G
ಈ OnePlus ಫೋನ್ ಎರಡು ಶೇಖರಣಾ ಆಯ್ಕೆಗಳಲ್ಲಿ ಬರುತ್ತದೆ - 8GB RAM + 128GB ಮತ್ತು 12GB RAM + 256GB. ಇದರ ಆರಂಭಿಕ ಬೆಲೆ ರೂ 32,999 ಮತ್ತು ಇದು ಫಾರೆಸ್ಟ್ ಗ್ರೀನ್, ಪ್ರೈಮ್ ಬ್ಲೂ ಮತ್ತು ಸಿಯೆರಾ ಕಪ್ಪು ಬಣ್ಣದ ಆಯ್ಕೆಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಫೋನ್‌ನಲ್ಲಿ ಲಭ್ಯವಿರುವ ವೈಶಿಷ್ಟ್ಯಗಳ ಕುರಿತು ಹೇಳುವುದಾದರೆ, ಇದು 6.7-ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ, ಇದು 120Hz ರಿಫ್ರೆಶ್ ರೇಟ್ ಮತ್ತು 2400 x 1080 ಪಿಕ್ಸೆಲ್‌ಗಳನ್ನು ಬೆಂಬಲಿಸುತ್ತದೆ.


ಮೀಡಿಯಾ ಟೆಕ್ ಡೈಮೆನ್ಸಿಟಿ 8100 ಮ್ಯಾಕ್ಸ್ ಪ್ರೊಸೆಸರ್ ಅನ್ನು ಈ ಫೋನ್ ನಲ್ಲಿ ಬಳಸಲಾಗಿದೆ. ಇದರ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ನೀಡಲಾಗಿದೆ, ಇದರಲ್ಲಿ 50MP ಮುಖ್ಯ ಮತ್ತು 2MP ಮ್ಯಾಕ್ರೋ ಕ್ಯಾಮೆರಾ ಲಭ್ಯವಿರುತ್ತದೆ. ಇದು ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 16MP ಕ್ಯಾಮೆರಾವನ್ನು ಹೊಂದಿದೆ. ಈ ಫೋನ್ 5000mAh ಬ್ಯಾಟರಿ ಮತ್ತು 80W SuperVOOC ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯವನ್ನು ಹೊಂದಿದೆ.


ಒನ್ ಪ್ಲಸ್ 11R 5G
ಈ OnePlus ಫೋನ್ ಕೂಡ ಎರಡು ಶೇಖರಣಾ ಆಯ್ಕೆಗಳಲ್ಲಿ ಬರುತ್ತದೆ - 8GB RAM + 128GB ಮತ್ತು 16GB RAM + 256GB. ಇದರ ಆರಂಭಿಕ ಬೆಲೆ 39,999 ರೂ. ಫೋನ್‌ನಲ್ಲಿ ಲಭ್ಯವಿರುವ ವೈಶಿಷ್ಟ್ಯಗಳ ಕುರಿತು ಹೇಳುವುದಾದರೆ, ಇದು 6.7-ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ, ಇದು 120Hz ರಿಫ್ರೆಶ್ ರೇಟ್ ಮತ್ತು 2772 x 1240 ಪಿಕ್ಸೆಲ್‌ಗಳನ್ನು ಬೆಂಬಲಿಸುತ್ತದೆ.


ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್ 8+ Gen 1 ಪ್ರೊಸೆಸರ್ ಅನ್ನು ಈ ಫೋನ್‌ನಲ್ಲಿ ನೀಡಲಾಗಿದೆ. ಇದರ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ನೀಡಲಾಗಿದೆ, ಇದರಲ್ಲಿ 50MP ಮುಖ್ಯ ಮತ್ತು 8MP ಅಲ್ಟ್ರಾ ವೈಡ್ ಕ್ಯಾಮೆರಾ ಲಭ್ಯವಿರುತ್ತದೆ. ಇದು ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 16MP ಕ್ಯಾಮೆರಾವನ್ನು ಹೊಂದಿದೆ. ಈ ಫೋನ್ 5000mAh ಬ್ಯಾಟರಿ ಮತ್ತು 100W SuperVOOC ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯವನ್ನು ಹೊಂದಿದೆ.


ಇದನ್ನೂ ಓದಿ-ಫೇಸ್ ಬುಕ್-ಇನ್ಸ್ಟಾಗ್ರಾಮ್ ಬಳಕೆದಾರರಿಗೆ ಮೇಟಾದಿಂದ ಭಾರಿ ಉಡುಗೊರೆ!


OnePlus 11 5G
ಈ OnePlus ಫೋನ್ ಎರಡು ಶೇಖರಣಾ ಆಯ್ಕೆಗಳಲ್ಲಿ ಬರುತ್ತದೆ - 8GB RAM + 128GB ಮತ್ತು 16GB RAM + 256GB. ಇದರ ಆರಂಭಿಕ ಬೆಲೆ 56,999 ರೂ. ಫೋನ್‌ನಲ್ಲಿ ಲಭ್ಯವಿರುವ ವೈಶಿಷ್ಟ್ಯಗಳ ಕುರಿತು ಹೇಳುವುದಾದರೆ, ಇದು 6.7-ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ, ಇದು 120Hz ರಿಫ್ರೆಶ್ ರೇಟ್ ಮತ್ತು 3216 x 1440 ಪಿಕ್ಸೆಲ್‌ಗಳನ್ನು ಬೆಂಬಲಿಸುತ್ತದೆ.


ಇದನ್ನೂ ಓದಿ-BSNL ಗ್ರಾಹಕರಿಗೊಂದು ಬ್ಯಾಡ್ ನ್ಯೂಸ್ !


ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್ 8 Gen 2 ಪ್ರೊಸೆಸರ್ ಅನ್ನು ಈ ಫೋನ್‌ನಲ್ಲಿ ನೀಡಲಾಗಿದೆ. ಇದರ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ನೀಡಲಾಗಿದೆ, ಇದರಲ್ಲಿ 50MP ಮುಖ್ಯ, 48MP ಅಲ್ಟ್ರಾ ವೈಡ್ ಕ್ಯಾಮೆರಾ ಮತ್ತು 32MP ಟೆಲಿಫೋಟೋ (News In Kannada) ಕ್ಯಾಮೆರಾ ಲಭ್ಯವಿರುತ್ತದೆ. ಇದು ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 16MP ಕ್ಯಾಮೆರಾವನ್ನು ಹೊಂದಿದೆ. ಈ ಫೋನ್ 5000mAh ಬ್ಯಾಟರಿ ಮತ್ತು 100W SuperVOOC ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯವನ್ನು ಹೊಂದಿದೆ.


ಇದನ್ನೂ ನೋಡಿ-