Jio 5G Plans: ಅಗ್ಗದ ದರದಲ್ಲಿ ಹೆಚ್ಚಿನ ಪ್ರಯೋಜನಗಳನ್ನು ನೀಡಲು ಹೆಸರುವಾಸಿ ಆಗಿರುವ ರಿಲಯನ್ಸ್ ಜಿಯೋ ಇದೀಗ ತನ್ನ ಬಹುನಿರೀಕ್ಷಿತ 5ಜಿ ಸೇವೆಗಳನ್ನು ದುಬಾರಿಗೊಳಿಸಲಿದೆ ಎಂಬ ಚರ್ಚೆ ಬಲು ಜೋರಾಗಿಯೇ ಇದೆ. ಆದರಿದು ಸತ್ಯವೇ? ಈ ಬಗ್ಗೆ ಜಿಯೋ ಕಂಪನಿ ಹೇಳಿದ್ದೇನು ಎಂದು ತಿಳಿಯೋಣ... 


COMMERCIAL BREAK
SCROLL TO CONTINUE READING

ಭಾರತೀಯ ಪ್ರಸಿದ್ದ ಟೆಲಿಕಾಂ ಕಂಪನಿಗಳು ತನ್ನ 5G ಟ್ಯಾರಿಫ್ ಯೋಜನೆಗಳ ಬೆಲೆಗಳನ್ನು ಹೆಚ್ಚಿಸಲು ಯೋಜಿಸುತ್ತಿವೆ. ಈ ಮಧ್ಯೆ, ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೆಲ್ ಎರಡೂ ಕೂಡ 5ಜಿ ಯೋಜನೆಗಳ ಬೆಳೆಯನ್ನು ಹೆಚ್ಚಿಸಲಿವೆ  ಎಂಬ ಮಾತು ಕೇಳಿಬರುತ್ತಿದೆ.


ಇದನ್ನೂ ಓದಿ- Whatsapp Channel ಸಂದೇಶಗಳನ್ನು ನೀವು ಇನ್ಮುಂದೆ ಎಡಿಟ್ ಮಾಡಬಹುದು!


ಈ ಬಗ್ಗೆ ಮಾಹಿತಿ ನೀಡಿರುವ, ರಿಲಯನ್ಸ್ ಜಿಯೋ 5ಜಿ ಯೋಜನೆಗಳ ಸುಂಕವನ್ನು ಹೆಚ್ಚಿಸುವ ಯಾವುದೇ ಯೋಜನೆ ಪ್ರಸ್ತುತ ನಮ್ಮ ಮುಂದೆ ಇಲ್ಲ. ನಮ್ಮ ಮುಖ್ಯ ಗಮನವು ಬಳಕೆದಾರರಿಗೆ ಕೈಗೆಟುಕುವ ಬೆಲೆಯಲ್ಲಿ ಅತ್ಯುತ್ತಮ ಸೇವೆಯನ್ನು ಒದಗಿಸುವುದಾಗಿದೆ ಎಂದು  ಮುಖೇಶ್ ಅಂಬಾನಿ ನೇತೃತ್ವದ ಕಂಪನಿ ಸ್ಪಷ್ಟಪಡಿಸಿದೆ.


ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಜಿಯೋ ಅಧ್ಯಕ್ಷ ಮ್ಯಾಥ್ಯೂ ಉಮ್ಮನ್, ಕೈಗೆಟುಕುವ ಬೆಲೆಯಲ್ಲಿ ಹೆಚ್ಚಿನ ಪ್ರಯೋಜನಗಳನ್ನು ನೀಡುವ ಮೂಲಕ ಜಿಯೋ ಮಾರುಕಟ್ಟೆಯಲ್ಲಿ ಉಳಿಯಲು ಬಯಸುತ್ತದೆ. ಇದರಿಂದಾಗಿ ಹೆಚ್ಚು ಹೆಚ್ಚು ಬಳಕೆದಾರರು ನಮ್ಮ ನೆಟ್‌ವರ್ಕ್‌ನ್ನು ಬೆಂಬಲಿಸುತ್ತಾರೆ ಎಂದು ತಿಳಿಸಿದ್ದಾರೆ. 


ಇದನ್ನೂ ಓದಿ- ಇನ್ಮುಂದೆ ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಮ್ ಮೇಲೆ ನಿಮಗೆ ಜಾಹೀರಾತುಗಳು ಕಾಣಿಸುವುದಿಲ್ಲ!


ಸರಳವಾಗಿ ಹೇಳುವುದಾದರೆ, ರಿಲಯನ್ಸ್ ಜಿಯೋ ತನ್ನ ದರಗಳನ್ನು ಗಣನೀಯವಾಗಿ ಹೆಚ್ಚಿಸುವುದಿಲ್ಲ. ಬದಲಾಗಿ, ಜನರು ಡೇಟಾ-ಇಂಟೆನ್ಸಿವ್ ಇಂಟರ್ನೆಟ್ ಯೋಜನೆಗಳಿಗೆ ಪರಿವರ್ತನೆಯಾಗುತ್ತಿದ್ದಂತೆ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ಇದು ಗಮನಹರಿಸುತ್ತದೆ.  ಈ ತಂತ್ರವು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮತ್ತು ಜಿಯೋ ಅಧ್ಯಕ್ಷ ಆಕಾಶ್ ಅಂಬಾನಿ ಅವರ ದೃಷ್ಟಿಗೆ ಹೊಂದಿಕೆಯಾಗುತ್ತದೆ ಎಂದು ಜಿಯೋ ಅಧ್ಯಕ್ಷರಾದ ಮ್ಯಾಥ್ಯೂ ಉಮ್ಮನ್ ಮಾಹಿತಿ ಹಂಚಿಕೊಂಡಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.