Apple Watch Ultra Replica: ಆಪಲ್ ವಾಚ್ ಅಲ್ಟ್ರಾಗೆ ಮಾರುಕಟ್ಟೆಯಲ್ಲಿ ಅಪಾರ ಬೇಡಿಕೆ ಇದೆ, ಆದರೆ, ಮಾರುಕಟ್ಟೆಯಲ್ಲಿ ಈ ವಾಚ್ ಬೆಲೆ ಸುಮಾರು ಒಂದು ಲಕ್ಷ ರೂಪಾಯಿಗಳಗಿರುವ ಕಾರಣ ಜನರು ಅದನ್ನು ಖರೀದಿಸಲು ಹಿಂದೇಟು ಹಾಕುತ್ತಾರೆ. ಇಂತಹ ದುಬಾರಿ ಸ್ಮಾರ್ಟ್ ವಾಚ್ ಖರೀದಿಸುವುದು ಪ್ರತಿಯೊಬ್ಬರ ಬಜೆಟ್‌ ಮಾತಾಗಿರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಜನರು ಲೋವರ್ ಮಾಡೆಲ್ ವಾಚ್ ಖರೀದಿಸಲು ತಮ್ಮ ಬಜೆಟ್ ಅನ್ನು ಹೊಂದಿಸುತ್ತಾರೆ. ಆದರೆ ಈ ಸ್ಮಾರ್ಟ್ ವಾಚ್ ಬೆಲೆ ಎರಡೂವರೆ ಸಾವಿರ ರೂಪಾಯಿಗಳಾದರೆ ಹೇಗೆ? ವಾಸ್ತವದಲ್ಲಿ ಜನರು ಈ ಸ್ಮಾರ್ಟ್ ವಾಚ್ ಅನ್ನು ಕೇವಲ ₹2500 ಕ್ಕೆ ಖರೀದಿಸಬಹುದಾದ ಒಂದು ಜಾಗವಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Jio Fiber: ಮಾರುಕಟ್ಟೆಯಲ್ಲಿ ಭಾರಿ ಭಾರಿ ಹಲ್ ಚಲ್ ಸೃಷ್ಟಿಸಿದೆ ಜಿಯೋ ಫೈಬರ್ನ ಈ ಅಗ್ಗದ ಪ್ಲಾನ್


ಅಗ್ಗದ ಆಪಲ್ ವಾಚ್ ಅಲ್ಟ್ರಾವನ್ನು ನೀವು ಎಲ್ಲಿ ಪಡೆಯಬಹುದು?
ಆಪಲ್ ವಾಚ್ ಅಲ್ಟ್ರಾ ಇಷ್ಟೊಂದು ಅಗ್ಗದ ದರದಲ್ಲಿ ಸಿಗಲು ಹೇಗೆ ಸಾಧ್ಯ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿಯೂ ಮೂಡಿರಬಹುದು. ಏಕೆಂದರೆ ಈ ವಾಚ್ ನ ನಿಜವಾದ ಬೆಲೆ 89,900 ರೂ. ಹೀಗಿರುವಾಗ ಅದನ್ನು ಗ್ರಾಹಕರಿಗೆ ಕೇವಲ 2,500 ರೂ.ಗೆ ಮಾರಾಟ ಮಾಡಲು ಹೇಗೆ ಸಾಧ್ಯ?  ಈ ಪ್ರಶ್ನೆಯು ನಿಮ್ಮ ಮನಸ್ಸಿನಲ್ಲಿಯೂ ಅಲೆದಾಡುತ್ತಿದ್ದರೆ, ಕೇಳಿ ಮಾರಾಟವಾಗುತ್ತಿರುವ ವಾಚ್ ಅಲ್ಟ್ರಾ ಮಾದರಿಯು ನಿಜವಾಗಿ ನಕಲಿಯಾಗಿದೆ ಅಥವಾ ಅದನ್ನು ಪ್ರತಿಕೃತಿ ಮಾಡೆಲ್ ಎಂದೂ ನೀವು ಕರೆಯಬಹುದು ಮತ್ತು ಇದನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯವಾದ ವಿಷಯ. ವಾಸ್ತವದಲ್ಲಿ ಇದು ವಾಚ್ ಅಲ್ಟ್ರಾವನ್ನು ಹೋಲುತ್ತದೆ, ಆದರೆ ಅದರ ವೈಶಿಷ್ಟ್ಯಗಳು ಮೂಲ ವಾಚ್‌ಗಿಂತ ಸಾಕಷ್ಟು ಭಿನ್ನವಾಗಿವೆ. ಬಹುಶಃ ನಿಮಗೆ ವಿನ್ಯಾಸದಲ್ಲಿ ಹೆಚ್ಚಿನ ವ್ಯತ್ಯಾಸವನ್ನು ಕಂಡು  ಬರುವುದು ಸ್ವಲ್ಪ ವಿರಳವೇ ಸರಿ.


ಇದನ್ನೂ ಓದಿ-ಅತ್ಯಂತ ಕಡಿಮೆ ಬೆಲೆಗೆ ಖರೀದಿಸಿ iPhone 14! ಮಿಸ್‌ ಮಾಡದಿರಿ ಈ ಚಾನ್ಸ್‌

ಈ ಸ್ಮಾರ್ಟ್ ವಾಚ್ ಎಲ್ಲಿ ಲಭ್ಯವಿದೆ
ಜನರು ತಮ್ಮ ಉತ್ಪನ್ನಗಳನ್ನು ತಂದು ಮಾರಾಟ ಮಾಡುವ ಮಾರುಕಟ್ಟೆಯೊಂದು ಫೇಸ್ ಬುಕ್ ನಲ್ಲಿದೆ.  ಈ ಮಾರುಕಟ್ಟೆಯಲ್ಲಿ ನಕಲಿ ವಾಚ್ ಅಲ್ಟ್ರಾ ಕೂಡ ಮಾರಾಟವಾಗುತ್ತಿದೆ. ಸ್ಮಾರ್ಟ್ ಅಲ್ಟ್ರಾ ವಾಚ್ ಬೆಲೆಯನ್ನು ₹ 2500 ಕ್ಕೆ ಇರಿಸಲಾಗಿದೆ ಮತ್ತು ಜನರು ಅದನ್ನು ಖರೀದಿಸಲು ಮುಗಿಬಿದ್ದಿದ್ದಾರೆ. ಇದೊಂದು ಸಂಪೂರ್ಣವಾಗಿ ನಕಲಿ ವಾಚ್ ಆಗಿದೆ ಮತ್ತು ಕಡಿಮೆ ಹಣವನ್ನು ವೆಚ್ಚ ಮಾಡಿ ನಿಮಗೆ ಒರಿಜಿನಲ್ ಸ್ಮಾರ್ಟ್ ವಾಚ್ ಸಿಗುತ್ತದೆ ಎಂದು ನೀವು ಯೋಚಿಸುತ್ತಿದ್ದರೆ, ಅದು ನಿಮ್ಮ ತಪ್ಪು ಕಲ್ಪನೆ. ಏಕೆಂದರೆ ಈ ಸ್ಮಾರ್ಟ್ ವಾಚ್ ಸಂಪೂರ್ಣವಾಗಿ ಕೇವಲ ಒಂದು ಮಾದರಿಯಾಗಿದೆ, ಒಂದು ವೇಳೆ ಅದನ್ನು ನೀವು ಖರೀದಿಸಿದರೆ,  ವಾಚ್ ಅಲ್ಟ್ರಾಜ್‌ನ ಯಾವುದೇ ವೈಶಿಷ್ಟ್ಯವನ್ನು ಅದು ಹೊಂದಿಲ್ಲ ಎಂಬುದನ್ನು ತಿಳಿದು ನಿಮಗೆ ನಿರಾಶೆಯಾಗಬಹುದು. ಕಡಿಮೆ ಬೆಲೆಯ ಕಾರಣ ಜನರು ಇದನ್ನು ಹೆಚ್ಚು ಖರೀದಿಸುತ್ತಿದ್ದಾರೆ. ಆದರೆ ನೀವು ಇದನ್ನು ಮಾಡುವುದನ್ನು ತಪ್ಪಿಸುವುದು ಒಳಿತು, ಏಕೆಂದರೆ ಇದು ನಕಲಿ ಅಂತ ಗೊತ್ತಿಲ್ಲದ ಜನರು ಮಾತ್ರ ಅದನ್ನು ಖರೀದಿಸುತ್ತಿದ್ದಾರೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.