ನವದೆಹಲಿ: Latest iPhone 14 News - ಆಪಲ್ ಸ್ಮಾರ್ಟ್ ಫೋನ್ (Smartphone Company) ತಯಾರಕ ಕಂಪನಿಗೆ ಯಾವುದೇ ಪರಿಚಯದ ಅವಶ್ಯಕತೆ ಇಲ್ಲ ಎಂಬ ಸಂಗತಿ ಎಲ್ಲರಿಗೂ ತಿಳಿದೇ ಇದೆ.  ಪ್ರತಿ ವರ್ಷ ಆಪಲ್ ತನ್ನ ಪ್ರಮುಖ ಸ್ಮಾರ್ಟ್‌ಫೋನ್, ಐಫೋನ್‌ನ ಹೊಸ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸುತ್ತದೆ.  ಐಫೋನ್ 13 ಅನ್ನು ಈ ವರ್ಷ ಬಿಡುಗಡೆ ಮಾಡಲಾಗಿದೆ.  2022 (iPhone 2022) ರಲ್ಲಿ ಬಿಡುಗಡೆಯಾಗಲಿರುವ ಐಫೋನ್ 14 ನ ವೈಶಿಷ್ಟ್ಯಗಳು ಸೋರಿಕೆಯಾಗಲು ಆರಂಭಗೊಂಡಿವೆ. ಇಂದು ನಾವು ನಿಮಗೆ ಇತ್ತೀಚಿನ ಸೋರಿಕೆಯ ಬಗ್ಗೆ ಮಾಹಿತಿ ನೀಡಲಿದ್ದೇವೆ. ಇದರಲ್ಲಿ ಐಫೋನ್ 14 ರ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಒಂದು ವೈಶಿಷ್ಟ್ಯದ ಕುರಿತು ತಿಳಿದು ಬಂದಿದೆ.


COMMERCIAL BREAK
SCROLL TO CONTINUE READING

iPhone 14 ನ ಹೊಸ ಸೋರಿಕೆ ಅಭಿಮಾನಿಗಳಿಗೆ ದಿಗ್ಭ್ರಮೆಗೊಳಿಸಿದೆ
ಟೆಕ್ ಪುಟ ConceptsiPhone ಇತ್ತೀಚೆಗೆ ವಿನ್ಯಾಸದ ಟ್ರೇಲರ್ ಅನ್ನು ಪರಿಚಯಿಸಿದ್ದು, ಇದರಲ್ಲಿ iPhone 14 ಮತ್ತು iPhone 14 Pro ಎರಡು ಪರದೆಗಳನ್ನು ಹೊಂದಿರಬಹುದು ಎಂದು ಹೇಳಿದೆ. ಈ ಎರಡೂ ಸಾಧನಗಳು ಸೆಕೆಂಡರಿ ಸ್ಲೈಡರ್ ಪರದೆಯೊಂದಿಗೆ ಬರಲಿವೆ ಎಂದು ಅದು ಬಹಿರಂಗಪಡ್ಸಿದಿದೆ. ಇದರ ಜೊತೆಗೆ  ಏರ್ ಚಾರ್ಜಿಂಗ್ ತಂತ್ರಜ್ಞಾನವೂ ಈ ಐಫೋನ್ ನಲ್ಲಿ ಬರಬಹುದು ಎಂದು ಅದು ಹೇಳಿದೆ.


ಎರಡು ಪರದೆಗಳ ಅನುಕೂಲಗಳು
ಆಪಲ್ ಸ್ಲೈಡರ್ ಪರದೆಯನ್ನು ಏಕೆ ತರುತ್ತಿದೆ ಎಂದು ನೀವು ಆಶ್ಚರ್ಯಪಡಬಹುದು. ಈ ವೈಶಿಷ್ಟ್ಯದೊಂದಿಗೆ ಆಪಲ್ ಬಳಕೆದಾರರು ಕೆಳಗಿನ ಪರದೆಯನ್ನು ಕೀಬೋರ್ಡ್ ಅಥವಾ ಆಟದ ನಿಯಂತ್ರಕವಾಗಿ ಬಳಸಬಹುದು. ಇದರಿಂದ ನೀವು ಉತ್ತಮ ಸ್ಥಳವನ್ನು ಪಡೆಯಬಹುದು. ಮುಖ್ಯ ಪರದೆ. ಅಲ್ಲದೆ, ಎರಡು ಪರದೆಗಳಿದ್ದರೆ, ನೀವು ಒಂದೇ ಸಮಯದಲ್ಲಿ ಪೂರ್ಣ ಪರದೆಯಲ್ಲಿ ಎರಡು ಅಪ್ಲಿಕೇಶನ್‌ಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ.


ಇದನ್ನೂ ಓದಿ-Omicron Updates: ಭಾರತದ ಪಾಲಿಗೆ Omicron ಎಷ್ಟೊಂದು ಅಪಾಯಕಾರಿ, Vaccine ಎಷ್ಟು ಪರಿಣಾಮಕಾರಿ? AIIMS ವೈದ್ಯರು ಹೇಳಿದ್ದೇನು?


ಐಫೋನ್ 14 ರಲ್ಲಿ ಏರ್ ಚಾರ್ಜಿಂಗ್ ತಂತ್ರಜ್ಞಾನ ಸಿಗುವ ಸಾಧ್ಯತೆ
ಏರ್ ಚಾರ್ಜಿಂಗ್ ತಂತ್ರಜ್ಞಾನ ಎಂದರೆ ಇದು ಬಳಕೆದಾರರಿಗೆ ತಮ್ಮ ಫೋನ್‌ಗಳನ್ನು ಯಾವುದೇ ತಂತಿಗಳು, ಚಾರ್ಜಿಂಗ್ ಕೇಬಲ್‌ಗಳು ಅಥವಾ ಚಾರ್ಜಿಂಗ್ ಸ್ಟ್ಯಾಂಡ್‌ಗಳಿಲ್ಲದೆ ಐಫೋನ್‌ನಲ್ಲಿ ಚಾರ್ಜ್ ಮಾಡಲು ಸಾಧ್ಯವಾಗಿಸುತ್ತದೆ. ಇದು 2022 ರಲ್ಲಿ ಬಿಡುಗಡೆಯಾಗಲಿದೆ. ಆಪಲ್ ಈಗಾಗಲೇ ಈ ವೈಶಿಷ್ಟ್ಯದ ಬಗ್ಗೆ ಹೇಳಿದ್ದರೂ ಕೂಡ ಈ ಹೊಸ ಪರಿಕಲ್ಪನೆಯ ವಿನ್ಯಾಸದಲ್ಲಿ, ಹೆಚ್ಚಿನ ಬ್ಯಾಂಡ್‌ವಿಡ್ತ್‌ನೊಂದಿಗೆ ಚಾರ್ಜಿಂಗ್ ಪ್ಯಾಡ್ ಅನ್ನು ನೀಡಲಾಗಿದ್ದು, ಇದು ಫೋನ್ ಅನ್ನು ದೂರದಿಂದಲೂ ಚಾರ್ಜ್ ಮಾಡಲು ಸಹಕರಿಸಲಿದೆ. 


ಇದನ್ನೂ ಓದಿ-Jio ಪ್ಲಾನ್ ನಲ್ಲಿ ನಿತ್ಯ 3GB ಡೇಟಾದೊಂದಿಗೆ ಪಡೆಯಿರಿ ಡಿಸ್ನಿ+ಹಾಟ್‌ಸ್ಟಾರ್, 6GB ಬೋನಸ್ ಡೇಟಾ


iPhone 14 ಆಪಲ್‌ನ ಮುಂದಿನ ಐಫೋನ್  2022 ರಲ್ಲಿ ಬಿಡುಗಡೆಯಾಗುವ ಸಾಧಯ್ತೆ ಇದೆ. ಪ್ರಸ್ತುತ, ಕಂಪನಿಯಿಂದ ಈ ಫೋನ್ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲಾಗಿಲ್ಲ ಎಂಬುದು ಇಲ್ಲಿ ಗಮನಾರ್ಹ.


ಇದನ್ನೂ ಓದಿ- Truecaller ನಲ್ಲಿ ಹೊಸ ಫೀಚರ್..ಏನಿದು ಘೋಸ್ಟ್ ಕಾಲ್.? ಬಳಕೆದಾರರು ತಪ್ಪದೇ ಓದಿ...


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.