Zee Kannada News: ರಾಜ್ಯಾದ್ಯಂತ ಭಾರೀ ನಿರೀಕ್ಷೆ ಮೂಡಿಸಿರುವ ಜೀ ಕನ್ನಡ ನ್ಯೂಸ್‌ ಚಾನೆಲ್‌ ಸೋಮವಾರ(ಏಪ್ರಿಲ್ 10)  ಅದ್ದೂರಿಯಾಗಿ ಲೋಕಾರ್ಪಣೆಗೊಂಡಿತು. ನಿವೃತ್ತ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ ಅವರು ಚಾನೆಲ್‌ ಲೋಕಾರ್ಪಣೆ ಮಾಡಿದರು. 


COMMERCIAL BREAK
SCROLL TO CONTINUE READING

ಜೀ ಮೀಡಿಯಾ ದೇಶಾದ್ಯಂತ ಮನೆ ಮಾತಾಗಿರುವ ಸಂಸ್ಥೆ. ಸುದ್ದಿ ಜಗತ್ತಿನಲ್ಲಿ ಹೊಸ ಹೊಸ ಪ್ರಯೋಗಗಳು, ವಿಭಿನ್ನ ಮತ್ತು ವಿಶೇಷ ವಸ್ತುನಿಷ್ಠ ಕಾರ್ಯಕ್ರಮಗಳ ಮೂಲಕ ಜನರ ನಂಬಿಕೆಗೆ ಪಾತ್ರವಾಗಿದೆ. ಉತ್ತರ ಭಾರತದಲ್ಲಿ ತನ್ನ ಛಾಪನ್ನು ಮೂಡಿಸಿರುವ ಜೀ ಮೀಡಿಯಾ, ಈಗ ದಕ್ಷಿಣ ಭಾರತದಲ್ಲೂ ಹೊಸ ಮೈಲಿಗಲ್ಲು ಸ್ಥಾಪಿಸಲು ಮುಂದಾಗಿದೆ. 


ಈಗಾಗಲೇ ಕರ್ನಾಟಕದಲ್ಲಿ ಜೀ ಕನ್ನಡ ನ್ಯೂಸ್‌ ಡಿಜಿಟಲ್‌ ಮಾಧ್ಯಮ ಆರಂಭವಾಗಿ ಒಂದು ವರ್ಷ ಕಳೆದಿದ್ದು, ಈಗ ಸ್ಯಾಟಲೈಟ್‌ ಚಾನೆಲ್‌ ಲೋಕಾರ್ಪಣೆಯಾಗಿ ಎಲ್ಲರ ಮನೆಮನಗಳಿಗೆ ಬರುತ್ತಿದೆ. ಸತ್ಯವೇ ಸುದ್ದಿಯ ಜೀವಾಳ ಎಂಬ ಧ್ಯೇಯದೊಂದಿಗೆ ಜೀ ಕನ್ನಡ ನ್ಯೂಸ್‌ ಕನ್ನಡಿಗರ ವಿಶ್ವಾಸ ಗಳಿಸಿದೆ. ಜೀ ಮೀಡಿಯಾ ನಿಖರವಾದ ಸುದ್ದಿ ನೀಡುವಲ್ಲಿ ಸದಾ ಮುಂಚೂಣಿಯಲ್ಲಿರುವ‌ ನೆಟ್‌ವರ್ಕ್. ನಿಖರವಾದ ಸುದ್ದಿ ನೀಡುವುದು ಮಾತ್ರವಲ್ಲ, ನಿಷ್ಪಕ್ಷಪಾತವಾದ ಸುದ್ದಿ ನೀಡುವುದರಲ್ಲೂ ಸದಾ ಮುಂದಿರುವ ಮಾಧ್ಯಮ ಸಂಸ್ಥೆ ಜೀ ಮೀಡಿಯಾ. ಜೊತೆಗೆ ದೇಶದ ಮಾಧ್ಯಮ ಕ್ಷೇತ್ರದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನೆಟ್ ವರ್ಕ್ ಕೂಡ ಹೌದು. 


ಜೀ ಮೀಡಿಯಾ ದೇಶದ ವಿವಿಧ ಭಾಷೆಗಳಲ್ಲಿ ಒಟ್ಟು 18ಕ್ಕೂ ಹೆಚ್ಚು ಸುದ್ದಿ ವಾಹಿನಿಗಳನ್ನು ಹೊಂದಿದೆ. ಇದರ ಮುಂದುವರಿದ ಭಾಗವಾಗಿ ಜೀ ಡಿಜಿಟಲ್ ನ್ಯೂಸ್ ವಾಹಿನಿಗಳಾದ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಕೂಡ ಆರಂಭವಾಗಿ ವರ್ಷ ಕಳೆದಿದೆ. ಒಂದೇ ವರ್ಷದಲ್ಲಿ ಜೀ ಕನ್ನಡ ನ್ಯೂಸ್‌ ಜನರ ಮನೆ ಮನದಲ್ಲೂ ಬೇರೂರಿದೆ. ಇಷ್ಟು ದಿನ ಡಿಜಿಟಲ್‌ ಮಾಧ್ಯಮದಲ್ಲಿದ್ದ ಜೀ ಕನ್ನಡ ನ್ಯೂಸ್‌ ಈಗ ಟಿವಿಯಲ್ಲೂ ಪ್ರಸಾರವಾಗಲಿದೆ. 


ಬೆಂಗಳೂರಿನ ಲಲಿತ್‌ ಅಶೋಕ್‌ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾನೆಲ್‌ ಲೋಕಾರ್ಪಣೆ ಮಾಡಿ ಮಾತನಾಡಿದ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ, ವಾರ್ತೆ ಎನ್ನುವುದು ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರ ಮೂಲಭೂತ ಹಕ್ಕು. ಅದರಲ್ಲಿ ಎರಡು ಮಾತಿಲ್ಲ. ನಮ್ಮ ಸಂವಿಧಾನದಲ್ಲಿ ನಮ್ಮ ಹಿರಿಯರು ಮೂರು ಸ್ಥಂಭಗಳನ್ನ ಕಟ್ಟಿದ್ದಾರೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ. ಆದ್ರೆ ಭಾರತದ ಜನತೆ ಮಾಧ್ಯಮ ರಂಗಕ್ಕೆ 4ನೇ ಸ್ಥಂಭದ ಸ್ಥಾನ ನೀಡಿದ್ದಾರೆ. ಇದನ್ನು ಕೋರ್ಟ್‌ಗಳು ಕೂಡಾ ಒಪ್ಪಿಕೊಂಡಿವೆ ಅಂತಾ ಹೇಳಿದ್ರು. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.