ಬೆಂಗಳೂರು: ಭಾರತೀಯ ಏರೋಸ್ಪೇಸ್ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸುವ ಮತ್ತು ಉತ್ಪಾದಿಸುವ ಅನಂತ್ ಟೆಕ್ನಾಲಜೀಸ್ ಬೆಂಗಳೂರಿನ ಕೆಐಎಡಿಬಿ ಏರೋಸ್ಪೇಸ್ ಪಾರ್ಕ್‌ನಲ್ಲಿ 15,000 ಚದರ ಮೀಟರ್‌ನ ಬಾಹ್ಯಾಕಾಶ ನೌಕೆ ತಯಾರಿಕಾ ಘಟಕವನ್ನು ಸ್ಥಾಪಿಸಿದೆ. ಇದನ್ನು ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಹಾಗೂ ಇಸ್ರೋ ಮುಖ್ಯಸ್ಥರಾಗಿರುವ ಡಾ. ಎನ್ ಸೋಮನಾಥ್ ರವರು ಲೋಕಾರ್ಪಣೆ ಮಾಡಿದರು.


COMMERCIAL BREAK
SCROLL TO CONTINUE READING

ಈ  ಬಾಹ್ಯಾಕಾಶ ತಯಾರಕ ಘಟಕವು ಏಕಕಾಲದಲದಲ್ಲಿ ನಾಲ್ಕು ಬೃಹತ್ ಬಾಹ್ಯಾಕಾಶ ನೌಕೆಗಳ ಜೋಡಣೆ,ಇಂಟಿಗ್ರೇಷನ್, ಟೆಸ್ಟಿಂಗ್ ಏಕಕಾಲದಲ್ಲಿ ಪೂರೈಸುವ ಸಾಮಾರ್ಥ್ಯ ಹೊಂದಿದೆ. ಎಲ್ಲಾ ನಾಲ್ಕು ಘಟಕಗಳು ಒಂದರಿಂದ ಮತ್ತೊಂದು ಪ್ರತ್ಯೇಕವಾಗಿದ್ದು, ಬಾಹ್ಯಾಕಾಶ ನೌಕೆಗಳ ನಾಲ್ಕು ವಿಭಿನ್ನ ಶ್ರೇಣಿಗಳ ಎಂಡ್ ಟೂ ಎಂಡ್ ಇಂಟಿಗ್ರೇಷನ್ ಆಯೋಜಿಸುವ ಸಾಮರ್ಥ್ಯ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.


ಇದೇ ವೇಳೆ ಈ ಬಾಹ್ಯಾಕಾಶ ನೌಕೆ ತಯಾರಕ ಘಟಕ ಉದ್ಘಾಟಿಸಿ ಮಾತನಾಡಿದ ಇಸ್ರೋ ಅಧ್ಯಕ್ಷ ಡಾ. ಎಸ್. ಸೋಮನಾಥ್ ಅವರು, ಕಳೆದ ಆರು ವರ್ಷಗಳಲ್ಲಿ ಭಾರತವು ತನ್ನ ಬಾಹ್ಯಕಾಶ ಯೋಜನೆಗಳ ಮೂಲಕ ಹಲವು ಮಹತ್ವದ ಮೈಲುಗಲ್ಲುಗಳನ್ನು ಸ್ಥಾಪಿಸಿದೆ. ಇಂದು ಭಾರತವು ತನ್ನದೇ ಆದ ಉಪಗ್ರಹಗಳನ್ನು ನಿರ್ಮಿಸಬಹುದು, ಜೋಡಿಸಬಹುದು ಮತ್ತು ಉಡಾವಣೆ ಮಾಡಬಹುದು. ಇಸ್ರೋದ ನೇತೃತ್ವದ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಖಾಸಗಿ ಸಂಸ್ಥೆಗಳ ಜೊತೆಗೆ ಸಹಭಾಗಿತ್ವ ಸಾಧಿಸುವುದರಿಂದ ಭಾರತವು ತನ್ನ ಬಾಹ್ಯಕಾಶ ಕಾರ್ಯಕ್ರಮಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನೆರವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ಇದನ್ನೂ ಓದಿ- ಬೆರಳಿಗಿಂತಲೂ ಚಿಕ್ಕದಾಗಿರುವ ಮೊಬೈಲ್ ಫೋನ್- ಇಲ್ಲಿದೆ ಇದರ ಬೆಲೆ, ವೈಶಿಷ್ಟ್ಯ!


ಭಾರತದ ಬಾಹ್ಯಾಕಾಶ ನೀತಿಯು ದೇಶೀಯ ಬಳಕೆಗಾಗಿ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಾರುಕಟ್ಟೆಗೂ ಸಹ ಉಪಗ್ರಹಗಳನ್ನು ನಿರ್ಮಿಸಲು ನಮಗೆ ಅನುವು ಮಾಡಿಕೊಡುತ್ತದೆ. ಅನಂತ್ ಟೆಕ್ನಾಲಜೀಸ್ ನಂಬಿಕೆಯ ದೊಡ್ಡ ಜಿಗಿತವನ್ನು ತೆಗೆದುಕೊಂಡಿದೆ ಮತ್ತು ನಮ್ಮ ಬಾಹ್ಯಾಕಾಶ ಕಾರ್ಯಕ್ರಮವನ್ನು ಕ್ರಾಂತಿಗೊಳಿಸಲು ಭಾರತಕ್ಕೆ ಅಂತಹ ಹೆಚ್ಚಿನ ಉದ್ಯಮಿಗಳು ಮತ್ತು ಇನ್ನೂ ಅನೇಕ ಪಾಲುದಾರರ ಅಗತ್ಯವಿದೆ  ಎಂದು ಡಾ. ಎಸ್. ಸೋಮನಾಥ್ ತಿಳಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಅನಂತ್ ಟೆಕ್ನಾಲಜೀಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಸುಬ್ಬಾ ರಾವ್ ಪಾವುಲೂರಿ,  ಭಾರತವು ಬಾಹ್ಯಾಕಾಶ ನೌಕೆ ಉದ್ಯಮದಲ್ಲಿ ಕ್ರಾಂತಿಯನ್ನುಂಟುಮಾಡುವ ತುದಿಯಲ್ಲಿದೆ. ಒಂದು ರಾಷ್ಟ್ರವಾಗಿ ನಾವು ವಿಶ್ವ ದರ್ಜೆಯ ಬಾಹ್ಯಾಕಾಶ ನೌಕೆಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದ್ದೇವೆ ಎಂದರು.


ಇದನ್ನೂ ಓದಿ- ಸೊಳ್ಳೆ ಕಾಟದಿಂದ ಸಂಪೂರ್ಣ ಮುಕ್ತಿ ನೀಡುತ್ತದೆ ಈ ಬಲ್ಬ್ .. ! ಬೆಲೆ ಕೂಡಾ ತೀರಾ ಕಡಿಮೆ


"ವರ್ಷಗಳಲ್ಲಿ, ಅನಂತ್ ಟೆಕ್ನಾಲಜೀಸ್ ಇಸ್ರೋದ ಪ್ರಮುಖ ಉಡಾವಣೆಗಳಿಗೆ ಯಶಸ್ವಿಯಾಗಿ ಕೊಡುಗೆ ನೀಡಿದೆ. ನಮ್ಮ ತಂತ್ರಜ್ಞಾನದ ಕುಶಾಗ್ರಮತಿ ಎಷ್ಟಿದೆ ಎಂದರೆ ಅನಂತ್ ಟೆಕ್ನಾಲಜೀಸ್ ಒದಗಿಸಿದ ಯಾವುದೇ ಉಪವ್ಯವಸ್ಥೆಗಳು ಕಕ್ಷೆಯಲ್ಲಿ ವಿಫಲವಾಗಿಲ್ಲ,'' ಎಂದು ಅವರು ಪ್ರತಿಪಾದಿಸಿದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.