Police Investigation : ಕೃತಕ ಬುದ್ಧಿಮತ್ತೆಯನ್ನು (ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಅಥವಾ ಎಐ) ಭಾರತೀಯ ಪೊಲೀಸ್ ಇಲಾಖೆ ಅಪರಾಧ ಅಪರಾಧ ಮುನ್ಸೂಚನೆ, ಮುಖದ ಗುರುತಿಸುವಿಕೆ (ಫೇಶಿಯಲ್ ರೆಕಗ್ನಿಶನ್), ಹಾಗೂ ವಿಧಿವಿಜ್ಞಾನ ವಿಶ್ಲೇಷಣೆ ಸೇರಿದಂತೆ ವಿವಿಧ ಹಂತಗಳಲ್ಲಿ ಪ್ರಯೋಗಿಸುತ್ತಾ ಬಂದಿದೆ.


COMMERCIAL BREAK
SCROLL TO CONTINUE READING

ಭಾರತೀಯ ಪೊಲೀಸ್ ಇಲಾಖೆ ಅಪರಾಧ ಮುನ್ಸೂಚನೆ ಪಡೆಯುವಲ್ಲಿ ಕೃತಕ ಬುದ್ಧಿಮತ್ತೆಯನ್ನು ಪ್ರಮುಖವಾಗಿ ಬಳಸುತ್ತಿದೆ. ಎಐ ಆಧಾರಿತವಾದ ವ್ಯವಸ್ಥೆಗಳು ಅಪರಾಧ ವರದಿ, ಸಾಮಾಜಿಕ ಜಾಲತಾಣ, ಹವಾಮಾನ ಮಾದರಿಗಳು, ಸೇರಿದಂತೆ ಬೃಹತ್ ಪ್ರಮಾಣದ ಮಾಹಿತಿಗಳನ್ನು ಅಧ್ಯಯನ ಮಾಡಿ, ಸಂಭಾವ್ಯ ಅಪರಾಧ ಚಟುವಟಿಕೆಗಳ ಕುರಿತ ಮಾಹಿತಿ ನೀಡಬಲ್ಲವು. ಈ ರೀತಿ ಕಲೆಹಾಕಿದ ಮಾಹಿತಿಗಳನ್ನು ಬಳಿಕ ಪೊಲೀಸ್ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ನಿಯೋಜಿಸಿ, ಅಪರಾಧ ದರವನ್ನು ಕಡಿಮೆಗೊಳಿಸಲು ಸಾಧ್ಯವಾಗುತ್ತದೆ. ಉದಾಹರಣೆಗೆ, ಬೆಂಗಳೂರು ನಗರದಲ್ಲಿ ಪೊಲೀಸ್ ಇಲಾಖೆ ಎಐ ಆಧಾರಿತ ವ್ಯವಸ್ಥೆಯೊಂದನ್ನು ಅಭಿವೃದ್ಧಿ ಪಡಿಸಿದ್ದು, ಅದು ನಗರದ ಬೇರೆ ಬೇರೆ ಪ್ರದೇಶಗಳಲ್ಲಿ ನಡೆಯಬಹುದು ನಿರ್ದಿಷ್ಟ ಮಾದರಿಯ ಅಪರಾಧವನ್ನು ಊಹಿಸುತ್ತದೆ.


ಇದನ್ನೂ ಓದಿ : Geyser Safety Tips: ಎಚ್ಚರ.! ನೀವು ಮಾಡುವ ಈ ತಪ್ಪಿನಿಂದ ಗೀಸರ್ ಟೈಮ್ ಬಾಂಬ್‌ನಂತೆ ಸ್ಫೋಟಗೊಳ್ಳುತ್ತೆ


ಪೊಲೀಸ್ ಇಲಾಖೆ ಪ್ರಮುಖವಾಗಿ ಕೃತಕ ಬುದ್ಧಿಮತ್ತೆಯನ್ನು ಉಪಯೋಗಿಸುವ ಇನ್ನೊಂದು ಕ್ಷೇತ್ರವೆಂದರೆ ಮುಖದ ಗುರುತಿಸುವಿಕೆ ಅಥವಾ ಫೇಶಿಯಲ್ ರೆಕಗ್ನಿಷನ್. ಈ ತಂತ್ರಜ್ಞಾನವನ್ನು ಬಳಸಿ, ಡಿಜಿಟಲ್ ಛಾಯಾಚಿತ್ರಗಳು ಮತ್ತು ವೀಡಿಯೋ ದೃಶ್ಯಾವಳಿಗಳಿಂದ ಮುಖವನ್ನು ಗುರುತಿಸಲು ಸಾಧ್ಯವಾಗುತ್ತದೆ. ಇದನ್ನು ಭದ್ರತೆಯನ್ನು ಹೆಚ್ಚಿಸಲು, ಸಿಸಿಟಿವಿ ದೃಶ್ಯಾವಳಿಗಳಿಂದ ಶಂಕಿತರನ್ನು ಗುರುತಿಸಲು, ಹಾಗೂ ಕಳೆದುಹೋಗಿರುವ ವ್ಯಕ್ತಿಗಳನ್ನು ಗುರುತಿಸಲು ಬಳಸಲಾಗುತ್ತದೆ. ದೆಹಲಿ ಪೊಲೀಸರು ಅಭಿವೃದ್ಧಿ ಪಡಿಸಿರುವ ಎಐ ಆಧಾರಿತ ಮುಖ ಗುರುತಿಸುವ ತಂತ್ರಜ್ಞಾನ ಶಂಕಿತರ ಫೋಟೋಗಳನ್ನು ಕ್ರಿಮಿನಲ್ ದಾಖಲಾತಿಯ ಡೇಟಾಬೇಸ್ ಜೊತೆ ಹೊಂದಿಸಿ, ಯಾರ ಜೊತೆಗಾದರೂ ಈ ಮುಖ ಹೊಂದಿಕೆಯಾಗುತ್ತದೆಯೇ ಎಂದು ಪರಿಶೀಲಿಸುತ್ತದೆ.


ಎಐ ಈಗ ವಿಧಿವಿಜ್ಞಾನ (ಫೊರೆನ್ಸಿಕ್) ವಿಶ್ಲೇಷಣೆಗಳಲ್ಲೂ ಬಳಕೆಯಾಗುತ್ತಿದೆ. ಎಐ ಆಧಾರಿತ ಸಿಸ್ಟಮ್‌ಗಳು ಡಿಜಿಟಲ್ ಸಾಕ್ಷಿಗಳಾದ ಫೋಟೋಗಳು, ವೀಡಿಯೋಗಳು, ಹಾಗೂ ಧ್ವನಿಮುದ್ರಣಗಳನ್ನು ವಿಶ್ಲೇಷಿಸಿ, ಅಪರಾಧ ಮಾದರಿಗಳನ್ನು ಗುರುತಿಸಿ, ಸೂಕ್ತ ಮಾಹಿತಿಗಳನ್ನು ಹೊರತೆಗೆಯಬಲ್ಲದು. ಉದಾಹರಣೆಗೆ, ಮುಂಬೈ ನಗರದಲ್ಲಿ ಪೊಲೀಸ್ ಇಲಾಖೆ ಎಐ ಆಧಾರಿತ ವ್ಯವಸ್ಥೆಯೊಂದನ್ನು ಅಭಿವೃದ್ಧಿ ಪಡಿಸಿದ್ದು, ಅದು ಧ್ವನಿ ಮುದ್ರಣವನ್ನು ವಿಶ್ಲೇಷಿಸಿ, ಗುಂಡಿನ ದಾಳಿಯ ಧ್ವನಿಯ ಆಧಾರದಲ್ಲಿ, ದಾಳಿ ನಡೆಸಿರುವುದು ಯಾವ ಮಾದರಿಯ ಆಯುಧ ಎಂಬುದನ್ನೂ ಗುರುತಿಸಬಲ್ಲದು.


ಎಐಯನ್ನು ಪೊಲೀಸ್ ಇಲಾಖೆಯ ದಕ್ಷತೆಯನ್ನು ಹೆಚ್ಚಿಸಲು ಮತ್ತು ಖರ್ಚನ್ನು ಕಡಿಮೆಗೊಳಿಸುವ ಉದ್ದೇಶದಿಂದ ಬಳಸಲಾಗುತ್ತಿದೆ. ಎಐ ಆಧಾರಿತ ವ್ಯವಸ್ಥೆಗಳನ್ನು ದಾಖಲೆಗಳ ಪ್ರಕ್ರಿಯೆ, ಡೇಟಾ ಎಂಟ್ರಿ ಇತ್ಯಾದಿ ಪುನರಾವರ್ತಿತವಾಗುವ ಕಾರ್ಯಗಳನ್ನು ನಿರ್ವಹಿಸಲು ಬಳಸಬಹುದಾಗಿದೆ. ಆ ಮೂಲಕ ಪೊಲೀಸರ ಮೇಲಿನ ಹೆಚ್ಚಿನ ಕೆಲಸದ ಒತ್ತಡವನ್ನು ಕಡಿಮೆಗೊಳಿಸಬಹುದು.


ಆದರೂ ಭಾರತೀಯ ಪೊಲೀಸ್ ಇಲಾಖೆಯಲ್ಲಿ ಎಐ ಬಳಸುವ ವಿಚಾರದಲ್ಲಿ ಒಂದಷ್ಟು ಕಳವಳದ ಅಂಶಗಳೂ ಇವೆ. ಅವುಗಳಲ್ಲಿ ಪ್ರಮುಖವಾದುದೆಂದರೆ ಎಐಯನ್ನು ತೊಂದರೆಯಾಗುವ ರೀತಿಯಲ್ಲಿ ಅಥವಾ ನೈತಿಕವಲ್ಲದ ರೀತಿಯಲ್ಲಿ ಬಳಸುವುದು. ಉದಾಹರಣೆಗೆ, ಕಣ್ಗಾವಲು ಮತ್ತು ಮೇಲ್ವಿಚಾರಣೆ ಪ್ರಕ್ರಿಯೆಯಲ್ಲಿ ಎಐ ಬಳಸುವುದರಿಂದ ಖಾಸಗಿತನ ಮತ್ತು ನಾಗರಿಕ ಸ್ವಾತಂತ್ರ್ಯಗಳ ಮೇಲೆ ಅಡ್ಡ ಪರಿಣಾಮ ಉಂಟಾಗುವ ಸಾಧ್ಯತೆಗಳಿವೆ. ಒಂದು ವೇಳೆ ಎಐ ವ್ಯವಸ್ಥೆಯನ್ನು ತರಬೇತಿಗೊಳಿಸುವ ಮಾಹಿತಿ ಏನಾದರೂ ಪಕ್ಷಪಾತ ಹೊಂದಿದ್ದರೆ, ಎಐ ಸಿಸ್ಟಮ್ ಸಹ ಪಕ್ಷಪಾತದ ಧೋರಣೆ ಹೊಂದಿರುತ್ತದೆ.


ಅಂತಿಮವಾಗಿ, ಭಾರತೀಯ ಪೊಲೀಸ್ ಇಲಾಖೆಯಲ್ಲಿ ಎಐಯನ್ನು ಬೇರೆ ಬೇರೆ ವಿಧಾನಗಳಲ್ಲಿ ಬಳಸುವ ಕುರಿತು ಪ್ರಯತ್ನಗಳು ನಡೆಯುತ್ತಿವೆ. ಕೃತಕ ಬುದ್ಧಿಮತ್ತೆ ಪೊಲೀಸರ ಕಾರ್ಯವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು, ಅಪರಾಧ ದರವನ್ನು ಕಡಿತಗೊಳಿಸಲು, ಕಾರ್ಯ ದಕ್ಷತೆಯನ್ನು ಹೆಚ್ಚಿಸಲು ಮತ್ತು ಖರ್ಚು ಕಡಿತಗೊಳಿಸಲು ಸಹಕಾರಿಯಾಗಿದೆ. ಆದರೆ ಕೃತಕ ಬುದ್ಧಿಮತ್ತೆಯನ್ನು ಅತ್ಯಂತ ಜಾಗರೂಕವಾಗಿ, ನಿಯಂತ್ರಿತ ಮತ್ತು ಮೇಲ್ವಿಚಾರಣೆ ಹೊಂದಿರುವ ರೀತಿಯಲ್ಲಿ, ನೈತಿಕ ಮಾರ್ಗದಲ್ಲಿ, ಯಾವ ಕಾರಣಕ್ಕೂ ನಾಗರಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗದ ರೀತಿಯಲ್ಲಿ ಉಪಯೋಗಿಸಬೇಕಿದೆ.


ಇದನ್ನೂ ಓದಿ : ಜಿಯೋ ಬಳಕೆದಾರರಿಗೆ ಭರ್ಜರಿ ಸುದ್ದಿ! ಅತ್ಯಂತ ಅಗ್ಗದ ರಿಚಾರ್ಜ್ ಪ್ಲಾನ್ ಪರಿಚಯಿಸಿದ ಕಂಪನಿ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.