Network Boosting: ಸಾಮಾನ್ಯವಾಗಿ ಕೆಲವು ಪ್ರದೇಶಗಳಲ್ಲಿ ನೆಟ್‌ವರ್ಕ್  ಸಮಸ್ಯೆ ಇರುತ್ತದೆ. ನೆಟ್‌ವರ್ಕ್ ಸಮಸ್ಯೆ ಇದ್ದಾಗ ಇಂಟರ್ನೆಟ್ ಬಳಸಲು ಕೂಡ ಸಾಧ್ಯವಾಗುವುದಿಲ್ಲ. ಈ ರೀತಿ ಪದೇ ಪದೇ ಕಾಡುವ ನೆಟ್‌ವರ್ಕ್ ಸಮಸ್ಯೆಯಿಂದ ಕೆಲವು ಪ್ರಮುಖ ಕೆಲಸಗಳಲ್ಲಿ ಅಡೆತಡೆ ಉಂಟಾಗುವುದಂತೂ ಸುಳ್ಳಲ್ಲ. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ, ನಿಮ್ಮ ಫೋನ್‌ನ ಸಿಮ್ ಕಾರ್ಡ್‌ನ ಸೆಟ್ಟಿಂಗ್‌ಗಳನ್ನು ಬದಲಾಯಿಸುವ ಮೂಲಕ ಈ ಸಮಸ್ಯೆಯಿಂದ ಸುಲಭ ಪರಿಹಾರ ಪಡೆಯಬಹುದು. 


COMMERCIAL BREAK
SCROLL TO CONTINUE READING

ಸ್ಮಾರ್ಟ್‌ಫೋನ್ ನೆಟ್‌ವರ್ಕ್ ಸಮಸ್ಯೆ ಪರಿಹಾರಿಸಲು ಮತ್ತು ಇಂಟರ್ನೆಟ್ ವೇಗ ಹೆಚ್ಚಿಸಲು ಈ ಸುಲಭ ಟ್ರಿಕ್ ಟ್ರೈ ಮಾಡಿ: 
* ಸಿಮ್ ಕಾರ್ಡ್ ಸ್ಲಾಟ್‌:

ಸ್ಮಾರ್ಟ್‌ಫೋನ್ ನೆಟ್‌ವರ್ಕ್ ಸಮಸ್ಯೆಗೆ ನಿಮ್ಮ ಸಿಮ್ ಕಾರ್ಡ್ ಕೂಡ ಕಾರಣವಿರಬಹುದು. ಹಾಗಾಗಿ, ಮೊದಲು ನಿಮ್ಮ ಸಿಮ್ ಕಾರ್ಡ್‌ನಲ್ಲಿ ಯಾವುದೇ ರೀತಿಯ ಬಿರುಕುಗಳಿವೆಯೇ? ಸಿಮ್ ಕಾರ್ಡ್ ಸ್ಲಾಟ್‌ನಲ್ಲಿ ಸರಿಯಾಗಿ ಹೊಂದಿಕೊಳ್ಳುತ್ತದೆಯೇ ಎಂಬುದನ್ನೂ ಮೊದಲು ಖಚಿತಪಡಿಸಿಕೊಳ್ಳಿ.  ಸಿಮ್ ಕಾರ್ಡ್ ಸ್ಲಾಟ್‌ನಲ್ಲಿ ಸರಿಯಾಗಿ ಫಿಟ್ ಆದರೆ ಮಾತ್ರವೇ ನೆಟ್‌ವರ್ಕ್ ಲಭ್ಯವಾಗುತ್ತದೆ. 


* ಎರಡನೇ ಸ್ಲಾಟ್‌ನಲ್ಲಿ ಸಿಮ್ ಕಾರ್ಡ್: 
ಇತ್ತೀಚಿನ ದಿನಗಳಲ್ಲಿ ಚಿಕ್ಕ ಕೀ ಪ್ಯಾಡ್ ಫೋನ್ ಇರಲಿ, ಇಲ್ಲವೇ ಸ್ಮಾರ್ಟ್‌ಫೋನ್ ಇರಲಿ ಎಲ್ಲದರಲ್ಲೂ ಎರಡು ಸಿಮ್ ಸ್ಲಾಟ್ ಇದ್ದೇ ಇರುತ್ತದೆ. ನಿಮ್ಮ ಫೋನ್ ನೆಟ್‌ವರ್ಕ್ ಸರಿಯಿಲ್ಲದಿದ್ದಾಗ ಸಿಮ್ ಸ್ಲಾಟ್ ಬದಲಾಯಿಸಿ. 


ಇದನ್ನೂ ಓದಿ- ಬದಲಾಗಲಿದೆ ಸಿಮ್ ಕಾರ್ಡ್‌ನ ನಿಯಮ: ಈ ಕೆಲಸ ಮಾಡದಿದ್ರೆ ಬೀಳುತ್ತೇ 10 ಲಕ್ಷ ರೂ. ದಂಡ


* ಸಿಮ್ ಕಾರ್ಡ್ ಸ್ಲಾಟ್ ಸ್ವಚ್ಛಗೊಳಿಸಿ: 
ನೀವು ಸಿಮ್ ಕಾರ್ಡ್ ಅನ್ನು ಸ್ಲಾಟ್ ನಲ್ಲಿ ಸೇರಿಸುವ ಮೊದಲು, ಸಿಮ್ ಸ್ಲಾಟ್ ಅನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು. ಏಕೆಂದರೆ ಕೆಲವೊಮ್ಮೆ ಸಿಮ್ ಸ್ಲಾಟ್ ನಲ್ಲಿ ಕೊಳೆ ಶೇಖರಣೆ ಆದಾಗಲ್ಲೂ ಸಿಮ್ ಸರಿಯಾಗಿ ಫಿಟ್ ಆಗುವುದಿಲ್ಲ. ಸಿಮ್ ಫಿಟ್ ಆಗಿ ಕೂರದಿದ್ದಾಗ ನೆಟ್‌ವರ್ಕ್ ಸಮಸ್ಯೆಯೂ ಕಾಡುತ್ತದೆ. 


ಇದನ್ನೂ ಓದಿ- ಶೀಘ್ರದಲ್ಲಿ ಕಣ್ಮರೆಯಾಗಲಿದೆ ವಾಟ್ಸ್ ಆಪ್, ಇದುವರೆಗಿನ ಅತಿ ದೊಡ್ಡ ಬದಲಾವಣೆಗೆ ರೇಡಿಯಾಗಿ!


* ಪ್ರಾಥಮಿಕ ಸಿಮ್ ಸ್ಲಾಟ್‌: 
ನೀವು ಯಾವ ಸಿಮ್ ಅನ್ನು ಇಂಟರ್ನೆಟ್ ಗಾಗಿ ಬಳಸುತ್ತೀರೋ ಆ ಸಿಮ್ ಅನ್ನು ಪ್ರಾಥಮಿಕ ಸಿಮ್ ಸ್ಲಾಟ್‌ನಲ್ಲಿ ಹೊಂದಿಸಿ. ಇದರಿಂದ ನೀವು ಇಂಟರ್ನೆಟ್ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ಗಮನಾರ್ಹವಾಗಿ, ಯಾವುದೇ  ಸ್ಮಾರ್ಟ್‌ಫೋನ್‌ನಲ್ಲಿ ಸಿಮ್ ಕಾರ್ಡ್ ಅನ್ನು ಎರಡನೇ ಸ್ಲಾಟ್‌ನಲ್ಲಿ ಸೇರಿಸಿದರೆ ಇಂಟರ್ನೆಟ್ ಸ್ವಯಂಚಾಲಿತವಾಗಿ ನಿಧಾನವಾಗುತ್ತದೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.