ನವದೆಹಲಿ: ಆ್ಯಪಲ್ ವಾಚ್ ಅನೇಕ ಸಂದರ್ಭಗಳಲ್ಲಿ ವ್ಯಕ್ತಿಗಳ ಜೀವ ಉಳಿಸಿದ ಬಗ್ಗೆ ನೀವು ಓದಿರುತ್ತೀರಿ. ಸಾವಿನ ದವಡೆಗೆ ಸಿಲುಕಿದ ಅನೇಕರ ಜೀವ ಉಳಿಸುವಲ್ಲಿ ಈ ಆ್ಯಪಲ್ ವಾಚ್ ಪ್ರಮುಖ ಪಾತ್ರ ವಹಿಸಿದ್ದು ಸುದ್ದಿಯಾಗಿತ್ತು. ಈ ಜನಪ್ರಿಯ ಸ್ಮಾರ್ಟ್ ವಾಚ್ ಮಾದರಿ ತನ್ನ ಬಳಕೆದಾರರ ಆರೋಗ್ಯದ ಬಗ್ಗೆ ನಿಖರ ಮಾಹಿತಿ ನೀಡುತ್ತದೆ. ಅಲ್ಲದೇ ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುವಂತೆ ಅಲರ್ಟ್ ಸಂದೇಶ ನೀಡುತ್ತದಂತೆ. ಹೀಗಾಗಿ ಈ ವಾಚ್ ನೀಡುವ ತುರ್ತು ಮಾಹಿತಿ ಪಡೆದುಕೊಂಡು ಅನೇಕರು ತಮ್ಮ ಜೀವ ಉಳಿಸಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಕ್ಯುಪರ್ಟಿನೊ-ಆಧಾರಿತ ಈ ಸ್ಮಾರ್ಟ್ ವಾಚ್ ಅನಿಯಮಿತ ಹೃದಯ ಬಡಿತ, ರಕ್ತಸಂಚಾರ, ಬಿಪಿ-ಶುಗರ್ ಸೇರಿದಂತೆ ಅನೇಕ ಆರೋಗ್ಯದ ಮಾಹಿತಿಯನ್ನು ನಿಖರವಾಗಿ ನೀಡುತ್ತದೆ. ಈ ಹಿಂದೆ ತುರ್ತು ಸಂದರ್ಭಗಳಲ್ಲಿ ವ್ಯಕ್ತಿಗಳ ಜೀವ ಉಳಿಸಿ ಸುದ್ದಿಯಲ್ಲಿರುತ್ತಿದ್ದ ಈ ಆ್ಯಪಲ್ ವಾಚ್ ತುಂಬಾ ಬಿಸಿಯಾಗಿ ಬಾಂಬ್‍ನಂತೆ ಸ್ಫೋಟಗೊಂಡಿದ್ದು, ವ್ಯಕ್ತಿಯೊಬ್ಬನನ್ನು ಆಸ್ಪತ್ರೆಗೆ ಕಳುಹಿಸಿದೆ.


ಇದನ್ನೂ ಓದಿ: ನಿಮ್ಮ ಮಕ್ಕಳ ವಾಟ್ಸಾಪ್ ಚಾಟ್ ನಿಮ್ಮ ಫೋನ್ ನಲ್ಲಿಯೂ ಕಾಣಿಸಬೇಕಾದರೆ ಈ ಸಿಂಪಲ್ ಟ್ರಿಕ್ ಬಳಸಿ


ಇದ್ದಕ್ಕಿದ್ದಂತೆ ಬಿಸಿಯಾದ ಆ್ಯಪಲ್ ವಾಚ್ ಸರಣಿ 7


ವ್ಯಕ್ತಿಯೊಬ್ಬರು ಇತ್ತೀಚೆಗಷ್ಟೇ ಆ್ಯಪಲ್ ವಾಚ್ ಸರಣಿ 7ಅನ್ನು ಖರೀದಿಸಿದ್ದರು. ಅದನ್ನು ಧರಿಸಿದ್ದ ಅವರಿಗೆ ವಾಚ್ ಇದ್ದಕ್ಕಿದ್ದಂತೆ ಬಿಸಿಯಾದ ಅನುಭವವಾಗಿದೆ. ಈ ಬಗ್ಗೆ ಅವರು ಆ್ಯಪಲ್ ಕಂಪನಿಗೆ ಮಾಹಿತಿ ನೀಡಿದ್ದಾರೆ. ವಾಚ್ ಎಂದಿಗಿಂತಲೂ ಬಿಸಿಯಾಗುತ್ತಿದೆ ಅಂತಾ ಹೇಳಿದ್ದಾರೆ. ನಂತರ ಈ ಸಾಧನದ ಹಿಂಭಾಗವೂ ಬಿರುಕು ಬಿಟ್ಟಿರುವುದನ್ನು ಗಮನಕ್ಕೆ ತಂದಿದ್ದಾರೆ. ಇದಲ್ಲದೆ ಹೆಚ್ಚಿನ ತಾಪಮಾನದಿಂದ ವಾಚ್‍ನ ಒಎಸ್ ಅಂದರೆ ಆಪರೇಟಿಂಗ್ ಸಿಸ್ಟಂ ಸ್ಥಗಿತಗೊಳಿಸುವ ಎಚ್ಚರಿಕೆ ಸಂದೇಶ ಬರುತ್ತಿರುವುದನ್ನು ಗಮನಿಸಿದ್ದಾರೆ.   


ಬಾಂಬ್‍ನಂತೆ ಸ್ಫೋಟಗೊಂಡ ವಾಚ್


ಆ್ಯಪಲ್ ವಾಚ್ ಇದ್ದಕ್ಕಿದ್ದಂತೆಯೇ ಬಿಸಿಯಾಗುತ್ತಿದೆ ಅಂತಾ ಬಳಕೆದಾರರು ಚಿಂತಿತರಾದರೂ ಕಂಪನಿ ಏನೇನೋ ಸಬೂಬು ಹೇಳಿ ಕಳುಹಿಸಿದ್ದಾರೆ. ಆದರೆ ಕೆಲ ದಿನ ಕಳೆದರೂ ವಾಚ್‍ನ ಸಮಸ್ಯೆ ಸರಿಹೋಗಿರಲಿಲ್ಲ. ಈ ಬಗ್ಗೆ ಮತ್ತೆ ಬಳಕೆದಾರ ಆ್ಯಪಲ್ ಕಸ್ಟಮರ್ ಕೇರ್‍ಗೆ ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಈ ವೇಳೆ ಯಾವುದೇ ಕಾರಣಕ್ಕೂ ವಾಚ್ ಬಳಸದಂತೆ ಬಳಕೆದಾರರಿಗೆ ಸಲಹೆ ನೀಡಿದ್ದಾರೆ. ಮರುದಿನ ಬೆಳಗ್ಗೆ ಇದ್ದಕ್ಕಿದಂತೆಯೇ ಸಾಧನವು ಹೆಚ್ಚು ಬಿಸಿಯಾಗಿ ಅದರ ಗಾಜು ಒಡೆದಿದೆ.


ಇದನ್ನೂ ಓದಿ: Free 5G Sim Card : 'ಉಚಿತ 5G ಸಿಮ್ ಕಾರ್ಡ್' : ಅದು ಕೂಡ ಉಚಿತ ಹೋಮ್ ಡೆಲಿವರಿ!


ಈ ವೇಳೆ ಬಳಕೆದಾರ ತನ್ನ ಕೈನಲ್ಲಿದ್ದ ವಾಚ್‍ನ ಫೋಟೋ ತೆಗೆದುಕೊಳ್ಳಲು ಹೋಗಿದ್ದಾರೆ. ಇದ್ದಕ್ಕಿದ್ದಂತೆಯೇ ವಾಚ್‍ನಿಂದ ಕ್ರ್ಯಾಕ್ಕಿಂಗ್ ಸೌಂಡ್ ಬಂದಿದೆ. ಇದರಿಂದ ಹೆದರಿದ ಆ ವ್ಯಕ್ತಿ ತನ್ನ ಕೈಯಲ್ಲಿದ್ದ ವಾಚ್‍ ಅನ್ನು ಬಿಚ್ಚಲು ಪ್ರಯತ್ನಿಸಿದ್ದಾರೆ. ಆದರೆ ವಾಚ್‍ ಬಾಂಬ್‍ನಂತೆ ಸ್ಫೋಟಗೊಂಡಿದೆ. ಪರಿಣಾಮ ಬಳಕೆದಾರರ ಕೈಗೆ ಸುಟ್ಟ ಗಾಯಗಳಾಗಿದ್ದು, ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ  ಆ್ಯಪಲ್ ಕಂಪನಿ, ‘ಈ ಪ್ರಕರಣಕ್ಕೆ ನಾವು ಹೆಚ್ಚಿನ ಆದ್ಯತೆ ನೀಡುತ್ತೇವೆ. ಈ ಬಗ್ಗೆ ತನಿಖೆ ನಡೆಸಿ ಬಳಕೆದಾರರಿಗೆ ಸೂಕ್ತ ಪರಿಹಾರ ನೀಡಲಾಗುವುದು’ ಅಂತಾ ಹೇಳಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.