Tech News: ಅಪರಿಚಿತ ಬ್ಲೂಟೂತ್ ಸಾಧನಗಳಿಂದ ಯಾರಾದರೂ ನಿಮ್ಮನ್ನು ಟ್ರ್ಯಾಕ್ ಮಾಡ್ತಾ ಇದ್ದಾರಾ? ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಅಪರಿಚಿತ ಬ್ಲೂಟೂತ್ ಸಾಧನಗಳಿಂದ ನಿಮ್ಮನ್ನು ರಕ್ಷಿಸಲು ಆಪಲ್ ಮಾತು ಗೂಗಲ್ ಒಟ್ಟಾಗಿ ಸೇರಿ ಒಂದು ಮಾರ್ಗವನ್ನು ರಚಿಸಿವೆ. ಇದರ ಸಹಾಯದಿಂದ,  iPhone ಮತ್ತು Android ಬಳಕೆದಾರರು ಅಪರಿಚಿತ ಬ್ಲೂಟೂತ್ ಟ್ರ್ಯಾಕರ್ ಬಗ್ಗೆ ಎಚ್ಚರಿಕೆಯನ್ನು ಪಡೆಯುತ್ತಾರೆ. ಯಾವುದೀ ಮಾರ್ಗ, ಇದರಿಂದ ಫೋನ್ ಬಳಕೆದಾರರಿಗೆ ಏನು ಪ್ರಯೋಜನ ಎಂದು ತಿಳಿಯೋಣ... 


COMMERCIAL BREAK
SCROLL TO CONTINUE READING

ವಾಸ್ತವವಾಗಿ, ಆಪಲ್‌ನ ಏರ್‌ಟ್ಯಾಗ್‌ಗಳಂತಹ ಟ್ರ್ಯಾಕಿಂಗ್ ಸಾಧನಗಳನ್ನು ದುರುಪಯೋಗಪಡಿಸಿಕೊಳ್ಳಬಹುದು ಎಂದು ಜನರು ದೂರಿದ್ದರಿಂದ  ಈ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸಲು, ಆಪಲ್ ಮತ್ತು ಗೂಗಲ್ ಒಟ್ಟಾಗಿ 'ಅನಗತ್ಯ ಸ್ಥಳ ಟ್ರ್ಯಾಕರ್‌ಗಳನ್ನು ಹುಡುಕುವುದು' ಎಂಬ ಹೊಸ ವಿಧಾನವನ್ನು ರಚಿಸಿವೆ. 


ಏನಿದು 'ಅನಗತ್ಯ ಸ್ಥಳ ಟ್ರ್ಯಾಕರ್‌ಗಳನ್ನು ಹುಡುಕುವುದು? 
ನಿಮ್ಮ ಫೋನ್‌ನಲ್ಲಿ ಸಣ್ಣ ನವೀಕರಣದ ಮೂಲಕ  'ಅನಗತ್ಯ ಸ್ಥಳ ಟ್ರ್ಯಾಕರ್‌ಗಳನ್ನು ಹುಡುಕುವುದು' ವಿಧಾನವು ಕಾರ್ಯನಿರ್ವಹಿಸುತ್ತದೆ. ಐಫೋನ್ ಬಳಕೆದಾರರಿಗೆ, ಈ ಅಪ್‌ಡೇಟ್ iOS 17.5 ಆಗಿರುತ್ತದೆ ಮತ್ತು 6.0 ಅಥವಾ ಅದಕ್ಕಿಂತ ಹೆಚ್ಚಿನ ಆವೃತ್ತಿಯನ್ನು ರನ್ ಮಾಡುವ Android ಫೋನ್‌ಗಳಿಗೆ ಪ್ರತ್ಯೇಕ ಅಪ್‌ಡೇಟ್ ಇರುತ್ತದೆ.


ಇದನ್ನೂ ಓದಿ- ಜಿಯೋಫೈಬರ್, ಏರ್ ಫೈಬರ್ ಗ್ರಾಹಕರಿಗೆ 15 ಒಟಿಟಿ ಅಪ್ಲಿಕೇಷನ್‌ ಜತೆಗೆ ಪೋಸ್ಟ್ ಪೇಯ್ಡ್ ಪ್ಲಾನ್ 888 ಘೋಷಣೆ


ಇದು ಹೇಗೆ ಕಾರ್ಯನಿರ್ವಹಿಸುತ್ತದೆ? 
ಯಾವುದೇ ಒಂದು ಸಾಧನದಲ್ಲಿ ಅಜ್ಞಾತ ಬ್ಲೂಟೂತ್ ಟ್ರ್ಯಾಕಿಂಗ್ ಸಾಧನ (Unknown bluetooth tracking device) ಹೆಚ್ಚು ಕಾಲ್ ಮುಂದುವರೆದರೆ ಅಂತಹ ಸಂದರ್ಭದಲ್ಲಿ ಫೋನ್‌ನಲ್ಲಿ ಎಚ್ಚರಿಕೆಯು ಕಾಣಿಸಿಕೊಳ್ಳುತ್ತದೆ. ಈ ಎಚ್ಚರಿಕೆಯಲ್ಲಿ '[ಐಟಂ] ನಿಮ್ಮೊಂದಿಗೆ ಚಲಿಸುತ್ತಿದೆ' ಎಂದು (ಈ ಎಚ್ಚರಿಕೆಯು ಯಾವುದೇ ಕಂಪನಿಯ ಟ್ರ್ಯಾಕಿಂಗ್ ಸಾಧನಕ್ಕೆ ಬರಬಹುದು) ಬರೆಯಲಾಗಿರುತ್ತದೆ.


ಗಮನಾರ್ಹವಾಗಿ,  ಏರ್‌ಟ್ಯಾಗ್‌ಗಳನ್ನು (Airtags) ಮೂಲತಃ ಕೀಗಳನ್ನು ಅಥವಾ ಯಾವುದೇ ಕಳೆದುಹೋದ ಐಟಂ ಅನ್ನು ಹುಡುಕಲು ರಚಿಸಲಾಗಿದೆ. ಆದರೆ ದುರದೃಷ್ಟವಶಾತ್ ಕೆಲವರು ಅದನ್ನು ದುರುಪಯೋಗಪಡಿಸಿಕೊಳ್ಳಲು ಪ್ರಾರಂಭಿಸಿದರು. ಕೆಲ ದಿನಗಳ ಹಿಂದೆ ಜನರು ಇತರರನ್ನು ಪತ್ತೆಹಚ್ಚಲು ಆಪಲ್‌ನ ಏರ್‌ಟ್ಯಾಗ್‌ಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬ ವರದಿಗಳು ಮುನ್ನಲೆಗೆ ಬಂದಿದ್ದವು. ಈ ಹಿನ್ನಲೆಯಲ್ಲಿ, ಗ್ರಾಹಕರಿಗೆ ಇದರಿಂದ ಪರಿಹಾರ ನೀಡುವ ನಿಟ್ಟಿನಲ್ಲಿ ಆಪಲ್ (Apple) ಮತ್ತು ಗೂಗಲ್  (Google) ಒಟ್ಟಾಗಿ ಯಾವುದೇ ಅಜ್ಞಾತ ಬ್ಲೂಟೂತ್ ಟ್ರ್ಯಾಕರ್ ನಿಮ್ಮ ಮೇಲೆ ಕಣ್ಣಿಡಲು ಸಾಧ್ಯವಾಗದಂತೆ ಒಂದು ಮಾರ್ಗವನ್ನು ರಚಿಸಲು ನಿರ್ಧರಿಸಿದವು. 


ಇದನ್ನೂ ಓದಿ- ಈ ಕಾರಣಕ್ಕಾಗಿ ಭಾರತದಲ್ಲಿ ಎಕ್ಷ್ ನ 1.8 ಲಕ್ಷ ಖಾತೆಗಳನ್ನು ನಿಷೇಧಿಸಿದ ಎಲೋನ್ ಮಸ್ಕ್..!


ಆಪಲ್ ಮತ್ತು ಗೂಗಲ್ ಒಟ್ಟಾಗಿ ಕಾರ್ಯನಿರ್ವಹಿಸಿ ರಚಿಸಿರುವ ಹೊಸ ವಿಧಾನವು ಯಾವುದೇ ಥರ್ಡ್ ಪಾರ್ಟಿ ಅಪ್ಲಿಕೇಶನ್ ಸಹಾಯವಿಲ್ಲದೆಯೇ, ನೇರವಾಗಿ ನಿಮ್ಮ ಫೋನ್‌ನ ಆಪರೇಟಿಂಗ್ ಸಿಸ್ಟಮ್‌ಗೆ (ಅಂದರೆ iOS ಅಥವಾ Android) ಸಂಯೋಜಿಸಲಾಗುತ್ತದೆ.  ಇದರಿಂದ ಅಜ್ಞಾತ ಟ್ರ್ಯಾಕರ್ ಗಳ ಬಗ್ಗೆ ಗ್ರಾಹಕರಿಗೆ ಎಚ್ಚರಿಕೆ ನೀಡಲಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.